ಭಾರತದಲ್ಲಿ ಭಯೋತ್ಪಾದನೆಯ ಬೆನ್ನೆಲುಬನ್ನು ಬಿಜೆಪಿ ಮುರಿದಿದೆ: ಪ್ರಧಾನಿ ಮೋದಿ

ವಿರೋಧ ಪಕ್ಷವೊಂದು ಭಯೋತ್ಪಾದಕರು ಹಾಗೂ ಭಯೋತ್ಪಾದನೆಯ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದು, ಬಿಜೆಪಿ ಭಯೋತ್ಪಾದನೆಯ ಬೆನ್ನಲುಬನ್ನೇ ಮುರಿದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದರು.
ಮಂಗಳವಾರ ಚಿತ್ರದುರ್ಗದಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ.
ಮಂಗಳವಾರ ಚಿತ್ರದುರ್ಗದಲ್ಲಿ ಬಿಜೆಪಿ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ.

ಚಿತ್ರದುರ್ಗ: ವಿರೋಧ ಪಕ್ಷವೊಂದು ಭಯೋತ್ಪಾದಕರು ಹಾಗೂ ಭಯೋತ್ಪಾದನೆಯ ಚಟುವಟಿಕೆಗಳನ್ನು ಬೆಂಬಲಿಸುತ್ತಿದ್ದು, ಬಿಜೆಪಿ ಭಯೋತ್ಪಾದನೆಯ ಬೆನ್ನಲುಬನ್ನೇ ಮುರಿದಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಹೇಳಿದರು.

ಚಿತ್ರದುರ್ಗದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ, ವಾಗ್ದಾಳಿ ನಡೆಸಿದರು.

ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಘಳು ಭಯೋತ್ಪಾದನೆಯನ್ನು ಬೆಂಬಲಿಸುತ್ತಿದ್ದು, ಎರಡೂ ಪಕ್ಷಗಳಿಗೆ ಮತ ಪಡೆಯುವ ಹಕ್ಕಿಲ್ಲ ಎಂದು ಹೇಳಿದರು.

2019ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಕುರಿತು ಕಾಂಗ್ರೆಸ್ ಸೇನಾಪಡೆಗಳಿಂದ ಸಾಕ್ಷ್ಯಾಧಾರ ಕೇಳಿತ್ತು. ಬಟ್ಲಾ ಹೌಸ್ ಎನ್‌ಕೌಂಟರ್‌ನಲ್ಲಿ ಉಗ್ರರು ಹತರಾಗಿರುವ ವಿಚಾರ ತಿಳಿದ ಬಳಿಕ ಕಾಂಗ್ರೆಸ್ ನಾಯಕರು ಕಣ್ಣೀರಿಟ್ಟಿದ್ದರು. ಆದರೆ, ಅದೇ ನಾಯಕರು ಸೇನಾಪಡೆಗಳ ಸಾಮರ್ಥ್ಯವನ್ನು ಪ್ರಶ್ನಿಸಿದ್ದರು ಎಂದು ತಿಳಿಸಿದರು.

“ಭಯೋತ್ಪಾದನೆಯ ಬೆನ್ನು ಮುರಿದು ತುಷ್ಟೀಕರಣದ ರಾಜಕಾರಣವನ್ನು ನಿಲ್ಲಿಸಿದ್ದು ಬಿಜೆಪಿ. ಕರ್ನಾಟಕ ನಂಬರ್ ಒನ್ ಆಗಬೇಕಾದರೆ ಸುರಕ್ಷಿತವಾಗಿರುವುದು ಕೂಡ ಮುಖ್ಯ. ಭಯೋತ್ಪಾದನೆಯನ್ನು ಉತ್ತೇಜಿಸುವ ಕಾಂಗ್ರೆಸ್-ಜೆಡಿಎಸ್ ಎಂದಿಗೂ ಯುವಕರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದಿಲ್ಲ. ಕಾಂಗ್ರೆಸ್ ತನ್ನ ವಾರಂಟಿಯನ್ನು ಕಳೆದುಕೊಂಡಿದೆ. ಅವರ ಭರವಸೆಗೆ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ. ತಾನು ಅಧಿಕಾರಕ್ಕೆ ಬರುವುದಿಲ್ಲ ಎಂದು ಕಾಂಗ್ರೆಸ್‌ಗೆ ಗೊತ್ತಿದೆ. ಹೀಗಾಗಿಯೇ ಸುಳ್ಳು ಭರವಸೆಗಳನ್ನು ನೀಡುತ್ತಿದೆ. ಈ ಭರವಸೆಗಳು ಜಾರಿಯಾದರೆ ಇಡೀ ಖಜಾನೆ ಖಾಲಿಯಾಗುತ್ತದೆ ಮತ್ತು ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ಇದಕ್ಕೆ ನಮ್ಮ ಮುಂದಿನ ಪೀಳಿಗೆಗಳು ನಮ್ಮನ್ನು ಶಪಿಸುತ್ತವೆ ಎಂದರು.

2012ರ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಇದೇ ರೀತಿಯ ಯೋಜನೆಗಳನ್ನು ತಂದಿತ್ತು, ಆದರೆ ನನ್ನ ರಾಜ್ಯದ ಜನರು ಅದನ್ನು ತಿರಸ್ಕರಿಸಿದರು. ಇಂದು ಕಾಂಗ್ರೆಸ್‌ ತನ್ನ ಪಕ್ಷದ ಬಾವುಟ ಹಿಡಿಯಲು ಯಾರೂ ಇಲ್ಲದೇ ಬೇರೆ ರಾಜ್ಯಗಳಿಂದ ಜನರನ್ನು ಕರೆತರುತ್ತಿದ್ದಾರೆ. ನನ್ನ ವಿರುದ್ಧ ಕಾಂಗ್ರೆಸ್ 90ಕ್ಕೂ ಹೆಚ್ಚು ಬಾರಿ ನಿಂದನೆ ಮಾಡಿದೆ. ಆ ಪಕ್ಷವು ಒಬಿಸಿಗಳು ಮತ್ತು ಲಿಂಗಾಯತರಂತಹ ವಿವಿಧ ಸಮುದಾಯಗಳನ್ನು ಅವಮಾನಿಸಿದೆ. ಎಸ್ ನಿಜಲಿಂಗಪ್ಪ ಅವರಂತಹ ಗೌರವಾನ್ವಿತ ನಾಯಕರನ್ನೂ ಕೂಡ ಅವಮಾನಿಸುತ್ತದೆ ಎಂದು ಹೇಳಿದರು.

ದೇಶದ ಮೂಲೆ ಮೂಲೆಯಿಂದ ಜನರು ಕಾಂಗ್ರೆಸ್ ಅನ್ನು ದೂರ ಮಾಡಿದ್ದಾರೆ. ಕರ್ನಾಟಕದಲ್ಲೂ ಅದೇ ರೀತಿ ಆಗಬೇಕು. “ಬಿಜೆಪಿಯಿಂದ ಮಾತ್ರ ಭಾರತವನ್ನು ಅಭಿವೃದ್ಧಿಯ ವೇಗದ ಹಾದಿಯಲ್ಲಿ ಕೊಂಡೊಯ್ಯುವುದು ಸಾಧ್ಯ.  ದೇಶವು 100ನೇ ಸ್ವಾತಂತ್ರ್ಯದ ವರ್ಷಕ್ಕೆ ಕಾಲಿಟ್ಟಾಗ ನಾವು ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವನ್ನು ನೋಡಲು ಬಯಸುತ್ತೇವೆಯ ಪ್ರತಿಯೊಬ್ಬ ವ್ಯಕ್ತಿಯೂ ಹೊರಬಂದು ಮೇ 10 ರಂದು ಬಿಜೆಪಿಗೆ ಮತ ಚಲಾಯಿಸಿ ಮತ್ತು ಬಹುಮತವನ್ನು ಖಾತ್ರಿಪಡಿಸಿದರೆ ಅದು ಸಾಧ್ಯವಾಗುತ್ತದೆ. ಕಾಂಗ್ರೆಸ್‌ನ ಭರವಸೆಗಳು ಮತ್ತು ಯೋಜನೆಗಳ ಬಗ್ಗೆ ಜಾಗರೂಕರಾಗಿರಿ ಎಂದು ಎಚ್ಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com