ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವೈರ್, ಕೂದಲೆಳೆ ಅಂತರದಲ್ಲಿ ಚಾಲಕ ಪಾರು!

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವೈರ್ ಬಿದ್ದು ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕಾರಿನ ಮೇಲೆ ಬಿದ್ದ ವೈರ್
ಕಾರಿನ ಮೇಲೆ ಬಿದ್ದ ವೈರ್

ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವೈರ್ ಬಿದ್ದು ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ಚಲಾವಣೆ ಎಂದರೆ ಸಾಹಸವೇ ಸರಿ... ಒಂದೆಡೆ ಟ್ರಾಫಿಕ್, ನಿರ್ಲಕ್ಷಿತವಾಗಿ ಕುಡಿದು ಚಾಲನೆ ಮಾಡುವ ಮಂದಿ, ಮತ್ತೊಂದೆಡೆ ರಸ್ತೆಗುಂಡಿ.. ಇಷ್ಟೆಲ್ಲ ಸಮಸ್ಯೆಗಳ ನಡುವೆಯೇ ವಾಹನ ಚಾಲನೆ ಮಾಡಿಕೊಂಡು ಮನೆ ಸೇರುವುದು ಸಾಹಸವೇ ಸರಿ..

ಈ ಹಿಂದೆ ಮೆಟ್ರೊ ನಿರ್ಮಾಣ ಸಾಮಗ್ರಿಗಳು ಬಿದ್ದು ಈಗಾಗಲೇ ಸಾಕಷ್ಟು ಅವಘಡಗಳು ಸಂಭವಿಸಿವೆ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಚಲಿಸುತ್ತಿದ್ದ ಕಾರಿನ ಮೇಲೆ ವೈರ್ ಬಿದ್ದು ಕಾರಿನಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ವರದಿಯಾಗಿದೆ. ನಗರದ ಈಜಿಪುರದಲ್ಲಿ ಬಿಬಿಎಂಪಿ ಕಾಮಗಾರಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಚಾಲಕನ ಮುಂಜಾಗರೂಕತೆಯಿಂದ ಆಗಬಹುದಾಗಿದ್ದ ದುರಂತ ತಪ್ಪಿದೆ.

ಫಿಲಿಪ್‌ ಅಬ್ರಹ್ಮಾಂ ಎಂಬುವವರು ತಮ್ಮ ಕಾರಿನಲ್ಲಿ ಚಲಿಸುತ್ತಿದ್ದರು. ಬಿಬಿಎಂಪಿ ಕಾಮಗಾರಿ ನಡೆಯುತ್ತಿದ್ದು, ಕಿರಿದಾದ ರಸ್ತೆಯಲ್ಲಿ ಕಾರು ಚಲಿಸುತ್ತಿತ್ತು. ಚಾಲನೆ ವೇಳೆಯಲ್ಲಿಯೇ ಒಂದಷ್ಟು ವೈರ್‌ಗಳು ಒಂದು ಅವರ ಕಾರಿಗೆ ಅಡ್ಡಲಾಗಿ ಬೀಳುತ್ತದೆ. ಅದನ್ನು ನಿರ್ಲಕ್ಷಿಸಿ ಕಾರನ್ನು ಮುಂದೆ ಚಲಿಸಿದ್ದರೆ ಕಾರು ಪಲ್ಟಿಯಾಗಿ ಬೀಳುವ ಅಪಾಯ ಹೆಚ್ಚಿತ್ತು. ತಕ್ಷಣ ಎಚ್ಚೆತ್ತ ಫಿಲಿಫ್‌ ಬ್ರೇಕ್‌ ಹಿಡಿದು ಕಾರನ್ನು ನಿಲ್ಲಿಸುತ್ತಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಫಿಲಿಪ್‌, ಕಾರು ಚಲಿಸುವ ವೇಳೆ ವೈರ್‌ ಕಾರಿನ ಮೇಲೆ ಬೀಳುವ ವಿಡಿಯೊವನ್ನು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

 ‘ಸಾವಿನ ಕರೆಯಿಂದ ಪಾರಾಗಿರುವೆ. ಚಾಲನೆ ವೇಳೆ ದೂರವಾಣಿ ವೈರ್‌ ಕಾರಿನ ಮೇಲೆ ಬಿದ್ದಿದೆ. ಗಾಬರಿಗೊಂಡೆ. ಆದರೆ ಸಮಯ ಪ್ರಜ್ಞೆಯಿಂದ ಬ್ರೇಕ್ ಹಿಡಿದು ಪ್ರಾಣ ಉಳಿಸಿಕೊಂಡೆ’ ಎಂದು ಬರೆದುಕೊಂಡಿದ್ದಾರೆ. 

ಕಾರನ್ನು ನಿಲ್ಲಿಸಿದ ಫಿಲಿಪ್‌ ಉಳಿದ ಚಾಲಕರ ಸಹಕಾರದಿಂದ ವೈರ್‌ ಅನ್ನು ಬದಿಗೆ ಕಟ್ಟಿ ಸುರಕ್ಷಿತ ಚಾಲನೆಗೆ ಅನುವು ಮಾಡಿಕೊಟ್ಟಿದ್ದಾರೆ. ಆದಾಗ್ಯೂ ಇಂಥ ಅವಘಡಗಳಿಂದ ಎಚ್ಚರ ವಹಿಸುವಂತೆ ಅವರು ಟ್ವಿಟ್ಟರ್‌ನಲ್ಲಿ ಬೆಂಗಳೂರು ಟ್ರಾಫಿಕ್‌ ಪೊಲೀಸರನ್ನು ಟ್ಯಾಗ್‌ ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com