ಬೆಂಗಳೂರು: ಬಾಡಿಗೆಗೆ ಮನೆ ಕೇಳಲು ಬಂದು ಮಾಲಕಿ ಥಳಿಸಿ ದರೋಡೆ

ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದ ಅಪರಿಚಿತ ಮಹಿಳೆಯರು ಮನೆಯೊಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಂದಿನ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಂಗಳೂರು: ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದ ಅಪರಿಚಿತ ಮಹಿಳೆಯರು ಮನೆಯೊಡತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಂದಿನ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಂದಿನಿ ಲೇಔಟ್‌ನ ಪಾರ್ವತಿ ನಗರದ ನಿವಾಸಿ ಶಾಂತಮ್ಮ (55) ಹಲ್ಲೆಯಿಂದ ಗಾಯಗೊಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಶಾಂತಮ್ಮ ಅವರ ಪತಿ ಮೃತಪಟ್ಟಿದ್ದರು. ಹೀಗಾಗಿ ಮನೆಯಲ್ಲಿ ಶಾಂತಮ್ಮ ಒಬ್ಬರೇ ವಾಸವಿದ್ದರು. ನಾಲ್ಕು ಮನೆಗಳ ಪೈಕಿ 2 ಮನೆಗಳು ಖಾಲಿ ಇದ್ದವು. ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಇಬ್ಬರು ಅಪರಿಚಿತ ಮಹಿಳೆಯರು ಬಾಡಿಗೆಗೆ ಮನೆ ಕೇಳಿಕೊಂಡು ಶಾಂತಮ್ಮ ಮನೆ ಬಳಿ ಬಂದಿದ್ದಾರೆ. ಈ ವೇಳೆ ಶಾಂತಮ್ಮ ಮನೆ ತೋರಿಸಲು ಕರೆದುಕೊಂಡು ಹೋಗಿದ್ದು, ಇದೇ ಸಂದರ್ಭದಲ್ಲಿ ಅಳ್ಲೇ ಇದ್ದ ಮರದ ತುಂಡಿನಿಂದ ಶಾಂತಮ್ಮ ಅವರ ಮೇಲೆ ಮಹಿಳೆಯರು ದಾಳಿ ನಡೆಸಿದ್ದಾರೆ. ಈ ವೇಳೆ ಕುಸಿದು ಬಿದ್ದ ಶಾಂತಮ್ಮ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.

ಶಾಂತಮ್ಮ ಅವರ ಮನೆಯ ಬಳಿಯಿರುವ ಸಿಸಿಟಿವಿಯಲ್ಲಿ ಮಹಿಳೆಯರ ಚಲನವಲನಗಳು ಸೆರೆಯಾಗಿವೆ. ಮಹಿಳೆಯರು ಮಾಸ್ಕ್ ಧರಿಸಿದ್ದು, ಪೊರಕೆಯೊಂದಿಗೆ ಚೀಲ ಹೊತ್ತುಕೊಂಡು ಹೋಗುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಶಾಂತಮ್ಮ ಅವರು ಮನೆ ತೋರಿಸುವಾಗ ಮಹಿಳೆಯರು ಹಲ್ಲೆ ನಡೆಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಲೇಔಟ್ ಪೊಲೀಸರು ಶಾಂತಮ್ಮ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಮಹಿಳೆಯರ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com