ಗುರುಚರಣ್ ಸಮಿತಿ ವರದಿಯಂತೆ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ: ಅಧಿಕಾರಿಗಳು ಸ್ಪಷ್ಟನೆ

ಇಂಧನ ಕ್ಷೇತ್ರ ಸುಧಾರಿಸಲು ರಾಜ್ಯ ಬಜೆಟ್‌ನಲ್ಲಿ ಬಿಜೆಪಿ ಪ್ರಸ್ತಾಪಿಸಿದ ಗುರುಚರಣ್ ಸಮಿತಿಯ ವರದಿಯ ಭಾಗವಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರ ಏರಿಕೆಗೆ ಕ್ರಮ ತೆಗೆದುಕೊಂಡಿದೆ ಎಂದು ಸರ್ಕಾರ ದೊಂದಿಗೆ ಕೆಲಸ ಮಾಡುವ ತಜ್ಞರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಂಧನ ಕ್ಷೇತ್ರ ಸುಧಾರಿಸಲು ರಾಜ್ಯ ಬಜೆಟ್‌ನಲ್ಲಿ ಬಿಜೆಪಿ ಪ್ರಸ್ತಾಪಿಸಿದ ಗುರುಚರಣ್ ಸಮಿತಿಯ ವರದಿಯ ಭಾಗವಾಗಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರ ಏರಿಕೆಗೆ ಕ್ರಮ ತೆಗೆದುಕೊಂಡಿದೆ ಎಂದು ಸರ್ಕಾರ ದೊಂದಿಗೆ ಕೆಲಸ ಮಾಡುವ ತಜ್ಞರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯುತ್ ದರ ಏರಿಕೆಗಾಗಿ ನಾಗರಿಕರು ಮತ್ತು ಕೈಗಾರಿಕೆಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವಂತೆಯೇ, ವರದಿಯಿಂದ ರಾಜ್ಯದ ಬೊಕ್ಕಸವನ್ನು ಹಿಗ್ಗಿಸುವ ಮತ್ತು ಎಸ್ಕಾಮ್‌ಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೆಇಆರ್ ಸಿ ಮತ್ತು ಸರ್ಕಾರ ದರ ಹೆಚ್ಚಳ ಮಾಡಿವೆ ಹೊರತು ಗ್ರಾಹಕರಿಗಾಗಿ ಅಲ್ಲ ಎಂದು ತಜ್ಞರು ಹೇಳಿದ್ದಾರೆ.

ಪ್ರತಿ ಯೂನಿಟ್ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ನಿಗದಿತ ಶುಲ್ಕದ ವೆಚ್ಚವನ್ನು ಹೆಚ್ಚಿಸುವುದು ವರದಿಯಲ್ಲಿ ಸಲಹೆ ನೀಡಲಾಗಿತ್ತು. ಇದನ್ನು ಅಳವಡಿಸಲಾಗಿದೆ. ಅದರೊಂದಿಗೆ, ಘಟಕಗಳನ್ನು ವಿಭಜಿಸುವ ಸ್ಲ್ಯಾಬ್‌ಗಳನ್ನು ಸಹ ಕಡಿಮೆ ಮಾಡಲಾಗಿದೆ. ಇದು ಗ್ರಾಹಕರಿಗೆ, ವಿಶೇಷವಾಗಿ ಕೈಗಾರಿಕೆಗಳಿಗೆ ಹೆಚ್ಚಿನ ಹೊರೆ  ಸೃಷ್ಟಿಸಿದೆ ಎಂದು ಅವರು ತಿಳಿಸಿದ್ದಾರೆ. 

ಕೆಇಆರ್‌ಸಿ ಆಗಲಿ ಅಥವಾ ರಾಜ್ಯ ಸರಕಾರವಾಗಲಿ ಏರಿಕೆಯ ಹಿಂದಿನ ಕಾರಣಗಳನ್ನು ವಿವರಿಸಿಲ್ಲ. ಮತದಾನದ ಒಂದು ದಿನದ ನಂತರ ವಿದ್ಯುತ್ ದರ ಪರಿಷ್ಕರಣೆ ಕುರಿತು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವರದಿಯನ್ನು ಮೌಲ್ಯಮಾಪನ ಮಾಡಿ ಹಂತಹಂತವಾಗಿ ಅಳವಡಿಸಲಾಗುವುದು ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ, ಆದರೆ ಅದನ್ನು ಮಾಡಲಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. 

ಪ್ರಸರಣ ಮತ್ತು ವಿತರಣಾ ನಷ್ಟವನ್ನು ಕಡಿಮೆ ಮಾಡಲು ಮತ್ತು ಆರ್ಥಿಕತೆಯನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಮಿತಿಯು ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಅಂಶಗಳನ್ನು ಇನ್ನೂ ಚರ್ಚಿಸಲಾಗುತ್ತಿದೆ. “ಗುರುಚರಣ್ ಸಮಿತಿ ವರದಿಯ ಅನುಷ್ಠಾನವನ್ನು ಹಂತ ಹಂತವಾಗಿ ಮಾಡಬೇಕಿತ್ತು. ಪ್ರತಿ ಯೂನಿಟ್ ದರವನ್ನು ಹೆಚ್ಚಿಸುವಾಗ, ಹಳೆಯ ಮಾದರಿಯಲ್ಲಿ ಹಳೆಯ ಸುಂಕದ ಸ್ವರೂಪವನ್ನು ಅನುಸರಿಸಲು ಸೂಚಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನಷ್ಟವನ್ನು ನಿಭಾಯಿಸಲು ವಿದ್ಯುತ್ ದರ ಹೆಚ್ಚಳ ಮಾಡಬೇಕೆಂಬ ಎಸ್ಕಾಮ್‌ಗಳ ಬೇಡಿಕೆಯನ್ನು ಸಹ ಇದು ಪರಿಗಣಿಸಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಕೆಇಆರ್‌ಸಿ ಆದೇಶವನ್ನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಬಹುದು, ಆದರೆ ಹಲವು ಪ್ರಕರಣಗಳು ಬಾಕಿ ಉಳಿದಿರುವುದರಿಂದ ಅಂತಿಮ ನಿರ್ಧಾರ ಹೊರಬೀಳಲು ಸಮಯ ತೆಗೆದುಕೊಳ್ಳುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com