
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಇತ್ತೀಚೆಗೆ ಹಂತ-3 ರ ಪರಿಷ್ಕೃತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಿದೆ.
ಪರಿಷ್ಕೃತ ಪ್ರಸ್ತಾವನೆಯಲ್ಲಿ, ಸಾಮಾನ್ಯ ಆರು ಬೋಗಿಗಳ ರೈಲುಗಳ ಬದಲಿಗೆ ಅದರ ಒಂದು ಕಾರಿಡಾರ್‌ಗೆ ಮೂರು ಬೋಗಿಗಳ ರೈಲುಗಳನ್ನು ಮಾತ್ರ ನಿಯೋಜಿಸಲಾಗಿರುವುದರಿಂದ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಮೆಟ್ರೋದ ಮೂರನೇ ಹಂತವನ್ನು 44.65 ಕಿಮೀ ಉದ್ದಕ್ಕೆ ಪ್ರಸ್ತಾಪಿಸಲಾಗಿದ್ದು, ಎರಡು ಎಲಿವೇಟೆಡ್ ಕಾರಿಡಾರ್‌ಗಳನ್ನು ಹೊಂದಿದೆ. ಒಂದು ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಹೊರವರ್ತುಲ ರಸ್ತೆ (12.5 ಕಿಮೀ) ಮತ್ತು ಇನ್ನೊಂದು ಹೊಸಹಳ್ಳಿಯಿಂದ ಕಡಬಗೆರೆವರೆಗೆ ಮಾಗಡಿ ರಸ್ತೆ (32.15 ಕಿಮೀ). ಇದು ಒಟ್ಟು 31 ನಿಲ್ದಾಣಗಳನ್ನು ಹೊಂದಿರುತ್ತದೆ ಎನ್ನಲಾಗಿದೆ.
BMRCL ನ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಮ್ ಪರ್ವೇಜ್ TNIE ಯೊಂದಿಗೆ ಈ ಬಗ್ಗೆ ಮಾತನಾಡಿದ್ದು, “ನಾವು ನಮ್ಮ ವಿವರವಾದ ಯೋಜನಾ ವರದಿಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅನುಮೋದನೆಗಾಗಿ ಮರು ಸಲ್ಲಿಸಿದ್ದೇವೆ. ಹಂತ 3 ರ ಪರಿಷ್ಕೃತ ಒಟ್ಟಾರೆ ವೆಚ್ಚವು ಸುಮಾರು 15,600 ಕೋಟಿ ರೂಪಾಯಿಗಳವರೆಗೆ ಬರುತ್ತದೆ ಮತ್ತು ಮಾಗಡಿ ರಸ್ತೆ ಕಾರಿಡಾರ್ ಹೊಸ ಮಾರ್ಗವಾಗಿರುವುದರಿಂದ, ನಾವು ಆರಂಭದಲ್ಲಿ ಮೂರು ಬೋಗಿಗಳನ್ನು ಹೊಂದಿರುವ ರೈಲುಗಳನ್ನು ಮಾತ್ರ ಬಳಸಬೇಕೆಂದು ಕೇಂದ್ರ ಸರ್ಕಾರವು ಬಯಸುತ್ತದೆ, ಆದರೆ ನಮ್ಮ ಆರಂಭಿಕ ಡಿಪಿಆರ್ ಆರು ಕಾರ್ ಬೋಗಿಗಳನ್ನು ಪ್ರಸ್ತಾಪಿಸಿದೆ. ಆದ್ದರಿಂದ, ನಾವು ಅದನ್ನು ಪರಿಷ್ಕರಿಸಿ ಮತ್ತೆ ಸಲ್ಲಿಸಬೇಕಾಗಿತ್ತು. ನಂತರ, ಅಗತ್ಯವಿದ್ದರೆ ಪ್ರೋತ್ಸಾಹದ ಆಧಾರದ ಮೇಲೆ, ನಾವು ರೈಲುಗಳನ್ನು ಆರು ಕಾರ್‌ಗಳಿಗೆ ಹೆಚ್ಚಿಸಬಹುದು ಎಂದು ಹೇಳಿದ್ದಾರೆ.
ಹಿನ್ನೆಲೆ
16,328 ಕೋಟಿ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ ಫೆಬ್ರವರಿ 2023 ರಲ್ಲಿ ಕೇಂದ್ರಕ್ಕೆ ಸಲ್ಲಿಸಿ ಸುಮಾರು ಒಂದು ವರ್ಷ (ನವೆಂಬರ್ 18, 2022) ಆಗಿದೆ. ಕೇಂದ್ರ ಸರ್ಕಾರವು ಸ್ಪಷ್ಟನೆಗಳನ್ನು ಕೋರಿ, ರಾಜ್ಯ ಮತ್ತು ಕೇಂದ್ರದ ನಡುವಿನ ಕಡತಗಳನ್ನು ಪದೇ ಪದೇ ಕೇಳಿದಾಗ, ಅನುಮೋದನೆ ಇನ್ನೂ ಬಂದಿಲ್ಲ. ಅಂದಹಾಗೆ ಈ ನಮ್ಮ ಮೆಟ್ರೋ ಹಂತ-3 2028 ರ ಮುಕ್ತಾಯದ ಗಡುವನ್ನು ಹೊಂದಿದೆ.
Advertisement