ಸಿದ್ದರಾಮಯ್ಯ ಸಹೋದರಿ ಪತಿ ನಿಧನ: ಕಳೆಗುಂದಿದ‌ ಸಂಭ್ರಮಾಚರಣೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸ್ವಂತ ಸಹೋದರಿ ಶಿವಮ್ಮ‌ ಅವರ ಪತಿ ರಾಮೇಗೌಡ (69) ಶನಿವಾರ‌ ನಿಧನ‌ರಾಗಿದ್ದಾರೆ
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸ್ವಂತ ಸಹೋದರಿ ಶಿವಮ್ಮ‌ ಅವರ ಪತಿ ರಾಮೇಗೌಡ (69) ಶನಿವಾರ‌ ನಿಧನ‌ರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಳಿಗ್ಗೆ ನಗರದ ಜೆಎಸ್ ಎಸ್ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಬೆಳಿಗ್ಗೆ 8.30ರ ಸುಮಾರಿಗೆ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ತಿಳಿಸಿದರು.

ಮೃತರು ಸಿದ್ದರಾಮನಹುಂಡಿಯಲ್ಲಿ ನ್ಯಾಯಬೆಲೆ ಅಂಗಡಿ‌ ನಡೆಸುತ್ತಿದ್ದರು. ಮೃತರಿಗೆ ಪತ್ನಿ, ಮೂವರು ಹೆಣ್ಣು, ಒಂದು ಗಂಡು‌ಮಗ ಇದ್ದಾರೆ. ಮಧ್ಯಾಹ್ನದ ನಂತರ, ಹುಟ್ಟೂರಿನಲ್ಲಿ ಅಂತ್ಯಕ್ರಿಯೆ‌ ನೆರವೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com