ಶಕ್ತಿ ಯೋಜನೆ: ಆರ್ಥಿಕವಾಗಿ ಸದೃಢರಾಗಿರುವ ಮಹಿಳೆಯರಿಂದ ಟಿಕೆಟ್ ಖರೀದಿ, ಇತರರಿಗೆ ಮಾದರಿ!

ಕೊಟ್ಟ ಮಾತಿನಂತೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಕಂಡಕ್ಟರ್ ಒಬ್ಬರು ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುತ್ತಿರುವುದು.
ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಕಂಡಕ್ಟರ್ ಒಬ್ಬರು ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುತ್ತಿರುವುದು.

ಬೆಂಗಳೂರು: ಕೊಟ್ಟ ಮಾತಿನಂತೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಎಂದು ಸರ್ಕಾರ ಘೋಷಿಸಿದ್ದರೂ, ಆರ್ಥಿಕವಾಗಿ ಸದೃಢರಾಗಿರುವ ಕೆಲ ಮಹಿಳೆಯರು ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡುತ್ತಿದ್ದಾರೆ. ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಆರ್ಥಿಕವಾಗಿ ಉತ್ತಮವಾಗಿದ್ದೇವೆ. ಬಿಎಂಟಿಸಿ ಬಸ್‌ಗಳಲ್ಲಿ ನನ್ನ ಪ್ರಯಾಣಕ್ಕಾಗಿ ಪಾವತಿಸಲು ಶಕ್ತಳಾಗಿದ್ದೇನೆ. ಹೀಗಾಗಿಯ ಉಚಿತ ಪ್ರಯಾಣದ ಬದಲು, ಟಿಕೆಟ್ ಖರೀದಿ ಮಾಡಿ ಪ್ರಯಾಣಿಸುತ್ತಿದ್ದೇನೆ. ಇದಕ್ಕೆ ನನಗೆ ಹೆಮ್ಮೆಯಿದೆ. ಆರ್ಥಿಕವಾಗಿ ಸದೃಢರಾಗಿರುವ ಇತರರೂ ಕೂಡ ಉಚಿತ ಪ್ರಯಾಣವನ್ನು ತ್ಯಜಿಸಬೇಕು ಎಂದು ಹೆಸರು ಹೇಳಲು ಇಚ್ಛಿಸದ ಮಹಿಳಾ ಪ್ರಯಾಣಿಕರೊಬ್ಬರು ಹೇಳಿದ್ದಾರೆ.

ಬೆಂಗಳೂರು ಬಸ್ ಪ್ರಯಾಣಿಕ ವೇದಿಕೆ ಸದಸ್ಯೆ ಶಾಹೀನ್ ಶಾಸ ಮಾತನಾಡಿ, ಮಹಿಳೆಯರು ತಮ್ಮ ಪ್ರಯಾಣಕ್ಕೆ ಹಣ ಪಾವತಿಸಿ ಪ್ರಯಾಣಿಸಲು ಬಯಸಿದರೆ ಅದಕ್ಕೆ ಅವರಿಗೆ ಅವಕಾಶ ನೀಡಬೇಕು. ನಿಯಮಿತ ಟಿಕೆಟ್‌ಗಳನ್ನು ನೀಡಬೇಕು. ಯಾವುದೇ ಮಹಿಳೆ ಪಾವತಿಸಲು ಮತ್ತು ಪ್ರಯಾಣಿಸಲು ಬಯಸಿದ್ದೇ ಅದನ್ನು ತಡೆಯುವುದಿಲ್ಲ ಎಂದು ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಅಧಿಕಾರಿಗಳು ಮಾತನಾಡಿ, ಸ್ವಯಂಪ್ರೇರಿತರಾಗಿ ಮಹಿಳೆಯರು ಶುಲ್ಕ ಪಾವತಿಸಲು ಮುಂದಾದರೆ, ಅವರಿಗೆ ನಿಯಮಿತ ಟಿಕೆಟ್ ನೀಡುವಂತೆ ಕಂಡಕ್ಟರ್‌ಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ
ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಯೋಜನೆ ಜಾರಿಗೊಳ್ಳುತ್ತಿದ್ದಂತೆಯೇ ಈ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆಯಲ್ಲಿ ಗಣನೀಯ ಏರಿಕೆಗಳು ಕಂಡು ಬಂದಿದೆ.

ಯೋಜನೆ ಆರಂಭವಾದ ಮಾರನೇ ದಿನ ಅಂದರೆ ಜೂನ್ 13 ರಂದು ಎಲ್ಲಾ ನಾಲ್ಕು ಬಸ್ ನಿಗಮಗಳಾದ ಕೆಎಸ್ಆರ್'ಟಿಸಿ, ಬಿಎಂಟಿಸಿ, NWKSRTC ಮತ್ತು KKRTC ಗಳಲ್ಲಿ 51.52 ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆಂದು ತಿಳಿದುಬಂದಿದೆ.

ಜೂನ್ 13 ರಂದು ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯವು 10.82 ಕೋಟಿ ರೂ.ಗಳಾಗಿದ್ದು, ಕೆಎಸ್ಆರ್'ಟಿಸಿ ಒಂದರಲ್ಲೇ 4.12 ಕೋಟಿ ರೂ.ಗಳಾಗಿವೆ ಎಂದು ತಿಳಿದುಬಂದಿದೆ.

NWKSRTC ರೂ. 2.72 ಕೋಟಿ, ಬಿಎಂಟಿಸಿ ರೂ. 2.02 ಕೋಟಿ ಮತ್ತು ಕೆಕೆಆರ್ಟಿಸಿ ರೂ. 1.95 ಕೋಟಿಗಳಷ್ಟು ವೆಚ್ಚವಾಗಿದೆ.

ಬಿಎಂಟಿಸಿಯಲ್ಲಿ 20.56 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರೆ, ಕೆಎಸ್ಆರ್'ಟಿಸಿ 13.97 ಲಕ್ಷ, NWKSRTC 11.08 ಲಕ್ಷ ಮತ್ತು KKRTC 5.89 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com