ಬೆಂಗಳೂರು: ಬೆಳ್ಳೂರಿನ ಚರ್ಚ್ ಆವರಣವನ್ನು ಧ್ವಂಸಗೊಳಿಸಿದ ಭಗ್ನ ಪ್ರೇಮಿ ಬಂಧನ

ಬೆಳ್ಳೂರಿನ ಚರ್ಚ್ ಆವರಣವನ್ನು ಧ್ವಂಸಗೊಳಿಸಿದ್ದ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಬಾಣಸವಾಡಿ ಪೊಲೀಸರು ಇಂದು ಭಗ್ನ ಪ್ರೇಮಿಯೊಬ್ಬನನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಳ್ಳೂರಿನ ಚರ್ಚ್ ಆವರಣವನ್ನು ಧ್ವಂಸಗೊಳಿಸಿದ್ದ ಆರೋಪ ಹಿನ್ನೆಲೆಯಲ್ಲಿ ಬೆಂಗಳೂರಿನ ಬಾಣಸವಾಡಿ ಪೊಲೀಸರು ಇಂದು ಭಗ್ನ ಪ್ರೇಮಿಯೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು 30 ವರ್ಷದ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಕಮ್ಮನಹಳ್ಳಿ ಚರ್ಚ್‌ನಲ್ಲಿ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಚರ್ಚ್ ಆವರಣದಲ್ಲಿದ್ದ ಮಡಿಕೆ, ಪೀಠೋಪಕರಣ ಮತ್ತಿತರ ವಸ್ತುಗಳನ್ನು ಒಡೆದು ಹಾಕಿದ್ದನು. ಪ್ರಾಥಮಿಕ ತನಿಖೆಯಿಂದ ಆರೋಪಿ ಭಗ್ನ ಪ್ರೇಮಿ ಎಂದು ತಿಳಿದುಬಂದಿದೆ.

ಆರೋಪಿ ನಾನು ದೇವರು, ನನ್ನ ತಂದೆಯೂ ದೇವರು ಎಂದು ಹೇಳಿಕೊಂಡಿದ್ದಾನೆ. ಯಾಕೆ ಹೀಗೆ ಮಾಡಿದೆ ಎಂದು ಪೊಲೀಸರು ಪ್ರಶ್ನಿಸಿದಾಗ ತಾನೂ ದೇವರು ಎಂಬ ಕಾರಣಕ್ಕೆ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿದ್ದಾನೆ. ಚರ್ಚ್‌ನಲ್ಲಿ ಮಗನ ಧ್ವಂಸ ಕೃತ್ಯದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಆರೋಪಿಯ ತಾಯಿಯಿಂದ ಪೊಲೀಸರು ಮಾಹಿತಿ ಪಡೆದಿದ್ದಾರೆ.

ಮ್ಯಾಥ್ಯೂ ಕೇರಳದವನಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಯಾವುದೇ ಕೆಲಸಕ್ಕೆ ಹೋಗದೆ ಅಡ್ಡಾದಿಡ್ಡಿಯಾಗಿ ಓಡಾಡಿಕೊಂಡಿದ್ದನು. ಪ್ರೀತಿ ವೈಫಲ್ಯದ ನಂತರ ಆತ ಅಸಡ್ಡೆ ಬೆಳೆಸಿಕೊಂಡಿದ್ದನು. ಇನ್ನು ಮನೆಯಲ್ಲಿ ದೇವರನ್ನು ಇರಿಸಿದಾಗ ಚರ್ಚ್‌ಗೆ ಭೇಟಿ ನೀಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದನು ಎಂದು ಆರೋಪಿ ತಾಯಿ ಹೇಳಿದ್ದಾರೆ.

ಪೊಲೀಸರು ಆರೋಪಿಯ ಮಾನಸಿಕ ಸ್ಥೈರ್ಯವನ್ನು ಪರಿಶೀಲಿಸುತ್ತಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com