ರಾಜ್ಯದ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಪ್ರಕರಣಗಳು: ಆಸ್ಪತ್ರೆಗಳಲ್ಲಿದೆ ತಜ್ಞರ ಕೊರತೆ!

ರಾಜ್ಯದಲ್ಲಿ ಕ್ಯಾನ್ಸರ್ ರೋಗಕ್ಕೊಳಗಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಆಸ್ಪತ್ರೆಗಳಲ್ಲಿ ಮಕ್ಕಳ ಆಂಕೊಲಾಜಿ ತಜ್ಞರ ಕೊರತೆಯಿದೆ ಎಂಬುದ ಕಳವಳವನ್ನು ಸೃಷ್ಟಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕ್ಯಾನ್ಸರ್ ರೋಗಕ್ಕೊಳಗಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಆಸ್ಪತ್ರೆಗಳಲ್ಲಿ ಮಕ್ಕಳ ಆಂಕೊಲಾಜಿ ತಜ್ಞರ ಕೊರತೆಯಿದೆ ಎಂಬುದ ಕಳವಳವನ್ನು ಸೃಷ್ಟಿಸಿದೆ.

ಕಳೆದ ಕೆಲವು ವರ್ಷಗಳಿಂದ ರಾಜ್ಯದ ಹೆಚ್ಚಿನ ಮಕ್ಕಳು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. 2022-23ರಲ್ಲಿ 87,000 ಹೊಸ ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚಾಗಿ 0-14 ವರ್ಷದೊಳಗಿನ ಮಕ್ಕಳಿಗೆ ಕಾನ್ಸರ್ ಭಾದಿಸುತ್ತಿದೆ.

ಸೆಪ್ಟೆಂಬರ್ 2023 ರಲ್ಲಿ ಬಿಡುಗಡೆಯಾದ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ (KMIO) ಕ್ಯಾನ್ಸರ್ ಬರ್ಡನ್ ವರದಿ ಪ್ರಕಾರ, ಎಲ್ಲಾ ಕ್ಯಾನ್ಸರ್​​​ ಮಾದರಿಯಲ್ಲಿ ಮಕ್ಕಳು ಕ್ಯಾನ್ಸರ್ 7-9 ಪ್ರತಿಷತದಷ್ಟಿದೆ. ಬೆಂಗಳೂರಿನಲ್ಲಿ, ಶೇಕಡಾ 2 ರಷ್ಟಿದೆ.

ಕೆಎಂಐಒ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಅರುಣ್ ಕುಮಾರ್ ಎ.ಆರ್ ಅವರು ಮಾತನಾಡಿ, ಮಕ್ಕಳ ಆಂಕೊಲಾಜಿಸ್ಟ್‌ಗಳ ಕೊರತೆಯಿದೆ. ಈ ಹಿಂದೆ ಮಕ್ಕಳ ಆಂಕೊಲಾಜಿ ಪ್ರಕರಣಗಳನ್ನು ವೈದ್ಯಕೀಯ ಅಥವಾ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್‌ಗಳು ನಿರ್ವಹಿಸುತ್ತಿದ್ದರು. ಏಕೆಂದರೆ ಈ ನಿರ್ದಿಷ್ಟ ರೋಗಕ್ಕೆ ಸೂಪರ್ ಸ್ಪೆಷಾಲಿಟಿ ಹೊಂದಿರುವ ಹೆಚ್ಚಿನ ತರಬೇತಿ ಪಡೆದ ವೈದ್ಯರು ಇರಲಿಲ್ಲ. ಈಗ, ಮಕ್ಕಳ ಆಂಕೊಲಾಜಿಸ್ಟ್‌ಗಳಿಗೆ ತರಬೇತಿ ನೀಡಲು ಕೆಎಮ್​ಐಒನಲ್ಲಿ ಪ್ರತಿ ವರ್ಷ ಮಕ್ಕಳ ಆಂಕೊಲಾಜಿ ಸೂಪರ್ ಸ್ಪೆಷಾಲಿಸ್ಟ್​ ವೈದ್ಯರನನ್ನು ತಯಾರಾಗುತ್ತಿದ್ದಾರೆ ಎಂದು ಹೇಳಿದರು.

ಕೆಎಮ್​ಐಒ ಪೀಡಿಯಾಟ್ರಿಕ್ ವಾರ್ಡ್​​ನಲ್ಲಿ ಪ್ರತಿದಿನ 4-5 ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಲ್ಯುಕೇಮಿಯಾ, ಲಿಂಫೋಮಾ, ಬ್ರೈನ್ ಟ್ಯೂಮರ್, ಘನ ಗೆಡ್ಡೆ ಮತ್ತು ಮೂಳೆ ಮೃದು ಅಂಗಾಂಶದ ಕ್ಯಾನ್ಸರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ ಎಂದು ತಿಳಿಸಿದರು.

ಕೆಎಂಐಒ ನಿರ್ದೇಶಕ ಡಾ.ವಿ.ಲೋಕೇಶ್ ಮಾತನಾಡಿ, ಜನರು ತಡೆಗಟ್ಟುವ ಕ್ರಮಗಳನ್ನು ಕೈಗೊಂಡರೆ ಹೆಚ್ಚುತ್ತಿರುವ ಎಲ್ಲಾ ಕ್ಯಾನ್ಸರ್‌ಗಳ ಹೊರೆಯನ್ನು ಶೇ.50 ರಷ್ಟು ಕಡಿಮೆ ಮಾಡಬಹುದು. ದೈನಂದಿನ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಕಡಿಮೆ ಆಲ್ಕೋಹಾಲ್ ಮತ್ತು ತಂಬಾಕು ಸೇವನೆಯಂತಹ ಸರಳ ಅಭ್ಯಾಸಗಳು ಕ್ಯಾನ್ಸರ್ ಹೊರೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com