ಮಂಗಳೂರು: ಆನ್‌ಲೈನ್ ವಂಚನೆಯಿಂದ 1.16 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಅಡುಗೆ ಉದ್ಯಮಕ್ಕೆ ಬೇಕಾದ ಸಲಕರಣೆಗಳನ್ನು ಕಳುಹಿಸುವ ನೆಪದಲ್ಲಿ ಆನ್‌ಲೈನ್ ವಂಚಕನೊಬ್ಬ ವ್ಯಕ್ತಿಯೊಬ್ಬನಿಂದ 1.16 ಲಕ್ಷ ರೂಪಾಯಿ ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಅಡುಗೆ ಉದ್ಯಮಕ್ಕೆ ಬೇಕಾದ ಸಲಕರಣೆಗಳನ್ನು ಕಳುಹಿಸುವ ನೆಪದಲ್ಲಿ ಆನ್‌ಲೈನ್ ವಂಚಕನೊಬ್ಬ ವ್ಯಕ್ತಿಯೊಬ್ಬನಿಂದ 1.16 ಲಕ್ಷ ರೂಪಾಯಿ ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರರು ಜುಲೈ 15 ರಂದು ಬಿಗ್‌ಬಾಸ್ಕೆಟ್ ಅಪ್ಲಿಕೇಶನ್‌ನಲ್ಲಿ ಅಡುಗೆಗೆ ಬೇಕಾದ ಸಲಕರಣೆಗಳನ್ನು ನೋಡಿದ್ದರು. ನಂತರ, ಸಂತ್ರಸ್ತನೊಂದಿಗೆ ಆಪಾದಿತ ಬಿಗ್‌ಬಾಸ್ಕೆಟ್ ಫೇಸ್‌ಬುಕ್ ಖಾತೆದಾರರು ಚಾಟ್ ಮಾಡಿದ್ದರು.

ಅಪರಿಚಿತರು, ಸಂತ್ರಸ್ತರಿಗೆ ಕಡಿಮೆ ಬೆಲೆಗೆ ಅಡುಗೆ ಸಲಕರಣೆಗಳನ್ನು ಪೂರೈಸುವ ಭರವಸೆ ನೀಡಿದ್ದರು. ನಂತರ, ಅವರು ಬಿಗ್‌ಬಾಸ್ಕೆಟ್ ಹೆಸರಿನ ಫೇಸ್‌ಬುಕ್ ಲಿಂಕ್ ಅನ್ನು ಕಳುಹಿಸಿದರು ಮತ್ತು ದೂರುದಾರರಿಗೆ ತಮ್ಮ ವಿವರಗಳನ್ನು ನೀಡುವಂತೆ ಕೇಳಿದ್ದಾರೆ.

ವ್ಯಕ್ತಿ ತನ್ನ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿವರಗಳನ್ನು ನೀಡಿದ ನಂತರ, ಆತನ ಖಾತೆಯಿಂದ 1.16 ಲಕ್ಷ ರೂಪಾಯಿಗಳನ್ನು ಹಂತಹಂತವಾಗಿ ದೋಚಿದ್ದಾರೆ.

ಈ ಸಂಬಂಧ ಇಲ್ಲಿನ ಸೈಬರ್, ಎಕನಾಮಿಕ್ ಮತ್ತು ನಾರ್ಕೋಟಿಕ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com