ಕಾರ್ಮಿಕರು, ಸಲಕರಣೆಗಳ ಕೊರತೆ: ಕಾವೇರಿ 5ನೇ ಹಂತದ ಯೋಜನೆ ಮತ್ತಷ್ಟು ವಿಳಂಬ ಸಾಧ್ಯತೆ

ಕೊರೋನಾ ಸಾಂಕ್ರಾಮಿಕ ರೋಗದ ಬಳಿಕ ಕಾವೇರಿ 5ನೇ ಹಂತದ ಯೋಜನೆಗೆ ಇದೀಗ ಕಾರ್ಮಿಕರು ಹಾಗೂ ಸಲಕರಣೆಗಳ ಸಮಸ್ಯೆ ಎದುರಾಗಿದೆ.
ನಿರ್ಮಾಣ ಹಂತದಲ್ಲಿರುವ ತಾತಗುಣಿ ಪಂಪಿಂಗ್ ಸ್ಟೇಷನ್.
ನಿರ್ಮಾಣ ಹಂತದಲ್ಲಿರುವ ತಾತಗುಣಿ ಪಂಪಿಂಗ್ ಸ್ಟೇಷನ್.

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗದ ಬಳಿಕ ಕಾವೇರಿ 5ನೇ ಹಂತದ ಯೋಜನೆಗೆ ಇದೀಗ ಕಾರ್ಮಿಕರು ಹಾಗೂ ಸಲಕರಣೆಗಳ ಸಮಸ್ಯೆ ಎದುರಾಗಿದೆ.

ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯು ಯೋಜನೆಗೆ ರೂ 5,500-ಕೋಟಿ ಹಣವನ್ನು ನೀಡುತ್ತಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಮಹದೇವಪುರ, ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ ಮತ್ತು ಬೊಮ್ಮನಹಳ್ಳಿ ವ್ಯಾಪ್ತಿಯ 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆಯಾಗಲಿದೆ. ಆದರೀಗ ಯೋಜನೆ ಪೂರ್ಣಗೊಳಿಸಲು ಕಾರ್ಮಿಕರ ತೀವ್ರ ಕೊರತ ಎದುರಾಗಿದ್ದು, ಯುರೋಪ್‌ನಿಂದ ಉಪಕರಣಗಳು ತಡವಾಗಿ ಬರುತ್ತಿದೆ. ಹೀಗಾಗಿ ಯೋಜನೆ ಪೂರ್ಣಗೊಳ್ಳಲು ತಡವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನೀರಿಗಾಗಿ ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ನಿಂದ ವಾಜರಹಳ್ಳಿಯವರೆಗೆ 70 ಕಿಮೀ ವರೆಗೆ 3,000-ಎಂಎಂ ಗಾತ್ರದ ಪೈಪ್‌ಲೈನ್ ಗಳನ್ನು ಹಾಕುತ್ತಿದ್ದೇವೆ. ಇದರ ಕೆಲಸಗಳು ಶೇ.85ರಷ್ಟು ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗ್ರಾಮಗಳಿಗೆ ನೀರು ಹರಿಸಲು ಈಗಿರುವ ಪಂಪಿಂಗ್ ಸ್ಟೇಷನ್ ಪಕ್ಕದ ಟಿ.ಕೆ.ಹಳ್ಳಿ, ಹಾರೋಹಳ್ಳಿ, ತಾತಗುಣಿಯಲ್ಲಿ ಹೊಸ ಪಂಪಿಂಗ್ ಸ್ಟೇಷನ್ ನಿರ್ಮಿಸಬೇಕು. ಯೋಜನೆ ಕಾಮಗಾರಿಗೆ ಕಾರ್ಪೆಂಟರ್ ಮತ್ತು ಬಾರ್ ಬೆಂಡರ್‌ಗಳಂತಹ ಕಾರ್ಮಿಕರ ಅಗತ್ಯವಿದ್ದು, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರದಿಂದ ಕಾರ್ಮಿಕರನ್ನು ರಾಜ್ಯಕ್ಕೆ ಕರೆತರಬೇಕಾಗಿದೆ. ಹೀಗಾಗಿ ಸಮಸ್ಯೆಗಳು ಎದುರಾಗುತ್ತಿವೆ. ಸಾಂಕ್ರಾಮಿಕ ರೋಗ ಬಳಿಕ ಕಾರ್ಮಿಕರ ಸಮಸ್ಯೆ ಎದುರಾಗಿದೆ. ಶೇ.40-50ರಷ್ಟು ಕಾರ್ಮಿಕರ ಕೊರತೆಯಿದೆ. ಕಾಮಗಾರಿ ಕಾರ್ಯಗಳ ನಿರ್ವಹಿಸುವ ಗುತ್ತಿಗೆದಾರರು ಶೀಘ್ರದಲ್ಲೇ ಕಾರ್ಮಿಕರ ಕರೆತರಲು ತಮ್ಮ ಕೈಲಾದಷ್ಟು ಪ್ರಯತ್ನ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ.

ಇದಲ್ಲದೆ, ವಿವಿದೇಶಗಳಲ್ಲಿ ತಯಾರಾದ ಬಿಡಿ ಭಾಗಗಳು ರಾಜ್ಯ ತಲುಪುವುದು ವಿಳಂಬವಾಗುತ್ತಿದೆ. ಇತ್ತೀಚೆಗಷ್ಟೇ ಹೆಚ್ಚಿನ ಸಾಮರ್ಥ್ಯವಿರುವ ಪಂಪ್ ಗಳು ಮತ್ತು ಜಪಾನ್ ನಿಂದ ಮೋಟಾರ್ ಗಳು, ಟರ್ಕಿಯಿಂದ ಸ್ಲೂಸ್ ವಾಲ್ವ್ ಗಳನ್ನು ಬಂದಿವೆ. ಆಸ್ಟ್ರೇಲಿಯಾದಿಂದ ಪಂಪ್ ಮಾನಿಟರಿಂಗ್ ಸಿಸ್ಟಮ್‌ಗಳೂ ಕೂಡ ಬಂದಿವೆ. ಆದರೆ, ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಿಂದ ನೀರು ಶುದ್ಧೀಕರಣ ಮತ್ತು ಸೆನ್ಸಾರ್ ಗಳು ಇನ್ನು ಬಂದಿಲ್ಲ.

ಯೋಜನೆಗೆ ಒಂಬತ್ತು ವಿಭಿನ್ನ ಪ್ಯಾಕೇಜ್‌ಗಳೊಂದಿಗೆ ವಿಭಿನ್ನ ಗಡುವನ್ನು ನೀಡಲಾಗಿದೆ. 2020ರ ಅಂತ್ಯದ ವೇಳೆಗೆ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ. 2023ರ ಜುಲೈ ತಿಂಗಳಿಗೆ ಗಡುವು ಮುಕ್ತಾಯಗೊಳ್ಳಲಿದೆ. ಸಾಂಕ್ರಾಮಿಕ ರೋಗ ಮತ್ತು ಕಾರ್ಮಿಕರ ಕೊರತೆಯಿಂದಾಗಿ ಕೆಲಸಗಳು ವಿಳಂಬವಾಗಿದೆ. ಇತರೆ ಎಲ್ಲಾ ಯೋಜನೆಗಳಂತೆ ಈ ಯೋಜನೆಯ ಗಡುವನ್ನು ವಿಸ್ತರಿಸಲಿಸಲಾಗಿತ್ತು. ಇದೀಗ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲುವ ಆಶಾಭಾವನೆಯಲ್ಲಿದ್ದೇವೆಂದು ಹೇಳಿದ್ದಾರೆ.

ಪೈಪ್ ಲೈನ್ ಗಳ ಕಾರ್ಯ ಪೂರ್ಣಗೊಂಡಿದೆ. ಟಿ.ಕೆ.ಹಳ್ಳಿಯಲ್ಲಿ 775 ಎಂಎಲ್ ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ.

ಪ್ರದೇಶಗಳಲ್ಲಿನ ಎಲ್ಲಾ ವಿತರಣಾ ಪೈಪ್‌ಲೈನ್‌ಗಳನ್ನು ಹಾಕುವ ಕಾರ್ಯ ಪೂರ್ಣಗೊಂಡಿದೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ. ಟಿ.ಕೆ.ಹಳ್ಳಿಯಲ್ಲಿ 775 ಎಂಎಲ್ ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ಮತ್ತೊಬ್ಬ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com