ಮಂಗಳೂರು: ತುಳುನಾಡಿನ ದೈವರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ಅಮೃತಹಳ್ಳಿ ನಿವಾಸಿ ಶಿವರಾಜ್ ಹೆಚ್ ಕೆ (37) ಎಂದು ಗುರುತಿಸಲಾಗಿದೆ.
ಟ್ವೀಟ್ಟರ್ ನಲ್ಲಿ ನಕಲಿ ಖಾತೆಯ ಮೂಲಕ ತುಳುನಾಡಿನ ದೈವಾರಾಧನೆ ನಿಂದನೆ ಮತ್ತು ಮಹಿಳೆಯರ ಬಗ್ಗೆ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ ಬಗ್ಗೆ ತುಳುನಾಡಿನ ದೈವರಾಧಣೆ ಸಂರಕ್ಷಣಾ ಯುವ ವೇದಿಕೆ ದೂರು ನೀಡಿತ್ತು.
ಈ ಸಂಬಂಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರಂತೆ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
Advertisement