ಬೆಂಗಳೂರು ವಿವಿ: ಒಡೆದ ಗಾಜು, ರಕ್ತದ ಕಲೆ ಕಂಡು ಬೆಚ್ಚಿಬಿದ್ದ ಹೆಚ್ಒಡಿ, ಪೊಲೀಸರಿಗೆ ದೂರು

ಬೆಂಗಳೂರು ವಿಶ್ವವಿದ್ಯಾನಿಲಯದ ಬಳಿ ಒಡೆದ ಗಾಜಿನ ತುಂಡುಗಳು, ರಕ್ತದ ಕಲೆ ಹಾಗೂ ಸುಟ್ಟಿಹಾಕಿದ ದ್ವಿಚಕ್ರ ವಾಹನಗಳ ಕಂಡು ಮನೋವಿಜ್ಞಾನ ವಿಭಾಗದ ಹೆಚ್ಒಡಿ ಬೆಚ್ಚಿಬಿದ್ದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ ಬಳಿ ಒಡೆದ ಗಾಜಿನ ತುಂಡುಗಳು, ರಕ್ತದ ಕಲೆ ಹಾಗೂ ಸುಟ್ಟಿಹಾಕಿದ ದ್ವಿಚಕ್ರ ವಾಹನಗಳ ಕಂಡು ಮನೋವಿಜ್ಞಾನ ವಿಭಾಗದ ಹೆಚ್ಒಡಿ ಬೆಚ್ಚಿಬಿದ್ದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಅಪರಿಚಿತ ವ್ಯಕ್ತಿಗಳು ಮನೋವಿಜ್ಞಾನ ವಿಭಾಗದ ಮುಖ್ಯ ಬಾಗಿಲು ಮತ್ತು ಕಿಟಕಿಗಳ ಗಾಜುಗಳನ್ನು ಒಡೆದು ಹಾಕಿದ್ದಾರೆ.

ವಿಶ್ವವಿದ್ಯಾನಿಲಯದ ಪ್ರವೇಶದ್ವಾರದಲ್ಲಿ ಕಂಡು ಬಂದ ದೃಶ್ಯಗಳು ಭಯಾನಕವಾಗಿದೆ. ಹೀಗಾಗಿ ವಿಭಾಗದ ಆವರಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಅಧಿಕಾರಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ 8.25ರ ಸುಮಾರಿಗೆ ಎಚ್‌ಒಡಿ ಡಾ ಎಂ ಶ್ರೀನಿವಾಸ್ ಅವರ ಗಮನಕ್ಕೆ ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳದಲ್ಲಿನ ಪರಿಸ್ಥಿತಿ ಅಸಾಮಾನ್ಯ ಮತ್ತು ಭಯಾನಕವಾಗಿತ್ತು. ಏಕೆಂದರೆ, ಸ್ಥಳದಲ್ಲಿ ರಕ್ತದ ಕಲೆಗಳು ಕಂಡು ಬಂದಿತ್ತು. ಅಲ್ಲದೆ, ವಿದ್ಯುತ್ ಚಾಲಿತ ದ್ವಿಚಕ್ರ ವಾಹನವೂ ಸುಟ್ಟ ಸ್ಥಿತಿಯಲ್ಲಿ ಬಿದ್ದಿತ್ತು. ಹೆಚ್ಚಿನ ತನಿಖೆಗಾಗಿ ಜ್ಞಾನಭಾರತಿ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿವಿಯಲ್ಲಿನ ವಿದ್ಯಾರ್ಥಿಗಳಿಗೆ 2 ದಿನ ರಜೆ ನೀಡಲಾಗಿತ್ತು. ಈ ವೇಳೆ ಘಟನೆ ನಡೆದಿರಬಹುದು. ಅಪರಿಚತ ವ್ಯಕ್ತಿಗಳು ವಿಭಾಗದ ಬಾಗಿಲು ಹಾಗೂ ಕಿಟಕಿ ಗಾಜುಗಳನ್ನು ಒಡೆದಿದ್ದಾರೆ. ಬಾಗಿಲುಗಳು ಲಾಕ್ ಆಗಿದ್ದರಿಂದ ಯಾರೂ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಸ್ಥಳದಲ್ಲಿ ಸಿಸಿಟಿವಿ ಇಲ್ಲ, ಸಿಸಿಟಿವಿ ಅಳವಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಅಲ್ಲದೆ, ಹೆಚ್ಚಿನ ಭದ್ರತಾ ಸಿಬ್ಬಂದಿಗೆ ಮನವಿ ಮಾಡಲಾಗಿದೆ. ಮೊದಲು ಒಬ್ಬ ಹೋಮ್ ಗಾರ್ಡ್ ರಾತ್ರಿಯಲ್ಲಿ ಇಲಾಖೆಯ ಬಳಿ ಇರುತ್ತಿದ್ದರು, ಆದರೆ ಈಗ ಅವರು ಬೀಟ್‌ಗೆ ಬರುತ್ತಾರೆ ”ಎಂದು ಡಾ ಶ್ರೀನಿವಾಸ್ ತಿಳಿಸಿದ್ದಾರೆ.

ಈ ಸಂಬಂಧ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನದ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಆರೋಪಿಗಳು ಕುಡಿದು ಜಗಳವಾಡಿರಬಹುದು ಎಂಬ ಶಂಕೆಯಿದೆ ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com