
ಬೆಂಗಳೂರು: ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ 36 ವರ್ಷದ ವ್ಯಕ್ತಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಮಾದೇಶ ಆರ್ ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತ ರಾಜಕುಮಾರ್ (34) ಎಂಬಾತನನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಇಬ್ಬರೂ ಕೆಂಗೇರಿ ಸ್ಯಾಟಲೈಟ್ ಟೌನ್ ನಿವಾಸಿಗಳಾಗಿದ್ದು, ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿದ್ದರು. ನವೆಂಬರ್ 6 ರಂದು ರಾತ್ರಿ ಮಾದೇಶ ಮತ್ತು ರಾಜ್‌ಕುಮಾರ್ ಅವರ ಮನೆಯ ಸಮೀಪವಿರುವ ಖಾಲಿ ಜಾಗದಲ್ಲಿ ಮದ್ಯ ಸೇವಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರ ನಡುವೆ ಮಾರಾಮಾರಿ ನಡೆದಿದ್ದು, ಮಾದೇಶ ರಾಜ್‌ಕುಮಾರ್‌ಗೆ ಚಾಕುವಿನಿಂದ ಇರಿದಿದ್ದಾನೆ ಎನ್ನಲಾಗಿದೆ. ಚಾಕುವಿನಿಂದ ಇರಿದ ನಂತರ ಮಾದೇಶ ತನ್ನ ಕಾರಿನಲ್ಲಿ ಹೋಗಿ ಖಲೀಂ ಎಂದು ಗುರುತಿಸಲಾದ ಮತ್ತೊಬ್ಬ ಸ್ನೇಹಿತನನ್ನು ಕರೆತಂದನು, ರಾಜ್‌ಕುಮಾರ್ ಮೇಲೆ ಯಾರೋ ಹಲ್ಲೆ ಮಾಡಿದ್ದಾರೆಂದು ತಿಳಿದು ಅವನನ್ನು ರಕ್ಷಿಸಲು ಹೋಗುತ್ತಿದ್ದೇನೆ ಎಂದು ಹೇಳಿದ್ದ. “ಮಾದೇಶ ಮತ್ತು ಖಲೀಂ ರಾಜ್‌ಕುಮಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಪೊಲೀಸ್ ವಿಚಾರಣೆ ವೇಳೆ ಖಲೀಂ ತಪ್ಪೊಪ್ಪಿಕೊಂಡಿದ್ದು, ಕೂಡಲೇ ಮಾದೇಶ ತಲೆಮರೆಸಿಕೊಂಡಿದ್ದಾನೆ. ರಾಜ್‌ಕುಮಾರ್ ಗಾಯಗೊಂಡು ಮೃತಪಟ್ಟಿದ್ದಾರೆ. ಮರುದಿನ ಮಾದೇಶನನ್ನು ಬಂಧಿಸಲಾಯಿತು' ಎಂದು ಪೊಲೀಸರು ತಿಳಿಸಿದ್ದಾರೆ.
Advertisement