ಸಂಚಾರ ದಟ್ಟಣೆ: ಬೆಂಗಳೂರಿನಲ್ಲಿ ಸಿಬಿಎಸ್ಇ ಪರೀಕ್ಷಾ ಸಮಯ ಬದಲಾವಣೆಗೆ ಆಗ್ರಹ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಧ್ಯಯನ ಮತ್ತು ಪರೀಕ್ಷೆಯ ಒತ್ತಡದ ಜೊತೆಗೆ, ಕೈಯಲ್ಲೊಂದು ಹೊಸ ಸವಾಲು ಇದೆ. ಅದುವೇ ಬೆಂಗಳೂರಿನ ಟ್ರಾಫಿಕ್ ಜಾಮ್. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಅಧ್ಯಯನ ಮತ್ತು ಪರೀಕ್ಷೆಯ ಒತ್ತಡದ ಜೊತೆಗೆ, ಕೈಯಲ್ಲೊಂದು ಹೊಸ ಸವಾಲು ಇದೆ. ಅದುವೇ ಬೆಂಗಳೂರಿನ ಟ್ರಾಫಿಕ್ ಜಾಮ್. 

ನವೀನ್ ಕೆ (ಹೆಸರು ಬದಲಾಯಿಸಲಾಗಿದೆ) ಪೋಷಕರು ಮಾತನಾಡಿ, 'ನನ್ನ ಮಗನ ಪರೀಕ್ಷಾ  ಕೇಂದ್ರವು ಲುಂಬಿನಿ ಗಾರ್ಡನ್ಸ್‌ನಲ್ಲಿದೆ ಮತ್ತು ನಮ್ಮ ಮನೆ ರಾಜಾಜಿನಗರದಲ್ಲಿದೆ. ಆತ ಸಮಯಕ್ಕೆ ಸರಿಯಾಗಿ (ಬೆಳಿಗ್ಗೆ 10 ಗಂಟೆಗೆ) ತಲುಪಲು, ಟ್ರಾಫಿಕ್ ಅನ್ನು ತಪ್ಪಿಸಲು ನಾವು ಬೆಳಿಗ್ಗೆ 7 ಗಂಟೆಗೆ ಮನೆಯಿಂದ ಹೊರಡಬೇಕು. ನಾನು ತೀವ್ರ ಒತ್ತಡದಲ್ಲಿದ್ದೇನೆ. ಸಮಯಕ್ಕೆ ಸರಿಯಾಗಿ ತಲುಪುತ್ತೇನೋ, ಇಲ್ಲವೋ ಎಂಬ ಆತಂಕದಲ್ಲಿ ನನ್ನ ಮಗನೂ ಒತ್ತಡಕ್ಕೊಳಗಾಗಿದ್ದಾನೆ. ಪರೀಕ್ಷೆಯ ಸಮಯವನ್ನು ಬದಲಾಯಿಸಿದರೆ ಉತ್ತಮ' ಎಂದು ಹೇಳುತ್ತಾರೆ.

ಯಶಿಕಾ ಕೆ (ಹೆಸರು ಬದಲಾಯಿಸಲಾಗಿದೆ) ಪೋಷಕರ ಚಿಂತೆಯೂ ಇದೇ ಆಗಿದೆ. ಟ್ರಾಫಿಕ್ ಪರಿಸ್ಥಿತಿಯಿಂದಾಗಿ ತನ್ನ ಮಗ ಪರೀಕ್ಷಾ ಕೇಂದ್ರಕ್ಕೆ ಐದು ನಿಮಿಷ ತಡವಾಗಿ ಬಂದಿದ್ದಾನೆ. ಪರೀಕ್ಷೆ ಬರೆಯಲು ಅನುಮತಿ ನೀಡಿದರೂ ಸಹ ಕಠಿಣ ಎಚ್ಚರಿಕೆ ನೀಡಿದ್ದಾರೆ ಎಂದರು.

ಟ್ರಾಫಿಕ್ ಕಿರಿಕಿರಿಯಿಂದಾಗಿ ಪೋಷಕರು ಈಗ ಸಿಬಿಎಸ್‌ಇ ಕಚೇರಿಗೆ ಕರೆಗಳನ್ನು ಮಾಡಲು ಪ್ರಾರಂಭಿಸಿದ್ದಾರೆ ಮತ್ತು ಪರೀಕ್ಷೆಯ ಸಮಯದಲ್ಲಿ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆದಾಗ್ಯೂ, ಬೆಂಗಳೂರಿನ ಸಿಬಿಎಸ್‌ಇ ಪ್ರಾದೇಶಿಕ ಕಚೇರಿಯು ಸಿಬಿಎಸ್‌ಇ-ಸಂಯೋಜಿತ ಶಾಲೆಗಳ ಪ್ರಾಂಶುಪಾಲರಿಗೆ ಇಮೇಲ್ ಕಳುಹಿಸಿದೆ. ಶಿಕ್ಷಣ ಸಂಸ್ಥೆಗಳು ಎಲ್ಲಾ ಪೋಷಕರಿಗೆ ಪತ್ರವನ್ನು ಇಮೇಲ್ ಮಾಡಿದೆ.

ಪತ್ರದಲ್ಲಿ ಏನು ಹೇಳಲಾಗಿದೆ?: 'ಸಿಬಿಎಸ್‌ಇ ಬೋರ್ಡ್ ಪರೀಕ್ಷೆ ನಡೆಯುತ್ತಿರುವುದರಿಂದ, ಆಯಾ ಕೇಂದ್ರಗಳಲ್ಲಿ ನಿಗದಿತ ಸಮಯದ ನಂತರ ಹಾಜರಾಗಲು ವಿದ್ಯಾರ್ಥಿಗಳು ತಡವಾಗಿ ಬರುತ್ತಿರುವ ಬಗ್ಗೆ ಕಚೇರಿಗೆ ದೂರವಾಣಿ ಕರೆಗಳು ಬರುತ್ತಿವೆ. ಬೆಳಿಗ್ಗೆ 10 ಗಂಟೆಯ ನಂತರ ಯಾವುದೇ ಅಭ್ಯರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಬಿಡುವುದಿಲ್ಲ. ಆದ್ದರಿಂದ ಸಮಯಕ್ಕೆ ಮುಂಚಿತವಾಗಿ ತಲುಪಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಸಮಯದ ವೇಳಾಪಟ್ಟಿಯ ಬಗ್ಗೆ ವಿದ್ಯಾರ್ಥಿಗಳು/ಪೋಷಕರಿಗೆ ತಿಳಿಸಲು ನಿಮಗೆ ವಿನಂತಿಸಲಾಗುತ್ತಿದೆ ಮತ್ತು ಅದಕ್ಕೆ ಅನುಗುಣವಾಗಿ ಪರೀಕ್ಷಾ ಕೇಂದ್ರಗಳನ್ನು ಸಮಯಕ್ಕೆ ಸರಿಯಾಗಿ ತಲುಪಲು ಅವರಿಗೆ ನಿರ್ದೇಶಿಸಬಹುದು. ತಡವಾಗಿ ಆಗಮಿಸುವುದರಿಂದ ಅಭ್ಯರ್ಥಿಗೆ ಉಂಟಾಗುವ ಯಾವುದೇ ಅನಾನುಕೂಲತೆಗೆ ಮಂಡಳಿಯು ಜವಾಬ್ದಾರನಾಗಿರುವುದಿಲ್ಲ' ಎಂದು ಹೇಳಿದೆ.

ಪೋಷಕರಾದ ವಿಭಾ ಎಸ್ ಮಾತನಾಡಿ, 'ಕೆಲವು ವಿದ್ಯಾರ್ಥಿಗಳ ಪೋಷಕರು ಟ್ರಾಫಿಕ್ ಒತ್ತಡವನ್ನು ನಿವಾರಿಸಲು ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಇದು ನಿಂತುಹೋಯಿತು ಮತ್ತು ಸಾಂಕ್ರಾಮಿಕದ ನಂತರ ಉತ್ತಮ ಟ್ರಾಫಿಕ್ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರುವುದರೊಂದಿಗೆ ಪರಿಸ್ಥಿತಿ ಬದಲಾಗಿದೆ ಎಂದು ನಾನು ಭಾವಿಸಿದ್ದೆ. ಆದರೆ, ಅದು ನಿಜವಲ್ಲ. ಪೀಕ್ ಸಮಯದಲ್ಲಿ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ.  ಈಗ, ಪೀಕ್ ಅವರ್‌ಗಳಲ್ಲಿ ದೂರದ ಪ್ರಯಾಣವು ಸವಾಲಿನದ್ದಾಗಿರುವುದರಿಂದ ನಾನು ಲಾಡ್ಜ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಲು ಯೋಜಿಸುತ್ತಿದ್ದೇನೆ' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com