ಬೆಂಗಳೂರು: ಚೀನಾ ಮೂಲದ ಆ್ಯಪ್ ಕಂಪನಿಗಳಿಗೆ ಸೇರಿದ 106 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 106 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಸಂಸ್ಥೆ ಬುಧವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ದಂಡ ಸಂಹಿತೆ, ಕರ್ನಾಟಕ ಲೇವಾದೇವಿದಾರರ ಕಾಯಿದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಹಲವಾರು ಘಟಕಗಳು/ವ್ಯಕ್ತಿಗಳ ವಿರುದ್ಧ ಕರ್ನಾಟಕ ನಿಷೇಧ ಕಾಯ್ದೆಯಡಿಯಲ್ಲಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆ ದಾಖಲಿಸಿರುವ ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ತನಿಖೆ ಆರಂಭಿಸಿದೆ.
ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಸಣ್ಣ ಸಾಲಗಳನ್ನು ಪಡೆದ ಸಾರ್ವಜನಿಕರನ್ನು ಸುಲಿಗೆ ಮತ್ತು ಕಿರುಕುಳ ನೀಡಿದ ಆರೋಪ ಈ ಆ್ಯಪ್ ಗಳ ವಿರುದ್ಧ ಕೇಳಿ ಬಂದಿದೆ.
ಚೀನಾ ಮೂಲದ ಆ್ಯಪ್ ಕಂಪನಿ ಮಾಲೀಕರು, ಆ್ಯಪ್‌ಗಳ ನಿರ್ದೇಶಕರನ್ನಾಗಿ ಭಾರತ ಮೂಲದ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದಾರೆ. ಜೊತೆಗೆ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಕೆವೈಸಿ ಪಡೆದುಕೊಂಡಿದ್ದಾರೆ. ಜತೆಗೆ ಅವರ ಹೆಸರಿನಲ್ಲಿಯೇ ಭಾರತದಲ್ಲಿ ಶಾಖೆಗಳನ್ನು ತೆರೆದು, ಸಾಲ ನೀಡಿ ಇಲ್ಲಿನ ಜನರಿಗೆ ವಂಚಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ವೇಳೆ ಅಕ್ರಮ ಹಣ ವಹಿವಾಟ ನಡೆಸಿದ ಮಾಹಿತಿ ಸಿಕ್ಕಿತ್ತು. ಹೀಗಾಗಿ ಇಡಿ ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿಕೊಂಡು, ರಾಜೋರ್‌ಪೇ, ಕ್ಯಾಷ್ ಫ್ರೀ, ಪೇಟಿಯಂ, ಪೇಯು, ಇಜ್ಹಿಬುಸ್ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸಿರುವುದು ಪತ್ತೆ ಹಚ್ಚಿ 106 ಕೋಟಿ ರೂ. ಮೌಲ್ಯದ ನಗದು ಸೇರಿ ಚರಾಸ್ತಿ ಜಪ್ತಿ ಮಾಡಿದೆ ಎಂದು ಇಡಿ ತಿಳಿಸಿದೆ.
Advertisement