ಬೆಂಗಳೂರಿನಲ್ಲಿ ಮತ್ತೊಂದು ಮೆಟ್ರೋ ಅಪಘಾತ: ಕಬ್ಬಿಣದ ತುಂಡು ಬಿದ್ದು ಕಾರು ಜಖಂ

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಅಪಘಾತಗಳ ಸರಣಿ ಮುಂದುವರೆದಿದ್ದು, ಮೆಟ್ರೋ ನಿಲ್ದಾಣದ ಮೇಲಿಂದ ಕಬ್ಬಿಣದ ಸರಳು ಬಿದ್ದು ಕಾರು ಜಖಂಗೊಂಡಿರುವ ಘಟನೆ ವರದಿಯಾಗಿದೆ.
ಮೆಟ್ರೋ ಅಪಘಾತ
ಮೆಟ್ರೋ ಅಪಘಾತ

ಬೆಂಗಳೂರು: ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ರೈಲು ಅಪಘಾತಗಳ ಸರಣಿ ಮುಂದುವರೆದಿದ್ದು, ಮೆಟ್ರೋ ನಿಲ್ದಾಣದ ಮೇಲಿಂದ ಕಬ್ಬಿಣದ ಸರಳು ಬಿದ್ದು ಕಾರು ಜಖಂಗೊಂಡಿರುವ ಘಟನೆ ವರದಿಯಾಗಿದೆ.

ಸ್ಯಾಂಡಲ್ ಸೋಪ್ ಪ್ಯಾಕ್ಟರಿ ಬಳಿಯ ಮೇಟ್ರೋ ನಿಲ್ದಾಣದ ಕೆಳ ಭಾಗದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋದ ಕಬ್ಬಿಣದ ತುಂಡು ಬಿದ್ದಿದೆ. ಪರಿಣಾಮ ಕಾರಿನ ಬಾನೆಟ್ ಹಾಗೂ ಗಾಜು ಜಖಂ ಆಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಮೆಟ್ರೋದ ಕಬ್ಬಿಣದ ರಾಡ್ ಕಾರಿನ ಮೇಲೆ ಬಿದ್ದಿದ್ದರಿಂದ ಮಾಲೀಕ ರಿತೇಶ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಮಗೆ ಆದ ನಷ್ಟವನ್ನು ತುಂಬಿಕೊಟ್ಟು, ಮೇಟ್ರೋ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. 

ಕಳೆದ ತಿಂಗಳವಷ್ಟೇ ನಾಗವಾರ ಸಮೀಪ ಮೆಟ್ರೋ ಪಿಲ್ಲರ್ ನಿರ್ಮಾಣಕ್ಕಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಚೌಕಟ್ಟು ಕುಸಿದು ತಾಯಿ-ಮಗು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು ದೊಡ್ಡ ಅನಾಹುತವೇ ತಪ್ಪಿದೆ ಎಂದು ಹೇಳಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com