ಮಳೆಗಾಲದಲ್ಲಿ ಅಂಡರ್ ಪಾಸ್'ಗಳಲ್ಲಿನ ಚಾಲನೆ ತಪ್ಪಿಸಿ: ಬಿಬಿಎಂಪಿ

ಮಳೆಗಾಲದಲ್ಲಿ ಸಾರ್ವಜನಿಕರು ಅಂಡರ್ ಪಾಸ್ ಗಳಲ್ಲಿನ ಚಾಲನೆಯನ್ನು ತಪ್ಪಿಸಬೇಕೆಂದು ಬಿಬಿಎಂಪಿ ಭಾನುವಾರ ಹೇಳಿದೆ.
ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಭಾನುವಾರ ಜಲಾವೃತಗೊಂಡಿದ್ದ ವಾಹನಗಳಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ರಕ್ಷಿಸಿದರು.
ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಭಾನುವಾರ ಜಲಾವೃತಗೊಂಡಿದ್ದ ವಾಹನಗಳಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ರಕ್ಷಿಸಿದರು.
Updated on

ಬೆಂಗಳೂರು: ಮಳೆಗಾಲದಲ್ಲಿ ಸಾರ್ವಜನಿಕರು ಅಂಡರ್ ಪಾಸ್ ಗಳಲ್ಲಿನ ಚಾಲನೆಯನ್ನು ತಪ್ಪಿಸಬೇಕೆಂದು ಬಿಬಿಎಂಪಿ ಭಾನುವಾರ ಹೇಳಿದೆ.

ಅಂಡರ್‌ಪಾಸ್‌ಗಳಲ್ಲಿ ವಾಹನಗಳು ಸಿಲುಕಿಕೊಂಡು, ಪ್ರಯಾಣಿಕರು ಸುರಕ್ಷತೆಗಾಗಿ ಹರಸಾಹಸ ಪಡುತ್ತಿರುವುದು ಇದೇ ಮೊದಲಲ್ಲ. ಆದರೆ, ಮಹಿಳೆಯ ಸಾವು ತೀವ್ರ ಕಳವಳವನ್ನುಂಟು ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

"ನಾಗರಿಕರು ಮಳೆ ಬಂದಾಗಲೆಲ್ಲಾ ಅಂಡರ್‌ಪಾಸ್‌ಗಳಲ್ಲಿನ ಚಾಲನೆಯನ್ನು ತಪ್ಪಿಸಬೇಕು. ಮಳೆಗಾಲದಲ್ಲಿ ಈ ಮಾರ್ಗಗಳು ದುರ್ಬಲವಾಗಿರುತ್ತವೆ. ಅಂಡರ್‌ಪಾಸ್‌ಗಳ ಕೆಳಗಿರುವ ಒಳಚರಂಡಿಯು ಕಳಪೆ ಮಟ್ಟದ್ದಾಗಿರಲಿದ್ದು, ಮಳೆ ಸಂದರ್ಭದಲ್ಲಿ ನೀರು ಹೆಚ್ಚಾಗಿ ಸೇರುತ್ತದೆ. ಮಳೆಗಾಲ ಆರಂಭವಾದಾಗ ಈ ಅಂಡರ್ ಪಾಸ್ ಗಳ ಮುಚ್ಚಬೇಕೆಂಬ ಅಲಿಖಿತ ನಿಯಮಗಳಿವೆ. ಈ ಸಂಬಂಧ ಸಂಚಾರ ಪೊಲೀಸರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ವಾಹನ ಚಾಲಕರು ಮಳೆ ಸಂದರ್ಭದಲ್ಲಿ ಅಂಡರ್ ಪಾಸ್ ಗಳಲ್ಲಿ ಚಾಲನೆ ಮಾಡುವುದಿಲ್ಲ. ಆದರೆ, ಈ ಪ್ರಕರಣದಲ್ಲಿ ಚಾಲಕನ ಮನದಲ್ಲಿ ಏನು ಆಲೋಚನೆ ಬಂದಿತ್ತೋ ತಿಳಿಯದು. ಸುರಕ್ಷತಾ ದೃಷ್ಟಿಯಿಂದ ಮಳೆ ಸಂದರ್ಭದಲ್ಲಿ ಅಂಡರ್ ಪಾಸ್ ಗಳನ್ನು ನಿಯಂತ್ರಿಸುವುದೇ ಒಳ್ಳೆಯದು. ಬೆಂಗಳೂರು ನಗರ ಸಂಚಾರ ಪೊಲೀಸರು ಕೂಡ ನಾಗರಿಕರಿಗೆ ಮಳೆ ಸಂದರ್ಭದಲ್ಲಿ ಫ್ಲೈ ಓವರ್ ಮತ್ತು ಅಂಡರ್‌ಪಾಸ್‌ಗಳ ಕೆಳಗೆ ನಿಲ್ಲದಂತೆ ಸೂಚಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಮಾತನಾಡಿ, ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಕಂಡುಕೊಳ್ಳಲು ಎಲ್ಲಾ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುವುದು. "ಭಾನುವಾರದ ಘಟನೆ ತಲೆತಗ್ಗಿಸುವಂತ ವಿಚಾರವಾಗಿದೆ. ಈ ಸಂಬಂಧ ವಿವರವಾಗಿ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.

ನಗರದ ಪಾದಚಾರಿ ಶಿಲ್ಪಾ ಎಂಬುವವರು ಮಾತನಾಡಿ, ಮಳೆಬಂದಾಗ ಜನರು ಎಲ್ಲಿ ನಿಲ್ಲಬೇಕು. ಬೆಂಗಳೂರಿನಲ್ಲಿರುವ ಎಲ್ಲರ ಬಳಿಯೂ ಕಾರುಗಳಿಲ್ಲ. ಈ ಕಾರುಗಳಲ್ಲಿರುವುದೂ ಕೂಡ ಅಷ್ಟು ಸುರಕ್ಷಿತವಲ್ಲ. ನೀರು ತುಂಬಿದ ರಸ್ತೆಗಳಲ್ಲಿ ಕಾರುಗಳೂ ಕೂಡ ತೇಲುತ್ತವೆ. ಮಳೆ ಬಂದಾಗ ನಾಗರೀಕರು ನಿಲ್ಲಲು ಸ್ಥಳಗಳಿಲ್ಲ. ಬಸ್ ನಿಲ್ದಾಣಗಳೂ ಕೂಡ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಅಷ್ಟಕ್ಕೂ ಭಾನುವಾರ ನಡೆದದ್ದೇನು...?
ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದರ ಪರಿಣಾಮ ನಗರದ ಅನೇಕ ಅಂಡರ್​ ಪಾಸ್​ಗಳಲ್ಲಿ ನೀರು ನಿಂತಿತ್ತು. ಈ ಸಂದರ್ಭ, ಕೆ.ಆರ್ ಸರ್ಕಲ್ ಅಂಡರ್ ಪಾಸ್ ಬಳಿ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದರು. ಡ್ರೈವರ್ ಮತ್ತು ಕುಟುಂಬಸ್ಥರು ಸೇರಿ ಏಳು ಜನ ಆಂಧ್ರ ಮೂಲದವರಾಗಿದ್ದು ಸಮಿತಾ 13, ಸೋಹಿತಾ 15, ಸಂಭ್ರಾಜ್ಯಂ 65, ಭಾನು ರೇಖಾ 22, ಹರೀಶ್ ಡ್ರೈವರ್ , ಸ್ವರೂಪ 47, ಸಂದೀಪ್‌ 35 ಕಾರಿನಲ್ಲಿದ್ದರು.

ಅಂಡರ್ ಪಾಸ್​ನಲ್ಲಿ ಇಳಿಯುತ್ತಿದ್ದ ಹಾಗೆಯೇ, ಎಲ್ಲರಿಗೂ ಕೆಳಗಿಳಿಯಲು ಡ್ರೈವರ್ ಹೇಳಿದ್ದರು. ಚಾಲಕ, ನೀರು ಹೆಚ್ಚಾಗಿದೆ.. ಗಾಡಿ ಹೋಗಲ್ಲ ಎಂದಿದ್ದರು. ದರೂ ಕಾರು ಮೂವ್ ಮಾಡಿ ಹೋಗ್ಬೋದು ಅಂತಾ ಡ್ರೈವರ್​ಗೆ ಪ್ರಯಾಣಿಕರು ಒತ್ತಾಯಿಸಿದ್ರು. ಹೀಗಾಗಿ ಚಾಲಕ ಗಾಡಿ ಮೂವ್ ಮಾಡಿದ್ದರು. ಆದರೆ ಕ್ಷಣ ಕ್ಷಣಕ್ಕೂ ನೀರು ಹೆಚ್ಚಾಗಿದ್ದು ಇಂಜಿನ್ ಗೆ ನೀರು ತುಂಬಿಕೊಂಡಿದೆ. ಇದರಿಂದಾಗಿ ಕಾರು ಬಂದ್ ಬಿದ್ದಿದ್ದು ನಂತರ ಕಾರು ರೀಸ್ಟಾರ್ಟ್ ಮಾಡಲು ಸಾಧ್ಯವಾಗಿಲ್ಲ.

ಅಷ್ಟರಲ್ಲೇ ನೀರು ಕಾರಿನ ಡೋರ್ ಮಟ್ಟ ಬಂದಿತ್ತು. ನಂತರ ಕಾರಿನ ಬಾಗಿಲುಗಳೂ ಬ್ಲಾಕ್ ಆಗಿದ್ದು ತೆಗೆಯೋಕೆ ಕಷ್ಟ ಆಗಿದೆ. ಈ ವೇಳೆ ಡ್ರೈವರ್ ಡೋರ್ ತೆಗೆದು ಒಬ್ಬೊಬ್ಬರನ್ನೇ ಕೆಳಗೆ ಇಳಿಸೋಕೆ ಪ್ರಯತ್ನ ಮಾಡಿದ್ದಾನೆ..

ಅಷ್ಟರಲ್ಲಾಗಲೇ ಕಾರಿನ ಒಳಗಡೆ ಮೃತ ಭಾನುರೇಖಾ ನೀರು ಕುಡಿದು ಜ್ಞಾನ ಕಳೆದು ಕೊಂಡಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಬಂದು ಒಬ್ಬೊಬ್ಬರನ್ನೇ ರಕ್ಷಣೆ ಮಾಡಿದ್ದಾರೆ.. ನಂತರ ಎಲ್ಲರನ್ನೂ ಸೆಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆ ತಂದಿದ್ದು ಬಂದ ಕೂಡಲೇ ಆಸ್ಪತ್ರೆ ವೈದ್ಯರು ಭಾನುರೇಖಾಳನ್ನ ಚೆಕ್ ಮಾಡಿದ್ದಾರೆ. ಈ ವೇಳೆ ಮೃತ ಆಗಿರುವುದು ಗೊತ್ತಾಗಿದೆ. ಸದ್ಯ ಘಟನೆ ಸಂಬಂಧ ಹಲಸೂರ್ ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಟುಂಬಸ್ಥ ಸಂದೀಪ್ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದ್ದು ಸದ್ಯ ಎಫ್ಐಆರ್ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿರೋ ಪೊಲೀಸರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com