ಕ್ರಿಮಿನಲ್ ಹಿನ್ನೆಲೆ ಮುಖ್ಯವಲ್ಲ, ರಾಜಕೀಯ ಪಕ್ಷಗಳಿಗೆ ಗೆಲ್ಲುವ ಅಭ್ಯರ್ಥಿಗಳಷ್ಟೇ ಮುಖ್ಯ: ಸಂತೋಷ್ ಹೆಗ್ಡೆ (ಸಂದರ್ಶನ)

ಚುನಾವಣಾ ಕಣಕ್ಕಿಳಿಯುವ ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಮುಖ್ಯವೆಂದು ಪರಿಗಣಿಸುವುದಿಲ್ಲ, ಅವರಿಗೆ ಗೆಲ್ಲುವ ಅಭ್ಯರ್ಥಿಗಳಷ್ಟೇ ಮುಖ್ಯವಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ
ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಬೆಂಗಳೂರು: ಚುನಾವಣಾ ಕಣಕ್ಕಿಳಿಯುವ ರಾಜಕೀಯ ಪಕ್ಷಗಳು ತನ್ನ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯನ್ನು ಮುಖ್ಯವೆಂದು ಪರಿಗಣಿಸುವುದಿಲ್ಲ, ಅವರಿಗೆ ಗೆಲ್ಲುವ ಅಭ್ಯರ್ಥಿಗಳಷ್ಟೇ ಮುಖ್ಯವಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಹೇಳಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸಂತೋಷ್ ಹೆಗಡೆಯವರು, ಬದಲಾಗುತ್ತಿರುವ ರಾಜಕೀಯ ಬೆಳವಣಿಗೆ, ಸವಾಲುಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ನಾನು ಯುವಕನಾಗಿದ್ದ ದಿನಗಳಲ್ಲಿ ನನ್ನ ಪೋಷಕರು ಡಾಕ್ಟರ್, ಇಂಜಿನಿಯರ್, ಐಎಎಸ್ ಅಧಿಕಾರಿಯಾಗು ಎಂದು ಹೇಳುತ್ತಿದ್ದರು. ಆದರೀಗ ಪ್ರತೀಯೊಬ್ಬರೂ ರಾಜಕೀಯ ವ್ಯಕ್ತಿಯಾಗಬೇಕೆಂದು ಬಯಸುತ್ತಿದ್ದಾರೆ. ರಾಜಕೀಯ ನಾಯಕನಾಗದರೆ ಹೆಚ್ಚು ಹಣ ಗಳಿಸಬಹುದು ಎಂಬ ಮನಸ್ಥಿತಿ ಇದೆ. ಹೀಗಾಗಿಯೇ ಚುನಾವಣೆಯಲ್ಲಿ ರೌಡಿ ಶೀಟರ್ ಗಳೂ ಕೂಡ ಸ್ಪರ್ಧಿಸುತ್ತಿದ್ದಾರೆ.

ಚುನಾವಣೆ ಸಮಯದಲ್ಲಿ ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳು, ವಿಚಾರಗಳ ಬಗ್ಗೆ ರಾಜಕೀಯ ಪಕ್ಷಗಳು ಚರ್ಚೆ ನಡೆಸುತ್ತಿಲ್ಲ. ಬದಲಾಗಿ ಒಬ್ಬರ ಮೇಲೆ ಒಬ್ಬರು ಕೆಸರೆರಚಾಟಕ್ಕೆ ಮುಂದಾಗುತ್ತಿದ್ದಾರೆ. ಇದರಿಂದಾಗಿ ಪ್ರಚಾರದ ಗುಣಮಟ್ಟ ಕುಸಿದಿದೆ. ಯುವ ತದಾರರು ಅರ್ಹ ಅಭ್ಯರ್ಥಿಗಳಿಗೆ ಮತ ಹಾಕಬೇಕು, ಯಾವ ಅಭ್ಯರ್ಥಿಗಳೂ ಅರ್ಹರಲ್ಲ ಎಂದು ತಿಳಿದಿದ್ದೇ ಆದರೆ, ನೋಟಾ ಒತ್ತಬಹುದು ಎಂದು ಹೇಳಿದ್ದಾರೆ.

ಮತದಾನಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಅಭ್ಯರ್ಥಿಗಳಿಂದ ನಿಮ್ಮ ನಿರೀಕ್ಷೆಗಳೇನು?
ಯಾವ ರೀತಿ ಕಾರ್ಯಗತಗೊಳಿಸಬಹುದು ಎಂಬುದನ್ನು ತಿಳಿಯದೆಯೇ ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದು, ಭರವಸೆಗಳನ್ನು ನೀಡುತ್ತಿವೆ. ಈ ಭರವಸೆಗಳನ್ನು ಈಡೇರಿಸಲು ಆರ್ಥಿಕ ಪರಿಣಾಮಗಳು ಎದುರಾಗಲಿವೆ.
ಚುನಾವಣಾ ಪ್ರಚಾರದ ವೇಳೆ ಸತ್ಯದ ಮೇಲೆ ಗೌರವ ಇಲ್ಲದಂತಾಗಿದೆ. ತಾವು ಹೇಳುವ ಸುಳ್ಳುಗಳ ನುಂಗಿ, ಮತದಾರರು ಮತ ಹಾಕುತ್ತಾರೆಂಬ ಭಾವನೆ ರಾಜಕೀಯ ಪಕ್ಷಗಳಿದ್ದು, ಹೀಗಾಗಿಯೇ ಭರವಸೆಗಳನ್ನು ನೀಡುತ್ತವೆ.

20 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ನಾವು ಹೊಸ ಸರ್ಕಾರವನ್ನು ಹೊಂದುತ್ತೇವೆ, ಹೊಸ ಸರ್ಕಾರದಿಂದ ಏನನ್ನು ನಿರೀಕ್ಷಿಸುತ್ತೀರಿ?
ಕಳೆದ ಐದು ವರ್ಷಗಳ ಆಡಳಿತವನ್ನು ನಾನು ನೋಡಿದ್ದೇನೆ. ಹೀಗಾಗಿ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ನನ್ನ ಭಾವನೆ. ಭರವಸೆಗಳೊಂದಿಗೆ ಮತ್ತೊಂದು ಐದು ವರ್ಷಗಳ ಅವಧಿಯಾಗಿದೆ. ಅದನ್ನು ಮೀರಿ, ನಾನು ಹೆಚ್ಚು ನಿರೀಕ್ಷಿಸುವುದಿಲ್ಲ.

ಇಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಏನು ಹೇಳುತ್ತೀರಿ?
ನಾನು ಚಿಕ್ಕವನಿದ್ದಾಗ, ನನ್ನ ಪೋಷಕರು ನನಗೆ ಸಾಧ್ಯವಾದರೆ ಡಾಕ್ಟರ್, ಇಂಜಿನಿಯರ್ ಅಥವಾ ಐಎಎಸ್ ಅಧಿಕಾರಿಯಾಗುವಂತೆ ಹೇಳುತ್ತಿದ್ದರು. ಅದು ಅಂದಿನ ಜನರ ಮತ್ತು ವಿದ್ಯಾರ್ಥಿಗಳ ಆಶಯವಾಗಿತ್ತು. ಇಂದು, ವಿಷಯಗಳು ಬದಲಾಗಿವೆ. ಪ್ರತಿಯೊಬ್ಬರಿಗೂ ರಾಜಕಾರಣಿಯಾಗಬೇಕೆಂದು ಬಯಸುತ್ತಿದ್ದಾರೆ.

ಎಂಜಿನಿಯರ್‌ಗಳು, ವೈದ್ಯರು, ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಸರ್ಕಾರಿ ಸೇವೆಯಲ್ಲಿರುವವರು ಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡುತ್ತಿದ್ದಾರೆ. ಇದರ ಹಿಂದಿನ ಕಾರಣವೇನು? ರಾಜಕೀಯವು ಇತರ ವೃತ್ತಿಗಳಿಗಿಂತ ಹೆಚ್ಚು ಲಾಭದಾಯಕ ಎಂಬು ಭಾವಿಸುತ್ತಿರುವುದು. ರಾಜಕೀಯ ಒಂದು ಕಾಲದಲ್ಲಿ ಸೇವೆಯಾಗಿತ್ತು, ಆದರೆ, ಈಗ ಅದು ವೃತ್ತಿಯಾಗಿದೆ. ನೀವು ಚುನಾಯಿತರಾದರೆ, ನೀವು ಹಣ ಮಾಡುತ್ತೀರಿ ಮತ್ತು ನೀವು ಅಧಿಕಾರವನ್ನೂ ಆನಂದಿಸುತ್ತೀರಿ. ಆದ್ದರಿಂದಲೇ ರಾಜಕಾರಣಿಗಳಾಗಲು ಎಲ್ಲ ಕಡೆಯಿಂದಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

ಅಪರಾಧ ಹಿನ್ನೆಲೆಯುಳ್ಳ ಹಲವು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರು ಸ್ಪರ್ಧಿಸದಿರುವಂತೆ ಮಾಡಲು ತಿದ್ದುಪಡಿಗಳ ಅಗತ್ಯವಿದೆಯೇ?
ರಾಜಕೀಯ ಬದಲಾಗಿದೆ. ಈಗ ಘೋಷಿತ ರೌಡಿ ಶೀಟರ್‌ಗಳೂ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಬದಲಾಗುತ್ತಿದ್ದು, ಜನರಿಗೆ ಸಹಾಯ ಮಾಡಲು ರಾಜಕೀಯಕ್ಕೆ ಬರಲು ಬಯಸುತ್ತಿದ್ದಾರೆಂದು ಹೇಳುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಭವಿಷ್ಯದ ಮೇಲಿನ ಭರವಸೆಗಳು ಕಡಿಮೆಯಾಗಿವೆ.

ನಿಮ್ಮದೇ ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ನಿಮ್ಮ ಮಾಜಿ ಲೋಕಾಯುಕ್ತ ಸಹೋದ್ಯೋಗಿ ಹಾಗೂ ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಯು.ವಿ.ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಚಂದ್ರು ಎನ್ ಕಣಕ್ಕಿಳಿದಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಇದು ರಾಜಕೀಯ ಪಕ್ಷಗಳ ಧೋರಣೆಯಾಗಿದೆ. ರಾಜಕೀಯ ಪಕ್ಷಗಳಿಗೆ ಕ್ರಿಮಿನಲ್ ಹಿನ್ನೆಲೆಗಳು ಮುಖ್ಯವಾಗುವುದಿಲ್ಲ. ಅವರಿಗೆ ಗೆಲ್ಲುವ ಅಭ್ಯರ್ಥಿಗಳಷ್ಟೇ ಮುಖ್ಯವಾಗಿದೆ. ಅಧಿಕಾರಕ್ಕೆ ಬರಬೇಕೆಂಬ ಕಾರಣಕ್ಕೆ ಇಂತಹವರು ರಾಜಕೀಯ ಪಕ್ಷಗಳಿಗೆ ಬೇಕಾಗಿದ್ದಾರೆ. ಆ ಪಕ್ಷಗಳು ಅಧಿಕಾರಕ್ಕೆ ಬರಲು ಏಕೆ ಬಯಸುತ್ತಿವೆ? ಜನರ ಸೇವೆಗಾಗಿ ಅಲ್ಲ, ಸ್ವಂತ ಲಾಭಕ್ಕಾಗಿ.

ಕಾಂಗ್ರೆಸ್ ಬಿಜೆಪಿಯನ್ನು 40 ಪರ್ಸೆಂಟ್ ಕಮಿಷನ್ ಪಾರ್ಟಿ ಎಂದು ಕರೆಯುತ್ತದೆ ಮತ್ತು ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಅಭಿವೃದ್ಧಿಗೆ 1 ರೂಪಾಯಿ ನೀಡಿದರೆ, ಕೇವಲ 15 ಪೈಸೆ ಜನರಿಗೆ ತಲುಪುತ್ತಿತ್ತು ಎಂದು ಹೇಳಿದ್ದರು. ಈ ಎರಡೂ ಹೇಳಿಕೆಗಳು ಸರಿ ಎಂಬುದು ನನ್ನ ಭಾವನೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 85 ಪರ್ಸೆಂಟ್ ತೆಗೆದುಕೊಳ್ಳುತ್ತಿತ್ತು ಮತ್ತು ಇಂದು ಬಿಜೆಪಿ 40 ಪರ್ಸೆಂಟ್ ತೆಗೆದುಕೊಳ್ಳುತ್ತಿದೆ. ಇದರಿಂದ ಅವರು ಕೈಗೊಳ್ಳುವ ಯೋಜನೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ನನ್ನ ಚಿಂತನೆಯಾಗಿದೆ. ಈ ಬೆಳವಣಿಗೆಯಿಂದಾಗಿ ಜನರು ಆಡಳಿತ ವ್ಯವಸ್ಥೆಯ ಮೇಲೆ ಭರವಸೆ ಕಳೆದುಕೊಳ್ಳುತ್ತಿದ್ದಾರೆ. ನಾವು ನಮ್ಮ ಸಾಮಾಜಿಕ ಚಿಂತನೆಯನ್ನು ಬದಲಾಯಿಸದ ಹೊರತು, ಭವಿಷ್ಯವು ದಾಳವಾಗಿರುತ್ತದೆ ಎಂಬುದು ನನ್ನ ಭಾವನೆ. ಸರ್ಕಾರದಲ್ಲಿ ಎಲ್ಲರು ಕಮಿಷನ್ ಬಯಸುತ್ತಾರೆ. ಅದರಿಂದ ಶೇ. ಅಭಿವೃದ್ಧಿ ಮತ್ತು ಗುಣಮಟ್ಟಕ್ಕೆ ಕಥೆ ಏನಾಗುತ್ತದೆ? ಎಂದು ಪ್ರಶ್ನಿಸಿದ್ದಾರೆ.

ಪ್ರಚಾರದ ವೇಳೆ ರಾಜಕೀಯ ಪಕ್ಷಗಳು ತಮ್ಮ ಅಜೆಂಡಾಗಳ ಬಗ್ಗೆ ಚರ್ಚೆ ನಡೆಸುತ್ತಿಲ್ಲ ಈ ಬಗ್ಗೆ ನಿಮ್ಮ ಅಭಿಪ್ರಾಯ?
ಪ್ರಚಾರದ ಗುಣಮಟ್ಟದಲ್ಲಿ ಕುಸಿತವಾಗಿದೆ. ಪಕ್ಷಗಳು ಮತ್ತು ಅಭ್ಯರ್ಥಿಗಳು ವೈಯಕ್ತಿಕ ದಾಳಿಯಲ್ಲಿ ತೊಡಗಿದ್ದಾರೆ. ಪರಸ್ಪರ ಗೌರವ ಇಲ್ಲದೇ ಎಲ್ಲ ರೀತಿಯ ಪದಗಳನ್ನು ಬಳಸುತ್ತಿದ್ದಾರೆ. ವಿಷ ಸರ್ಪ, ನಾಲಾಯಕ್ ಎಂಬಂತಹ ಪದಗಳನ್ನು ಬಳಸುತ್ತಿದ್ದಾರೆ. ಇವರು ರಾಜಕೀಯ ನಾಯಕರು, ಜನರು ಅನುಸರಿಸಬೇಕಾದವರು. ನಮ್ಮ ಬಾಲ್ಯದಲ್ಲಿ ನಮ್ಮ ಮನೆಯಲ್ಲಿ ರಾಷ್ಟ್ರ ನಾಯಕರ ಛಾಯಾಚಿತ್ರಗಳನ್ನು ಇಡುತ್ತಿದ್ದೆವು ಮತ್ತು ಅವರಿಗೆ ನಮಸ್ಕಾರ ಮಾಡುವಂತೆ ನಮ್ಮ ಪೋಷಕರು ನಮಗೆ ಸೂಚಿಸುತ್ತಿದ್ದರು. ಆದರೆ, ಯಾರ ಫೋಟೋವನ್ನು ಮನೆಯಲ್ಲಿ ಇಟ್ಟು ಮಕ್ಕಳಿಗೆ ಗೌರವ ಕೊಡಬೇಕೆಂದು ಹೇಳಲಿ? ನಾನು ಜನರನ್ನು ದೂಷಿಸುವುದಿಲ್ಲ, ಆದರೆ ತಪ್ಪು ಸಮಾಜದಲ್ಲಿದೆ. ನಾನು ಚಿಕ್ಕವನಿದ್ದಾಗ, ಯಾರಾದರೂ ಜೈಲಿಗೆ ಹೋದರೆ, ಸಾಮಾಜಿಕ ಬಹಿಷ್ಕಾರದ ಸಾಧನವಾಗಿ ಆ ವ್ಯಕ್ತಿಯ ಮನೆಗೆ ಹೋಗಬೇಡಿ ಎಂದು ಪೋಷಕರು ಹೇಳುತ್ತಿದ್ದರು. ಇಂದು ಜನ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಂದರೆ ವಿಮಾನ ನಿಲ್ದಾಣಗಳಲ್ಲಿ ಅವರಿಗೆ ಭರ್ಜರಿಯಾಗಿ ಸ್ವಾಗತ ಕೋರಲಾಗುತ್ತಿದೆ. ನೀವು ಇಂತಹ ಜನರನ್ನು ಏಕೆ ಬಯಸುತ್ತೀರಿ ಎಂದು ಹೇಳಿದರೆ, ಮಹಾತ್ಮಾ ಗಾಂಧಿಯವರೂ ಕೂಡ ಜೈಲಿಗೆ ಹೋಗಿದ್ದರು ಎಂದು ಹೇಳುತ್ತಾರೆ. ಇದು ಸಾಮಾಜಿಕ ಧೋರಣೆಯಾಗಿದೆ. ಕಳೆದುಹೋದ ಮೌಲ್ಯಗಳನ್ನು ಮರಳಿ ತರಲು ಮತ್ತು ಅಂತಹವರನ್ನು ಬಹಿಷ್ಕರಿಸಲು ನಾವು ಸಾಕಷ್ಟು ಕೆಲಸ ಮಾಡಬೇಕಾಗಿದೆ.  ಇದರಿಂದ ಸಮಾಜಕ್ಕೆ ಬಹಳಷ್ಟು ಒಳಿತಾಗುತ್ತದೆ. ಸಮಾಜಕ್ಕೆ ಬೇಡವಾದ ವ್ಯಕ್ತಿಗಳು ಮತ್ತು ತಮ್ಮ ಅವಧಿಯಲ್ಲಿ ಏನನ್ನೂ ಮಾಡದ ನಾಯಕರನ್ನು ಸಮಾಜ ತಿರಸ್ಕರಿಸಬೇಕು.

ಚಂದ್ರು ಅಥವಾ ತನ್ವೀರ್ ಅಹಮದ್ ಅವರಂತಹವರು ಮತ ಕೇಳಲು ಬಂದರೆ ಅವರಿಗೆ ಏನು ಹೇಳುತ್ತೀರಿ?
ಮತಗಟ್ಟೆಯಲ್ಲಿ ಪರಿಶೀಲಿಸಿ ಅಭ್ಯರ್ಥಿಗಳು ಯಾರು ಎಂಬುದನ್ನು ನೋಡುತ್ತೇನೆ. ಪಕ್ಷ ಭೇದವಿಲ್ಲದೆ ಯಾರಾದರೂ ನನ್ನ ಮಾನದಂಡಗಳಿಗೆ ಹೊಂದಿಕೆಯಾಗುತ್ತಿದ್ದರೆ, ನಾನು ಆ ವ್ಯಕ್ತಿಗೆ ಮತ ಹಾಕುತ್ತೇನೆ ಮತ್ತು ನನಗೆ ತೃಪ್ತಿ ಇಲ್ಲದಿದ್ದರೆ, ನಾನು ನೋಟಾ ಆಯ್ಕೆ ಮಾಡುತ್ತೇನೆ.

ನೋಟಾಗೆ ಹೆಚ್ಚು ಮತ ಬಂದರೆ ಮತ್ತೆ ಚುನಾವಣೆ ನಡೆಯಬೇಕೆ?
‘ನೋಟಾ’ ಹೆಚ್ಚು ಮತ ಪಡೆದರೆ ಆ ವಿಧಾನಸಭಾ ಕ್ಷೇತ್ರವನ್ನು ಯಾರೂ ಪ್ರತಿನಿಧಿಸಬಾರದು. ಸ್ವೀಕಾರಾರ್ಹ ಅಭ್ಯರ್ಥಿಗಳನ್ನು ನೀಡದಿದ್ದರೆ ಅವರನ್ನು ತಿರಸ್ಕರಿಸುತ್ತೇವೆಂಬ ಸಂದೇಶವನ್ನು ರವಾನಿಸಬೇಕು.

ಬೆಂಗಳೂರೊಂದರಲ್ಲೇ 8 ಲಕ್ಷ ಹೊಸ ಮತದಾರರಿದ್ದಾರೆ, ಅವರಿಗೆ ನೀವು ನೀಡುವ ಸಂದೇಶವೇನು?
ನಿಮ್ಮ ದೇಶದ ಭವಿಷ್ಯದ ಬಗ್ಗೆ ಯೋಚಿಸಿ. ಕ್ಷೇತ್ರಕ್ಕೆ ಮತ್ತು ಅದರ ಜನರಿಗೆ ಸೇವೆ ಸಲ್ಲಿಸುವ ಯಾರಾದರೂ ನಿಮಗೆ ಕಂಡುಬಂದರೆ, ಅವರಿಗೆ ಮತ ಚಲಾಯಿಸಿ. ಕೇವಲ ಜಾತಿ, ಧರ್ಮ, ಭಾಷೆ ಅಥವಾ ಇತರ ಅಂಶಗಳ ಆಧಾರದ ಮೇಲೆ ಮತ ಹಾಕದಿರಿ. ಅರ್ಹತೆಯ ಆಧಾರದ ಮೇಲೆ ಮಾತ್ರ ಮತ ಚಲಾಯಿಸಿ. ಇಲ್ಲದಿದ್ದರೆ, ನೋಟಾ ಒತ್ತಿರಿ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com