ಬೆಂಗಳೂರು ಸರಣಿ ಸ್ಫೋಟ ಪ್ರಕರಣ: 15 ವರ್ಷಗಳ ನಂತರ ಕೇರಳದಲ್ಲಿ ಕುಟುಂಬಸ್ಥರನ್ನು ಭೇಟಿಯಾಗಲಿರುವ ಆರೋಪಿ! 

2008ರಲ್ಲಿ ನಡೆದ ಬೆಂಗಳೂರು ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 14 ವರ್ಷಗಳಿಂದ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅಬ್ದುಲ್ ಜಲೀಲ್‌ಗೆ ಈ ಬಾರಿಯ ಬಕ್ರೀದ್ ಹಬ್ಬವನ್ನು ಕೇರಳದ ಹುಟ್ಟೂರಿನಲ್ಲಿ ತನ್ನ ವಯೋವೃದ್ಧ ಪೋಷಕರು, ಪತ್ನಿ ಮತ್ತು ಮಗನೊಂದಿಗೆ ಆಚರಿಸುವ ಅವಕಾಶ ಸಿಕ್ಕಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: 2008ರಲ್ಲಿ ನಡೆದ ಬೆಂಗಳೂರು ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 14 ವರ್ಷಗಳಿಂದ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಅಬ್ದುಲ್ ಜಲೀಲ್‌ಗೆ ಈ ಬಾರಿಯ ಬಕ್ರೀದ್ ಹಬ್ಬವನ್ನು ಕೇರಳದ ಹುಟ್ಟೂರಿನಲ್ಲಿ ತನ್ನ ವಯೋವೃದ್ಧ ಪೋಷಕರು, ಪತ್ನಿ ಮತ್ತು ಮಗನೊಂದಿಗೆ ಆಚರಿಸುವ ಅವಕಾಶ ಸಿಕ್ಕಿದೆ.

14 ವರ್ಷಗಳ ನಂತರ ಕೇರಳದ ಎರ್ನಾಕುಲಂ ಜಿಲ್ಲೆಯ ಅಂಬಲಮೇಡುವಿನಲ್ಲಿ ತನ್ನ 75 ವರ್ಷದ ತಂದೆ, 64 ವರ್ಷದ ತಾಯಿ, ಪತ್ನಿ ಮತ್ತು 17 ವರ್ಷದ ಮಗನನ್ನು ಭೇಟಿಯಾಗಲು ಇದೇ ಮೊದಲ ಬಾರಿಗೆ ಆರೋಪಿ ಹೋಗುತ್ತಿದ್ದಾರೆ. ಆತ ಜೂನ್ 28 ರಿಂದ 30ರವರೆಗೆ ಮೂರು ದಿನಗಳ ಕಾಲ ತನ್ನ ಕುಟುಂಬದೊಂದಿಗೆ ಇರಲಿದ್ದಾರೆ. 2009ರ ಫೆಬ್ರುವರಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಜಲೀಲ್ ಅವರನ್ನು ಬಂಧಿಸಲಾಯಿತು.

ಎನ್ಐಎ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಗಂಗಾಧರ ಸಿಎಂ ಆದೇಶ ಹೊರಡಿಸಿದ್ದು, ಜಲೀಲ್ ಅವರಿಗೆ ತಮ್ಮ ಕುಟುಂಬವನ್ನು ಭೇಟಿಯಾಗಲು ಅನುಮತಿ ನೀಡಿದ್ದಾರೆ. ಕಳೆದ 15 ವರ್ಷಗಳಿಂದ ತನ್ನ ಮಗನನ್ನು ಭೇಟಿಯಾಗಿಲ್ಲ. ಮಗ ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಲು ಮತ್ತು ಮಗನ ಶಿಕ್ಷಣ, ಕುಟುಂಬ ಮತ್ತು ಪೋಷಕರ ಆರೋಗ್ಯದ ಬಗ್ಗೆ ಸೂಚನೆ ನೀಡಲು ಮತ್ತು ಜೂನ್‌ 29ರಂದು ಬಕ್ರೀದ್ ಆಚರಿಸಲು ಬಯಸುವುದಾಗಿ ಕೇಳಿಕೊಂಡಿದ್ದ ಆತನ ಮನವಿಯನ್ನು ನ್ಯಾಯಾಲಯ ಪರಿಗಣಿಸಿದೆ.

ಪ್ರಯಾಣದ ಅವಧಿಯನ್ನು ಹೊರತುಪಡಿಸಿ, ಮೂರು ದಿನಗಳ ಕಾಲ ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯೊಳಗೆ ಮಾತ್ರ ಆತ ಮನೆಗೆ ಭೇಟಿ ನೀಡಲು ಅವಕಾಶ ನೀಡಬೇಕು ಎಂಬ ಷರತ್ತಿಗೆ ಒಳಪಟ್ಟು, ಆರೋಪಿ ನಂ. 3 ಜಲೀಲ್‌ನನ್ನು ಆತನ ಸ್ವಂತ ವೆಚ್ಚದಲ್ಲಿ ಸೂಕ್ತ ಬೆಂಗಾವಲು ಸಹಿತ ಆತನ ಸ್ವಗ್ರಾಮಕ್ಕೆ ಕರೆದೊಯ್ಯುವಂತೆ ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. 

ಆರೋಪಿಯು ಪ್ರತಿದಿನ ರಾತ್ರಿ 9 ರಿಂದ ಬೆಳಿಗ್ಗೆ 9 ಗಂಟೆಯವರೆಗೆ ಅಂಬಲಮೇಡು ಪೊಲೀಸ್ ಠಾಣೆಯಲ್ಲಿ ಇರಬೇಕು ಮತ್ತು ಅವರ ಕುಟುಂಬವನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿಗಳನ್ನು ಭೇಟಿಯಾಗಲು ಅವಕಾಶ ನೀಡಬಾರದು ಎಂದು ನ್ಯಾಯಾಲಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com