ರದ್ದುಗೊಳಿಸಿದ ಸೇವೆ ದೃಢೀಕರಿಸಿ, ದೂರುದಾರನಿಗೆ 45 ಲಕ್ಷ ರೂ. ಪಾವತಿಸುವಂತೆ ಟಿಟಿಡಿ ಟ್ರಸ್ಟ್‌ಗೆ ಸೂಚನೆ

ಒಂದು ದಶಕದ ಹಿಂದೆ ನಗರದ ಭಕ್ತರೊಬ್ಬರು ಸೇವೆಗಾಗಿ ಮುಂಗಡವಾಗಿ ಬುಕ್ ಮಾಡಿದ ಟಿಕೆಟ್‌ಗಳನ್ನು ರದ್ದುಗೊಳಿಸಿರುವುದು ದೇವರ ಕಾರ್ಯವಾಗಿದೆ ಟಿಟಿಡಿ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ
ಟಿಟಿಡಿ ಟ್ರಸ್ಟ್ ಬೋರ್ಡ್ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ

ಬೆಂಗಳೂರು: ಒಂದು ದಶಕದ ಹಿಂದೆ ನಗರದ ಭಕ್ತರೊಬ್ಬರು ಸೇವೆಗಾಗಿ ಮುಂಗಡವಾಗಿ ಬುಕ್ ಮಾಡಿದ ಟಿಕೆಟ್‌ಗಳನ್ನು ರದ್ದುಗೊಳಿಸಿರುವುದು ದೇವರ ಕಾರ್ಯವಾಗಿದೆ ಟಿಟಿಡಿ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಸ್ಟ್‌ನ ಸೇವೆಯ ಕೊರತೆ ಮತ್ತು ಅನ್ಯಾಯದ ವ್ಯಾಪಾರ ಅಭ್ಯಾಸವನ್ನು ಖಂಡಿಸಿ, ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ರದ್ದತಿ ನೋಟಿಸ್‌ಗಳನ್ನು ಹಿಂತೆಗೆದುಕೊಳ್ಳುವ ಮೂಲಕ ದೂರುದಾರರ ಸೇವಾ ಟಿಕೆಟ್‌ಗಳನ್ನು ದೃಢೀಕರಿಸುವಂತೆ ಶ್ರೀವಾರಿ ದೇವಸ್ಥಾನದ ಅಧಿಕಾರಿಗಳಿಗೆ ಸೂಚಿಸಿದೆ.

ಒಂದು ವರ್ಷದೊಳಗೆ ಲಭ್ಯವಿರುವ ದಿನಾಂಕಗಳಲ್ಲಿ ಸೇವಾ ಟಿಕೆಟ್‌ಗಳನ್ನು ಹಂಚಿಕೆ ಮಾಡಲು ಮತ್ತು ದೂರುದಾರರ ಕುಟುಂಬ ಸದಸ್ಯರಿಗೆ ಮಾನಸಿಕ ಸಂಕಟ, ನಿರಾಶೆ ಮತ್ತು ಆರ್ಥಿಕ ನಷ್ಟಕ್ಕೆ 45 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ ಟಿಟಿಡಿ ಅಧಿಕಾರಿಗಳಿಗೆ ಆಯೋಗವು ಸೂಚಿಸಿದೆ. ದೂರುದಾರರಾದ ಮಲ್ಲೇಶ್ವರಂ ನಿವಾಸಿ ಜೆ. ಚಂದ್ರಶೇಖರ್ ಅವರು ಸೇವೆಗಳಿಗಾಗಿ ಪಾವತಿಸಿದ 8,200 ರೂ.ಗಳಿಗೆ ಹೆಚ್ಚುವರಿಯಾಗಿ ಮರುಪಾವತಿಗೆ ತಿಳಿಸಿದೆ.

ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯರಾದ ಎನ್.ಜ್ಯೋತಿ ಮತ್ತು ಸುಮಾ ಅನಿಲ್ ಕುಮಾರ್ ಅವರನ್ನೊಳಗೊಂಡ ಆಯೋಗವು, ತಾನು ಒದಗಿಸುವ ಸೌಲಭ್ಯಗಳು ಸೇವೆಯಲ್ಲದ ಕಾರಣ ದೂರುದಾರರು ಗ್ರಾಹಕರಲ್ಲ ಎಂಬ ಟಿಟಿಡಿ ಟ್ರಸ್ಟ್ ವಾದವನ್ನು ತಿರಸ್ಕರಿಸಿತು.

ಕಡಿಮೆ ಸಂಬಳ ಪಡೆಯುತ್ತಿರುವ ಖಾಸಗಿ ಉದ್ಯೋಗಿಯಾಗಿರುವ ಚಂದ್ರಶೇಖರ್ ಅವರು ತಮ್ಮ ವಯಸ್ಸಾದ ಪೋಷಕರು ಮತ್ತು ಕುಟುಂಬ ಸದಸ್ಯರನ್ನು ತಿರುಪತಿಗೆ ಕರೆದೊಯ್ಯಲು ಉತ್ಸುಕರಾಗಿದ್ದರು. ಅವರು ಸೇವೆಗಾಗಿ 2006 ಮತ್ತು 2008ರ ಬುಕ್ ಮಾಡಿದ್ದರು. 2021ರ ಏಪ್ರಿಲ್ 16 ರಂದು ಪೂರಾಭಿಷೇಕಕ್ಕಾಗಿ ಮತ್ತು 2020ರ ಮಾರ್ಚ್ 4 ಮತ್ತು 20 ಪೂರಾಭಿಷೇಕಕ್ಕಾಗಿ, 2020ರ ಜುಲೈ 8 ರಂದು ತೋಮಲಸೇವೆಗಾಗಿ ಮತ್ತು 2021ರ ಆಗಸ್ಟ್ 10ರಂದು ಅರ್ಚನೆಗಾಗಿ ನಗರದ ಟ್ರಸ್ಟ್ ಕಚೇರಿಯಲ್ಲಿ ಸೇವೆಗಾಗಿ ಟಿಕೆಟ್ ಕಾಯ್ದಿರಿಸಿದ್ದಾರೆ.

ಕೋವಿಡ್‌ನಿಂದಾಗಿ ಬುಕ್ಕಿಂಗ್‌ಗಳನ್ನು ರದ್ದುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಟಿಕೆಟ್ ಹಂಚಿಕೆ ಮಾಡುವಂತೆ ಟಿಟಿಡಿಗೆ ಮನವಿ ಮಾಡಿದರು. ಬದಲಾಗಿ, ಟಿಟಿಡಿ ಅಧಿಕಾರಿಗಳು ಹಣವನ್ನು ಹಿಂಪಡೆಯುವಂತೆ ಅಥವಾ ವಿಐಪಿ ಬ್ರೇಕ್ ದರ್ಶನಕ್ಕೆ ಹೋಗುವಂತೆ ತಿಳಿಸಿದ್ದಾರೆ. ಇದರಿಂದ ಬೇಸತ್ತ ಅವರು ಆಯೋಗದ ಮೊರೆ ಹೋಗಿದ್ದರು.

ದೇವರು ಮತ್ತು ಭಕ್ತನ ನಡುವಿನ ಸಂಬಂಧವು ಸಂಪೂರ್ಣವಾಗಿ ದೈವಿಕವಾಗಿದೆ ಎಂದು ಟ್ರಸ್ಟ್ ವಾದಿಸಿದೆ. ಸೇವಾ ಟಿಕೆಟ್‌ಗಳನ್ನು 2050ರವರೆಗೆ ಕಾಯ್ದಿರಿಸಲಾಗಿರುವುದರಿಂದ ದೂರುದಾರರ ಮನವಿಯನ್ನು ಪರಿಗಣಿಸಿಲಾಗಿಲ್ಲ ಎಂದು ಅದು ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com