
ಬೆಂಗಳೂರು: ನಾಗರಭಾವಿ ನಿವಾಸಿಗಳಿಗೆ ನಿದ್ದೆಯಿಲ್ಲದ ರಾತ್ರಿಯನ್ನು ಕಳೆಯುವಂತೆ ಮಾಡುತ್ತಿದ್ದ 14 ಮಂದಿ ಬೈಕ್ ಸವಾರರನ್ನು ಬಂಧಿಸಿರುವ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
'ಡೆವಿಲ್ಸ್ ಆನ್ ರೋಡ್' ಎಂಬ ತಂಡ ಕಟ್ಟಿಕೊಂಡಿದ್ದ ಬೈಕ್ ಸವಾರರು, ಕರ್ಕಶ ಶಬ್ದ ಮಾಡುವ ಸೈಲೆನ್ಸರ್ ಹಾಕಿಕೊಂಡು ವಾರಾಂತ್ಯದಲ್ಲಿ ರಾತ್ರಿ 11 ರಿಂದ ಬೆಳಗಿನ ಜಾವ 2 ಗಂಟೆಯ ನಡುವೆ ವ್ಹೀಲಿಂಗ್ ಮಾಡುತ್ತಾ ಅನಾಹುತ ಸೃಷ್ಟಿಸುತ್ತಿದ್ದರು. ಇದರ ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಆರಂಭದಲ್ಲಿ ಒಬ್ಬನನ್ನು ಬಂಧಿಸಿದ್ದು ಆತನ ಸಹಾಯದಿಂದ ಉಳಿದ 13 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊರ ವರ್ತುಲ ರಸ್ತೆ (ಒಆರ್‌ಆರ್) ಸ್ಟ್ರೆಚ್ ಮತ್ತು ನಾಗರಭಾವಿ ಸರ್ವಿಸ್ ರಸ್ತೆಯಲ್ಲಿ ಯುವಕರು ವ್ಹೀಲಿ ಮಾಡುವ ಬಗ್ಗೆ ನಾಗರಭಾವಿ ನಿವಾಸಿಗಳು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಡೆವಿಲ್ಸ್ ಆನ್ ರೋಡ್ ತಂಡ ವ್ಹೀಲಿಂಗ್ ಮಾಡುತ್ತಾ ವಿಡಿಯೋವನ್ನು ಚಿತ್ರೀಕರಿಸಿ ಅವುಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡುತ್ತಾರೆ.
ಸಾಮಾಜಿಕ ಮಾಧ್ಯಮದಲ್ಲಿ ತನ್ನ ವೀಡಿಯೊವನ್ನು ಹಾಕಿಕೊಂಡಿದ್ದ ಸವಾರನೊಬ್ಬನನ್ನು ಮೊದಲಿಗೆ ಗುರುತಿಸಲಾಗಿತ್ತು ಎಂದು ಪೊಲೀಸರು ವಿವರಿಸಿದರು. ಆತನ ಬಂಧನದ ನಂತರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 8 ಮಂದಿ ಸೇರಿದಂತೆ ಸುಮಾರು 13 ಯುವಕರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಡಿಯೋಗಳನ್ನು ಹಾಕಿಕೊಂಡಿದ್ದಾರೆ ಎಂದು ಆತ ಪೊಲೀಸರಿಗೆ ತಿಳಿಸಿದ್ದನು.
ಉಲ್ಲಂಘಿಸಿದವರೆಲ್ಲರೂ 20 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳು ಎಂದು ಡಿಸಿಪಿ ಸಂಚಾರಿ (ಪಶ್ಚಿಮ) ಅನಿತಾ ಬಿ ಹದ್ದನ್ನವರ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಚಾಲನೆ ಮಾಡುವಾಗ ವ್ಹೀಲಿಂಗ್ ಮಾಡುವುದು ಸವಾರರಿಗೆ ಅಪಾಯಕಾರಿ ಸಾಹಸವಾಗಿದೆ. ಯುವಕರು ರೋಚಕತೆಗಾಗಿ ಇಂತಹ ಸಾಹಸಗಳಲ್ಲಿ ತೊಡಗುತ್ತಾರೆ ಎಂದು ಹೇಳಿದರು.
Advertisement