ಎಫ್‌ಕೆಸಿಸಿಐ ನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಪ್ರಸ್ತುತ ಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸುತ್ತಿಲ್ಲ: ರಮೇಶ್ ಚಂದ್ರ ಲಾಹೋಟಿ (ಸಂದರ್ಶನ)

ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಂದ ಹಿಡಿದು ಬೆಂಗಳೂರಿನ ಆಚೆಗೆ ಗಮನ ಹರಿಸಬೇಕಾದ ಅಗತ್ಯ ಮತ್ತು ಬದಲಾವಣೆಗಳನ್ನು ಉದ್ಯಮಗಳು ಎದುರು ನೋಡುತ್ತಿವೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (KFCCI) ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಹೇಳಿದ್ದಾರೆ.
ಕೆಎಫ್‌ಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ.
ಕೆಎಫ್‌ಸಿಸಿಐ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ.

ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಂದ ಹಿಡಿದು ಬೆಂಗಳೂರಿನ ಆಚೆಗೆ ಗಮನ ಹರಿಸಬೇಕಾದ ಅಗತ್ಯ ಮತ್ತು ಬದಲಾವಣೆಗಳನ್ನು ಉದ್ಯಮಗಳು ಎದುರು ನೋಡುತ್ತಿವೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (KFCCI) ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಹೇಳಿದ್ದಾರೆ. ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕರು ಮತ್ತು ಸಿಬ್ಬಂದಿಯೊಂದಿಗೆ ನಡೆಸಿದ ಸಂವಾದ ವೇಳೆ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದ್ದಾರೆ. 

ಎಫ್ ಕೆಸಿಸಿಐ ಅಧ್ಯಕ್ಷರಾಗಿ, ನಿಮ್ಮ ಪ್ರಮುಖ ಆದ್ಯತೆಗಳು ಯಾವುವು ಮತ್ತು ಅವುಗಳನ್ನು ಪರಿಹರಿಸಲು ನಿಮ್ಮ ಕ್ರಮಗಳೇನು? 
ಕಳೆದ 20 ವರ್ಷಗಳಿಂದ ಎಫ್‌ಕೆಸಿಸಿಐನ ಭಾಗವಾಗಿರುವುದು ನನ್ನ ಪಾಲಿಗೆ ವಿಶೇಷ. ನಾನಾ ಸಮಿತಿಗಳ ನೇತೃತ್ವ ವಹಿಸಿದ್ದೇನೆ. ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರೊಂದಿಗೆ ಚರ್ಚಿಸುತ್ತಿದ್ದೇನೆ. ನಾನು ನಾಗರಿಕ ವ್ಯವಹಾರ ಇಲಾಖೆಯಲ್ಲಿದ್ದೆ ಅಲ್ಲಿ ಅಪಾರ್ಟ್ಮೆಂಟ್ ಮಾಲೀಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ನನ್ನ ಕೆಲಸದ ಗುಣಮಟ್ಟ ನನ್ನನ್ನು ಎಫ್‌ಕೆಸಿಸಿಐ ಅಧ್ಯಕ್ಷನನ್ನಾಗಿ ಮಾಡಿದೆ.

ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಸರ್ಕಾರ ಹಲವಾರು ಕ್ರಮಗಳನ್ನು ಜಾರಿಗೆ ತರುತ್ತಿದೆ. ಹೂಡಿಕೆದಾರರನ್ನು ಆಕರ್ಷಿಸುವಾಗ ಪ್ರಮುಖ ಸವಾಲುಗಳು ಯಾವುವು?
ಪ್ರತಿ ಸರ್ಕಾರವೂ ಎರಡು ವರ್ಷಕ್ಕೊಮ್ಮೆ ‘ಇನ್ವೆಸ್ಟ್ ಕರ್ನಾಟಕ’ ಆಯೋಜಿಸುತ್ತದೆ. ಒಪ್ಪಂದಗಳನ್ನು ಪಡೆಯುವುದು ಮತ್ತು ಅವುಗಳನ್ನು ವಾಸ್ತವಕ್ಕೆ ಪರಿವರ್ತಿಸುವುದು ಒಂದು ಪ್ರಮುಖ ಕಾಳಜಿಯಾಗಿದೆ. ಸರ್ಕಾರವು 'ವಿಷನ್ ಗ್ರೂಪ್' ಎಂದು ಕರೆಯಲ್ಪಡುವ ಮೂರು ಸಮಿತಿಗಳನ್ನು ರಚಿಸಿದೆ. ನನ್ನ ಪ್ರಶ್ನೆ ಎಫ್ ಕೆಸಿಸಿಐ ಅಥವಾ ಇತರ ವ್ಯಾಪಾರ ಸಂಸ್ಥೆಗಳನ್ನು ಇಲ್ಲಿ ಪ್ರತಿನಿಧಿಸುವುದಿಲ್ಲ. ಎಫ್ ಕೆಸಿಸಿಐ, ಕೈಗಾರಿಕೆಗಳನ್ನು ಪ್ರತಿನಿಧಿಸುವ ಮುಖ್ಯ ಪೋಷಕ ಸಂಸ್ಥೆಯಾಗಿದೆ. ಈ ಮೂರು ಸಮಿತಿಗಳನ್ನು ರಚಿಸುವಲ್ಲಿ ಪ್ರಸ್ತುತ ಸರ್ಕಾರದ ಚಿಂತನೆಯೇನಿದೆ? ಕಾರ್ಮಿಕ ಇಲಾಖೆ ಮತ್ತೊಂದು ಸಮಸ್ಯೆಯಾಗಿದೆ. ಪ್ರಸ್ತುತ ಕಾರ್ಮಿಕ ಶುಲ್ಕ ಕರ್ನಾಟಕದಲ್ಲಿ 16,500 ರೂಪಾಯಿಗಳಿದ್ದು ಅದನ್ನು 31,000 ರೂಪಾಯಿಗೆ ಹೆಚ್ಚಿಸಬೇಕೆಂದು ಪ್ರಸ್ತಾವಿಸಲಾಗಿದೆ. ನೆರೆಯ ತಮಿಳುನಾಡು 12,500 ರೂಪಾಯಿ ಇದು ಮೂಲಭೂತ ಕನಿಷ್ಠ ವೇತನದ ಬಗ್ಗೆ. ಹೂಡಿಕೆದಾರರಿಗೆ ಇದರ ಬಗ್ಗೆ ಅರಿವಿಲ್ಲ. ಒಂದೇ ಸ್ಥಳದಲ್ಲಿ ಎಲ್ಲಾ ಇಲಾಖೆಗಳೊಂದಿಗೆ ಹೂಡಿಕೆದಾರರನ್ನು ಕರೆಯುವುದು ಉತ್ತಮ.

ಇದನ್ನು ಅರ್ಥಮಾಡಿಕೊಳ್ಳಲು ಸರ್ಕಾರ ವಿಫಲವಾಗಿದೆಯೇ?
ಕಾರ್ಪೊರೇಟ್‌ಗಳ ಹಿತಾಸಕ್ತಿ ಮತ್ತು ಅಭಿಮಾನಕ್ಕೆ ತಕ್ಕಂತೆ ಸರ್ಕಾರವು ನಡೆಯುತ್ತಿದ್ದು, ನೀತಿಗಳು ಹೇಳಿ ಮಾಡಿಸಿದಂತಿವೆ. ಕಳೆದ ಐದು ದಶಕಗಳಲ್ಲಿ ಗಣನೀಯ ಕೊಡುಗೆ ನೀಡಿದ ಸ್ಥಳೀಯ ಕೈಗಾರಿಕೆಗಳ ಬಗ್ಗೆ ಸರ್ಕಾರ ಚಿಂತಿಸುತ್ತಿಲ್ಲ. ಸರ್ಕಾರ ಹೂಡಿಕೆಯ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿದೆ. ಕಾರ್ಮಿಕ ನೀತಿಗಳು ಹೂಡಿಕೆಯೊಂದಿಗೆ ಪರಸ್ಪರ ಸಂಬಂಧ ಹೊಂದಿಲ್ಲ. ಕಾರ್ಮಿಕ ನೀತಿಗಳು ಪ್ರಮುಖ ಪಾತ್ರವಹಿಸುತ್ತವೆ.

ಸರಕಾರ ಒದಗಿಸಿರುವ ಮೂಲಸೌಕರ್ಯಗಳೇನು?
ಕೈಗಾರಿಕೆ ಸ್ಥಾಪನೆಯಾದ ನಂತರ ಮೂಲ ಸೌಕರ್ಯಗಳನ್ನು ಕೂಡ ಒದಗಿಸಿಲ್ಲ. ಸರಕಾರ ಭರವಸೆ ನೀಡಿದ ಸೌಲಭ್ಯಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಿಗದಿತ ಸಮಯದೊಳಗೆ ಉದ್ಯಮವನ್ನು ಸ್ಥಾಪಿಸದಿದ್ದರೆ ಮಾತ್ರ ಹಂಚಿಕೆಯಾದ ಕೈಗಾರಿಕಾ ಪ್ಲಾಟ್‌ಗಳನ್ನು ಹಿಂಪಡೆಯಲು ನೋಡುತ್ತವೆ. 

ಸರ್ಕಾರವು ಕಾರ್ಪೊರೇಟ್ ವಲಯದಲ್ಲಿ ಹೂಡಿಕೆಯನ್ನು ಪರಿಗಣಿಸುತ್ತಿದ್ದರೆ, ಅದು ಇತರ ಕೈಗಾರಿಕೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲವೇ?
ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರವು ರಚಿಸಿರುವ ವಿಷನ್ ಗ್ರೂಪ್‌ಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಮತ್ತು ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ(SME) ವಲಯಗಳಿಂದ ಪ್ರಮುಖ ಸದಸ್ಯರನ್ನು ಹೊಂದಿರುವ ವ್ಯಾಪಾರ ಸಂಸ್ಥೆಗಳನ್ನು ಏಕೆ ಸೇರಿಸಲಾಗಿಲ್ಲ? ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ವಿದ್ಯುತ್ ದರ ಏರಿಕೆ ವಿಚಾರದಲ್ಲಿ ಸಮಸ್ಯೆ ಇದ್ದು, ಇಂಧನ ಸಚಿವ ಕೆ.ಜೆ.ಜಾರ್ಜ್ ನಮ್ಮೊಂದಿಗೆ ಮಾತನಾಡಿದರು. ರಾಜ್ಯಾದ್ಯಂತ ಹಲವಾರು ಸಭೆಗಳನ್ನು ನಡೆಸಿ ಸ್ಥಳೀಯ ಕೈಗಾರಿಕೆಗಳಿಗೆ ಮನವರಿಕೆ ಮಾಡಿದ್ದೇವೆ. ಆದರೆ ನೀತಿಗಳು ಮತ್ತು ಹೂಡಿಕೆಗಳನ್ನು ಮಾಡಲು ಬಂದಾಗ, ಎಫ್ ಕೆಸಿಸಿಐ ಪ್ರಾತಿನಿಧ್ಯವಿಲ್ಲ. ಸರ್ಕಾರದ ಇಂತಹ ದ್ವಂದ್ವ ನೀತಿಗಳು ಹೆಚ್ಚು ಕಾಲ ನಡೆಯಲು ಸಾಧ್ಯವಿಲ್ಲ.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು(MSME)ಗಳನ್ನು ಬೆಂಬಲಿಸಲು ನೀವು ಹೇಗೆ ಯೋಜಿಸುತ್ತೀರಿ?
ಸದ್ಯ ಸರ್ಕಾರದಲ್ಲಿ ನಮ್ಮ ಮಾತಿಗೆ ಮನ್ನಣೆಯಿಲ್ಲ. ಸರ್ಕಾರವು ಎಫ್‌ಕೆಸಿಸಿಐ ಅಥವಾ ಇತರ ಯಾವುದೇ ವ್ಯಾಪಾರ ಉದ್ಯಮ ಸಂಸ್ಥೆಗಳನ್ನು ದೀರ್ಘಕಾಲ ನಿರ್ಲಕ್ಷಿಸುವಂತಿಲ್ಲ. ಪ್ರತಿ ಆರು ತಿಂಗಳಿಗೊಮ್ಮೆ, ಹೊಸ ನೀತಿಗಳು, ಸುಂಕ ಮತ್ತು ಜಿಎಸ್ ಟಿ ಸಮಸ್ಯೆಗಳು ಬೆಳೆಯುತ್ತವೆ. ಸರ್ಕಾರವು ಎಫ್ ಕೆಸಿಸಿಐನ್ನು ಸಂಪರ್ಕಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಯಾವುದೇ ಕಾರ್ಪೊರೇಟ್‌ಗಳು ಬಂದು ಘಟಕಗಳನ್ನು ಸ್ಥಾಪಿಸಲು ನಾವು ಗಣನೀಯ ಕೊಡುಗೆ ನೀಡುತ್ತೇವೆ. ಆದರೆ ಎಸ್‌ಎಂಇಗಳನ್ನು ನಿರ್ಲಕ್ಷಿಸುವಂತಿಲ್ಲ. ಇದು ನಾನು ಸರ್ಕಾರಕ್ಕೆ ನೀಡಲು ಬಯಸುವ ಸಂದೇಶ. ನಾವು 1 ಟ್ರಿಲಿಯನ್ ಡಾಲರ್ ಪರಿಕಲ್ಪನೆಯನ್ನು ಪ್ರಾರಂಭಿಸಿ ರಾಜ್ಯವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೇಗೆ ಉತ್ತಮವಾಗಿ ಮಾಡಬಹುದು ಎಂಬುದನ್ನು ನಾವು ನೋಡಬೇಕಾಗಿದೆ. ಸರ್ಕಾರದಿಂದ ತೊಂದರೆ ಆಗಬಾರದು. 

ಕೈಗಾರಿಕೆಗಳಿಗೆ ವಿದ್ಯುತ್ ಪೂರೈಕೆ ಪರಿಸ್ಥಿತಿ ಹೇಗಿದೆ?
ಪ್ರಸ್ತುತ, ರಾಜ್ಯ ಸರ್ಕಾರವು ಈ ವರ್ಷ ಪೂರ್ತಿ ಕೈಗಾರಿಕೆಗಳಿಗೆ ವಿದ್ಯುತ್ ನೀಡಬಹುದು. ನಾವು ಯಾವುದೇ ಉಚಿತ ವಿದ್ಯುತ್ ಕೇಳುವುದಿಲ್ಲ. ಸರ್ಕಾರ ಕಡಿಮೆ ದರಕ್ಕೆ ವಿದ್ಯುತ್ ಖರೀದಿಸಿ ನಮಗೆ 8 ರೂಪಾಯಿ ನೀಡುತ್ತಿದೆ. ಸರ್ಕಾರ ನಮಗೆ ವಿದ್ಯುತ್ ನೀಡಲು ಸಾಧ್ಯವಾಗದಿದ್ದರೆ, ನಾವು ನಮ್ಮದೇ ಆದ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೊಂದಬಹುದು. ಮುಂಗಾರು ಮಳೆ ಕೃಷಿ ಚಟುವಟಿಕೆ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಸರ್ಕಾರವು ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸುತ್ತದೆ.

ಕರ್ನಾಟಕದಲ್ಲಿ ಕೈಗಾರಿಕೆಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳು ಯಾವುವು?
ಕೈಗಾರಿಕೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯೊಂದಿಗೆ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿವೆ, ಅವುಗಳ ಮಾನದಂಡಗಳನ್ನು ಅನುಸರಿಸುವುದು ತುಂಬಾ ಕಷ್ಟ. ಮಾಲಿನ್ಯ ನಿಯಂತ್ರಣ ಮಂಡಳಿ ಕೈಗಾರಿಕೆಗಳಿಗೆ ದುಃಸ್ವಪ್ನವಾಗಿ ಪರಿಣಮಿಸಿದೆ. ಅಧ್ಯಕ್ಷನಾಗಿ ನಾನು ಈ ವಿಷಯವನ್ನು ಪ್ರಸ್ತಾಪಿಸಲಿದ್ದೇನೆ. ಕೆಳಮಟ್ಟದಲ್ಲಿ ಭ್ರಷ್ಟಾಚಾರ ಹೋಗಬೇಕು. ನಾನು ಈ ಕುರಿತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಚರ್ಚಿಸಿದ್ದೇನೆ. ಸದ್ಯಕ್ಕೆ ಕರ್ನಾಟಕದಲ್ಲಿ ವ್ಯಾಪಾರ ಮಾಡಲು ಸುಲಭವಿಲ್ಲ. 

ಕೋವಿಡ್ ನಂತರ ಎಷ್ಟು ಹೊಸ ಕೈಗಾರಿಕೆಗಳು ಮತ್ತು ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಬಂದಿವೆ?
ಕೋವಿಡ್ ನಂತರ, ಸುಮಾರು ಶೇಕಡಾ 30ರಷ್ಟು MSME ಗಳು ಪಾವತಿ ಮತ್ತು ಇತರ ಸಮಸ್ಯೆಗಳಿಂದಾಗಿ ಸ್ಥಗಿತಗೊಂಡಿವೆ. ಮಾಚೋಹಳ್ಳಿ, ಪೀಣ್ಯ, ದೊಬ್ಬಾಸ್ ಪೇಟೆ, ಕುಂಬಳಗೋಡು ಕೈಗಾರಿಕಾ ಪ್ರದೇಶದಲ್ಲಿ ಸಣ್ಣ, ಸೂಕ್ಷ್ಮ ಮಧ್ಯಮ ಕೈಗಾರಿಕೆಗಳು ಬಂದ್ ಆಗಿವೆ. ಕಳೆದ ವರ್ಷದಲ್ಲಿ, ಹೊಸ ಕೈಗಾರಿಕೆಗಳು ಬರುತ್ತಿವೆ ಆದರೆ ಸರ್ಕಾರವು ಯೋಜಿಸುತ್ತಿರುವ ರೀತಿಯಲ್ಲಿ ಅಲ್ಲ. ಈ ನಷ್ಟ ತುಂಬಲು ಎರಡು ವರ್ಷ ಬೇಕು.

ಹೊಸ ಕೈಗಾರಿಕೆಗಳ ಪರಿಸ್ಥಿತಿಯನ್ನು ನೀವು ಹೇಗೆ ನೋಡುತ್ತೀರಿ? ದೇಶಾದ್ಯಂತ ಇದೇ ಆಗಿದೆಯೇ?
ನಾನು ರಾಜಸ್ಥಾನ, ಮಹಾರಾಷ್ಟ್ರ ಮತ್ತು ಗುಜರಾತ್‌ಗೆ ಹೋಗಿದ್ದೇನೆ ಮತ್ತು ಸಮಸ್ಯೆಗಳು ಒಂದೇ ರೀತಿ ಇವೆ.

ಬೆಂಗಳೂರಿನ ಕೈಗಾರಿಕೆಗಳಿಗೆ ಕಳಪೆ ಬೀದಿದೀಪಗಳು ಮತ್ತು ಕೆಟ್ಟ ರಸ್ತೆಗಳಂತಹ ಪರಿಸ್ಥಿತಿಯಿದ್ದು ಮೂಲಭೂತ ಸೌಕರ್ಯಗಳಿಲ್ಲ. ಕಾರ್ಪೊರೇಟ್ ಸಂಸ್ಥೆಗಳಿಗೆ ಹೋಲಿಸಿದರೆ ಇದು ಹೇಗೆ?
ಪೀಣ್ಯ, ಮಾಗಡಿ ರಸ್ತೆಯಂತಹ ಯಾವುದೇ ಕೈಗಾರಿಕಾ ಕ್ಲಸ್ಟರ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ. ರಾಜ್ಯದ ಇತರ ಭಾಗಗಳನ್ನು ಮರೆತುಬಿಡಿ, ಬೆಂಗಳೂರಿನಲ್ಲಿ ಕೈಗಾರಿಕೆಗಳಿಗೆ ಸೌಲಭ್ಯಗಳು ಸಿಗುತ್ತಿಲ್ಲ. ಕೈಗಾರಿಕೆ ಸ್ಥಾಪನೆಯಾದ ನಂತರ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ.

ತ್ಯಾಜ್ಯವನ್ನು ಹೊರಹಾಕುವ ಮೂಲಕ ಜಲಮೂಲಗಳನ್ನು ಕಲುಷಿತಗೊಳಿಸುವುದಕ್ಕೆ ಕೈಗಾರಿಕೆಗಳನ್ನು ದೂಷಿಸಲಾಗುತ್ತದೆಯಲ್ಲವೇ?
ಕೈಗಾರಿಕೆ ತೆರೆಯಲು ಸರ್ಕಾರವೇ ಅನುಮತಿ ನೀಡಿದೆ. ಕೈಗಾರಿಕೆಗಳು ತಲೆಯೆತ್ತಿದರೆ ತ್ಯಾಜ್ಯಗಳು ಹೊರಹೋಗುವುದು ಸಹಜ. ಉದ್ಯಮ ಸಂಸ್ಥೆಯಾಗಿ, ನಾವು ನಮ್ಮ ಸ್ಥಳೀಯ ವ್ಯವಸ್ಥೆಯನ್ನು ಹೊಂದಿದ್ದೇವೆ, ಆದರೆ ಸರ್ಕಾರವು ಸಹ ಶೇಕಡಾ 50ರಷ್ಟು ಜವಾಬ್ದಾರಿಯನ್ನು ಹೊಂದಿದೆ. ಹಾರೋಹಳ್ಳಿಯ ಪ್ರಕರಣವನ್ನೇ ತೆಗೆದುಕೊಳ್ಳಿ, ಅಲ್ಲಿ 15 ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ, ಅಲ್ಲಿ ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳಿವೆ. ಒಂದು ಕೆರೆ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದೆ. ಆದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕಾರ್ಯಕರ್ತರಿಗೆ ಸಮಸ್ಯೆ ಇದ್ದು ಕೆರೆ ಮಾಲಿನ್ಯದ ಬಗ್ಗೆ ದೂರು ನೀಡಿದರೆ ಸರಕಾರ ನಮ್ಮನ್ನು ಸ್ಥಳಾಂತರಿಸಬೇಕು. ನಮಗೆ ಸಮಯ ಮತ್ತು ಆಯ್ಕೆಯನ್ನು ನೀಡಿ, ನಾವು ಹಂತಹಂತವಾಗಿ ಸ್ಥಳಾಂತರಗೊಳ್ಳಬಹುದು. ಜಲಮೂಲಗಳಿಗೆ ತೊಂದರೆಯಾಗಿದ್ದರೆ, ನಿವಾಸಿಗಳು ಮತ್ತು ಕಾರ್ಯಕರ್ತರು ನಮ್ಮೊಂದಿಗೆ ಸಮಸ್ಯೆಗಳನ್ನು ಹೇಳಲಿ. ಎಫ್‌ಕೆಸಿಸಿಐ ಸರ್ಕಾರದ ಗಮನಕ್ಕೆ ತಂದು ಸ್ಥಳಾಂತರಕ್ಕೆ ಕೋರಲಿದೆ.

ಎರಡನೇ ದರ್ಜೆ ನಗರಗಳಲ್ಲಿನ ಕೈಗಾರಿಕೆಗಳ ಸ್ಥಿತಿ ಹೇಗಿದೆ?
ಎರಡನೇ ದರ್ಜೆ ನಗರಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು ಸಂಬಂಧಪಟ್ಟ ಸಚಿವರ ಆಸಕ್ತಿ ಮತ್ತು ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಅಂತಹ ನಗರಗಳಲ್ಲಿ ಕೆಲವು ಘಟಕಗಳನ್ನು ಸ್ಥಾಪಿಸಲಾಯಿತು, ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಅವು ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಂಡವು. ಪ್ರತಿ ಜಿಲ್ಲೆಗೆ ಕನಿಷ್ಠ ಒಂದು ವಿನೂತನ ಕಲ್ಪನೆಯನ್ನು ತರಲು ನಾನು ಸಲಹೆ ನೀಡಲಿದ್ದೇನೆ. ವರ್ಷಕ್ಕೆ 3 ರಿಂದ 7 ಲಕ್ಷ ರೂಪಾಯಿ ಸಂಬಳಕ್ಕಾಗಿ ಬೆಂಗಳೂರಿಗೆ ಬರುವ ಸಾವಿರಾರು ಯುವಕರು ಉಳಿಯಲು ಕಲಬುರಗಿಗೆ ಒಂದು ದೊಡ್ಡ ಘಟಕವನ್ನು ನೀಡುವಂತೆ ನಾನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೇಳಿದ್ದೇನೆ. ಕಲಬುರಗಿಯಲ್ಲಿ 1,000-1,500 ಉದ್ಯೋಗಿ ಸಾಮರ್ಥ್ಯದ ಕೆಲವು ಕೈಗಾರಿಕೆಗಳನ್ನು ಹಾಕಿದರೆ, ವ್ಯತ್ಯಾಸ ಕಾಣಬಹುದು. 

ಕೈಗಾರಿಕೆಗಳು ಬೆಂಗಳೂರನ್ನು ಏಕೆ ಆದ್ಯತೆ ನೀಡುತ್ತವೆ ಎಂದು ನೀವು ಭಾವಿಸುತ್ತೀರಿ?
ಐಟಿ ಸೇವೆಗಳಿಂದಾಗಿ ನಗರವು ಜಾಗತಿಕವಾಗಿ ಹೆಸರು ಮಾಡಿದೆ. ಬೆಂಗಳೂರಿಗೆ ಕೈಗಾರಿಕೆಗಳು ಬರುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಸರಕಾರಕ್ಕೆ ನನ್ನ ಮನವಿ ಏನೆಂದರೆ ಕನಿಷ್ಠ ಎರಡು ಮೂರು ಕಂಪನಿಗಳನ್ನಾದರೂ ಜಿಲ್ಲಾ ಕೇಂದ್ರಗಳಿಗೆ ತರಬೇಕು. ಕಲಬುರಗಿ, ಬೆಳಗಾವಿ, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ನಾವು ಮೂಲಭೂತ ವಾಸಯೋಗ್ಯ ಪರಿಸ್ಥಿತಿಗಳನ್ನು ಹೊಂದಿದ್ದೇವೆ. ಈ ಜಿಲ್ಲೆಗಳ ಯುವಕರು ಕೆಲಸ ಮಾಡಲು ಈ ಸ್ಥಳಗಳತ್ತ ಗಮನಹರಿಸಿ ಹೂಡಿಕೆದಾರರನ್ನು ಆಕರ್ಷಿಸುವಂತೆ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮನವಿ ಮಾಡುತ್ತೇನೆ.

ಜಿಲ್ಲಾ ಕೇಂದ್ರಗಳು ಯಾವ ಸಮಸ್ಯೆಗಳನ್ನು ಎದುರಿಸುತ್ತಿವೆ? ಕೈಗಾರಿಕೆಗಳ ಬಗ್ಗೆ ನೀವು ಅವರಿಂದ ಯಾವ ವರದಿಗಳನ್ನು ಪಡೆಯುತ್ತಿದ್ದೀರಿ?
ಬಳ್ಳಾರಿ, ಕೋಲಾರ, ಧಾರವಾಡ ಮತ್ತು ಬೀದರ್‌ನಂತಹ ಸ್ಥಳಗಳಿಂದ ನಾವು ಪಡೆಯುವ ಮೂಲ ಪ್ರತಿಕ್ರಿಯೆ ಎಂದರೆ ಹೂಡಿಕೆಗಳನ್ನು ಆಕರ್ಷಿಸಲು ಸರ್ಕಾರವು ಪ್ರೋತ್ಸಾಹ ಅಥವಾ ಸಬ್ಸಿಡಿಗಳನ್ನು ನೀಡಬೇಕು. ಯೋಜನೆಗಳು ಇರಬಹುದು, ಆದರೆ ಅವು ಪ್ರಸ್ತುತ ಪರಿಸ್ಥಿತಿ ಮತ್ತು ವೆಚ್ಚಕ್ಕೆ ಸಂಬಂಧಿಸಿಲ್ಲ. ಅರಿವಿನ ಕೊರತೆಯಿಂದ ನಂಜನಗೂಡಿನಲ್ಲಿ ಆಹಾರ ಸಂಸ್ಕರಣಾ ಘಟಕ ಕೈಗೆತ್ತಿಕೊಂಡಿಲ್ಲ. ಹೂಡಿಕೆಗೆ ಸರ್ಕಾರ ಎಂಟು ಜಿಲ್ಲೆಗಳನ್ನು ಆಯ್ಕೆ ಮಾಡಲಿ, ಬೆಂಗಳೂರನ್ನು ಇದರಲ್ಲಿ ಸೇರಿಸಬಾರದು. ನಾವು ಉದ್ಯಮ ಸಚಿವಾಲಯದ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಎರಡನೇ ದರ್ಜೆ ನಗರಗಳಲ್ಲಿಯೂ ಹೂಡಿಕೆ ಮಾಡಲು ಅವರಿಗೆ ಮನವಿ ಮಾಡುತ್ತೇವೆ.

ವಿವಿಧ ರಾಜಕೀಯ ಪಕ್ಷಗಳು ಕೈಗಾರಿಕೆಗಳಿಗೆ ವಿಭಿನ್ನ ಬದ್ಧತೆಯನ್ನು ಹೊಂದಿವೆಯೇ?
ನಾನು ಎಲ್ಲಾ ಪಕ್ಷಗಳನ್ನು ನೋಡಿದ್ದೇನೆ, ಯಾವುದೇ ವ್ಯತ್ಯಾಸವಿಲ್ಲ. ಅಧಿಕಾರಕ್ಕೆ ಬರುವ ಮುನ್ನ ನಮ್ಮ ಮಾತು ಕೇಳುತ್ತೇವೆ ಎನ್ನುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ನಮ್ಮನ್ನು ಮರೆತುಬಿಡುತ್ತಾರೆ. ನಾನು ಎಫ್‌ಡಿಐ ಮತ್ತು ಚಿಲ್ಲರೆ ನೀತಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದೆ. ಈಗಿನ ಕೇಂದ್ರ ಸರ್ಕಾರ ಎಫ್‌ಡಿಐ ನಿಯಂತ್ರಣ ಮಾಡುವುದಿಲ್ಲ ಎಂದು ಭರವಸೆ ನೀಡಿತ್ತು, ಆದರೆ ಅಧಿಕಾರಕ್ಕೆ ಬಂದ ಮೇಲೆ ಎಫ್‌ಡಿಐಗೆ ತೆರೆಬಿದ್ದಿದೆ. ನಾವು ಯಾವುದೇ ಸರ್ಕಾರವನ್ನು ನಂಬಲು ಸಾಧ್ಯವಿಲ್ಲ, ಆದರೆ ಉತ್ತಮವಾದದ್ದನ್ನು ಆರಿಸಬೇಕಾಗುತ್ತದೆ.

ಪಿಎಂ ನರೇಂದ್ರ ಮೋದಿ ಅವರು 'ಲೋಕಲ್ ಫಾರ್ ವೋಕಲ್' ಮತ್ತು ಇತರರ ಘೋಷಣೆಯನ್ನು ಎತ್ತಿದರು. ವಾಸ್ತವ ಏನು?
ಘೋಷಣೆಗಳು ಕೇಳಲು ಸೊಗಸಾಗಿವೆ. 2014 ರಲ್ಲಿ ಬಿಜೆಪಿ ಅವರನ್ನು ಪ್ರಧಾನಿ ಮುಖ ಎಂದು ಘೋಷಿಸಿದಾಗ, ಪಕ್ಷವು 140 ಉದ್ಯಮದ ಮುಖ್ಯಸ್ಥರನ್ನು ಕರೆದಿತ್ತು ಮತ್ತು ಅವರಲ್ಲಿ ನಾನೂ ಒಬ್ಬ. 16 ತೆರಿಗೆ ಪರವಾನಗಿಗಳನ್ನು ನಾಲ್ಕಕ್ಕೆ ಇಳಿಸಲಾಗುವುದು ಮತ್ತು ಎಫ್‌ಡಿಐಗೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಅದು ಇನ್ನೂ ಕನಸಾಗಿಯೇ ಉಳಿದಿದೆ. ಇಂತಹ ಘೋಷಣೆಗಳಿಂದ ಮರುಳಾಗುವುದಕ್ಕೆ ನಮ್ಮನ್ನು ನಾವೇ ದೂಷಿಸಬೇಕಾಗುತ್ತದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (SME) ಪ್ರಮುಖ ಸಮಸ್ಯೆಗಳು ಯಾವುವು?
ವಿದ್ಯುತ್ ಸುಂಕ, ಹೆಚ್ಚಿನ ಕಾರ್ಮಿಕ ಶುಲ್ಕಗಳು ಮತ್ತು ನಮ್ಮ ಕ್ರೆಡಿಟ್ ಸೌಲಭ್ಯವು ನಾವು ಬ್ಯಾಂಕ್‌ಗೆ ಪಾವತಿಸಬೇಕಾದ ಪಾವತಿಗಳಿಗೆ ಹೊಂದಿಕೆಯಾಗುವುದಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ ಇವು ಮೂರು ಪ್ರಮುಖ ಕಾಳಜಿಗಳಾಗಿವೆ. ಸಾಲಗಳು ಸುಲಭವಲ್ಲ. ಮುದ್ರಾ ಸಾಲ ಪಡೆಯುವುದು ಎಷ್ಟು ಕಷ್ಟ ಗೊತ್ತಾ? ಇದು ಬೀದಿ ಬದಿ ವ್ಯಾಪಾರಿಗಳಿಗೆ ಸರಿ, ಆದರೆ ಕೈಗಾರಿಕೆಗಳಿಗೆ ಅಲ್ಲ. ಸುದೀರ್ಘ ಪ್ರಕ್ರಿಯೆಗಳು ಇರುವುದರಿಂದ ಇದು ಕಷ್ಟಕರವಾಗಿದೆ.

ಎಫ್ ಕೆಸಿಸಿಐ ಉಪ ಸಮಿತಿಯನ್ನು ಹೊಂದಿದೆ. ನೀವು ಸರ್ಕಾರಕ್ಕೆ ಯಾವ ಶಿಫಾರಸುಗಳನ್ನು ನೀಡಿದ್ದೀರಾ?
ಹೌದು. ಉತ್ತರ ಪ್ರದೇಶ, ಬಿಹಾರ ಮತ್ತು ಅಸ್ಸಾಂನಿಂದ ಹೆಚ್ಚಿನ ಪ್ರಮಾಣದಲ್ಲಿ ವಲಸೆ ಇರುವುದರಿಂದ, ಬೆಂಗಳೂರಿನಿಂದ ಪಾಟ್ನಾ ಮತ್ತು ಇನ್ನೊಂದು ಮಾರ್ಗಕ್ಕೆ ಸೂಪರ್ ಫಾಸ್ಟ್ ರೈಲು ಪರಿಚಯಿಸಲು ನಾವು ಸೂಚಿಸಿದ್ದೇವೆ. ರೈಲ್ವೆ ಸಚಿವರಿಗೆ ಪ್ರಸ್ತಾವನೆ ನೀಡಿದ್ದೆವು.

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ಬೇಕೇ?
ಟರ್ಮಿನಲ್-2 ಕಾರ್ಯಾರಂಭ ಮಾಡಿದ ನಂತರ, ಟರ್ಮಿನಲ್-1 ರಲ್ಲಿ ಯಾವುದೇ ಪ್ರಯಾಣಿಕರ ದಟ್ಟಣೆಯಿಲ್ಲ ಮತ್ತು ಅದು ಹೆಚ್ಚಿನ ಸಮಯ ಖಾಲಿಯಾಗಿರುತ್ತದೆ. ಎರಡನೇ ವಿಮಾನ ನಿಲ್ದಾಣಕ್ಕಾಗಿ ತುಮಕೂರು ಆಚೆಗೆ ಹೋಗುವ ಬದಲು, ಅಗತ್ಯವಿದ್ದರೆ ಸರ್ಕಾರವು ಎಚ್‌ಎಎಲ್ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಬಹುದು. ಪ್ರಸ್ತುತ ಜನಸಂಖ್ಯೆಗೆ, ಕನಿಷ್ಠ ಮುಂದಿನ ಐದು ವರ್ಷಗಳವರೆಗೆ ಇನ್ನೊಂದು ವಿಮಾನ ನಿಲ್ದಾಣದ ಅವಶ್ಯಕತೆ ಇದೆಯೆಂದು ನನಗೆ ಕಾಣಿಸುತ್ತಿಲ್ಲ.

ಎಪಿಎಂಸಿ ಕಾನೂನುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ದುರದೃಷ್ಟವಶಾತ್, ರೈತರ ಬೃಹತ್ ಪ್ರತಿಭಟನೆಯ ನಂತರ ಮೋದಿ ಸರ್ಕಾರ ಉದ್ದೇಶಿತ ಕೃಷಿ ಕಾನೂನನ್ನು ಹಿಂತೆಗೆದುಕೊಂಡರೂ, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅದನ್ನು ಹಿಂತೆಗೆದುಕೊಳ್ಳಲಿಲ್ಲ. ಇದು ನಾವು (FKCCI)  ಪ್ರತಿನಿಧಿಸುವ ದೊಡ್ಡ ಕಾಳಜಿಯಾಗಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರ ಸಿದ್ಧರಿರಲಿಲ್ಲ. ಉತ್ಪನ್ನವು ಎಪಿಎಂಸಿಯನ್ನು ತಲುಪಿದ ನಂತರ, ಪಾವತಿ ಸುರಕ್ಷಿತವಾಗಿದೆ, ಆದ್ದರಿಂದ ಎಪಿಎಂಸಿಯನ್ನು ಮರಳಿ ತರಬೇಕು. ಎಪಿಎಂಸಿಯಲ್ಲಿ 108 ಉತ್ಪನ್ನಗಳ ಪಟ್ಟಿ ಮಾಡಲಾಗಿದ್ದು, ಹರಾಜು ಪ್ರಕ್ರಿಯೆ ಮುಂದುವರಿದಿದೆ. ನಿಗದಿತ ಬೆಲೆಯೂ ಸರಿಯಾಗಿದೆ ಮತ್ತು ಹಣ ನೇರವಾಗಿ ರೈತರಿಗೆ ಹೋಗುತ್ತದೆ. ಕಾಂಗ್ರೆಸ್ ಸರ್ಕಾರದ ಕೃಪೆಯಿಂದ ಈ ಮಸೂದೆ ಅಂಗೀಕಾರವಾಗಿದೆ. (ಜೆಡಿಎಸ್ ರಾಜ್ಯಾಧ್ಯಕ್ಷ) ಎಚ್‌ಡಿ ಕುಮಾರಸ್ವಾಮಿ ಅವರು ಎಫ್‌ಕೆಸಿಸಿಐಗೆ ಆಗಮಿಸಿದ್ದರು. ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಎಪಿಎಂಸಿ ಕಾನೂನುಗಳ ಸುತ್ತಲಿನ ಸಮಸ್ಯೆಗಳನ್ನು ಸೇರಿಸಿದ್ದರು.

ಆದರೆ ಅವರ ಪಕ್ಷವು ವಿಧಾನ ಪರಿಷತ್ತಿನಲ್ಲಿ ಅದನ್ನು ವಿರೋಧಿಸಿತು. ರಾಜಕೀಯವನ್ನು ದೂರವಿಟ್ಟು ಬರಗಾಲದ ಸಂದರ್ಭದಲ್ಲಿ ವರ್ತಕರು ರೈತರಿಗೆ ಮೋಸ ಮಾಡದಂತೆ ಎಪಿಎಂಸಿ ಅಗತ್ಯವಿದೆ. ವರ್ತಕ ಸಮುದಾಯ ಸದಾ ರೈತರೊಂದಿಗೆ ಇರುತ್ತದೆ. ಎಪಿಎಂಸಿಗಳು ಸದ್ಯ ಬೇಳೆಕಾಳುಗಳಲ್ಲಿ ಸ್ವಾವಲಂಬಿಯಾಗಿಲ್ಲ. ಭತ್ತ, ಸಕ್ಕರೆ, ಹಾಲು, ಗೋಧಿಯಲ್ಲಿ ಸ್ವಾವಲಂಬಿಯಾಗಿದ್ದೇವೆ. ಶೇಕಡಾ 45ರಷ್ಟು ಭಾರತೀಯ ಜನಸಂಖ್ಯೆಯು ಪೋಷಣೆ ಮತ್ತು ಪ್ರೋಟೀನ್‌ಗಾಗಿ ಬೇಳೆಕಾಳುಗಳನ್ನು ಅವಲಂಬಿಸಿದೆ. ವಾರ್ಷಿಕವಾಗಿ 17.7 ಲಕ್ಷ ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಹೊಂದಿಸಲು ನಾವು ಬೇಳೆಕಾಳು ಉತ್ಪಾದನೆಗೆ 5 ವರ್ಷಗಳ ಯೋಜನೆಯನ್ನು ರೂಪಿಸಬೇಕಾಗಿದೆ. ಈ ವರ್ಷ 3.5 ಮಿಲಿಯನ್ ಮೆಟ್ರಿಕ್ ಟನ್ ಕೊರತೆ ಇದೆ

ಎಪಿಎಂಸಿಯಲ್ಲೂ ಮಧ್ಯವರ್ತಿಗಳ ಸಮಸ್ಯೆ ಇದೆಯೇ?
ಇಡೀ ದೇಶದಲ್ಲಿ, ಕರ್ನಾಟಕದ ಎಪಿಎಂಸಿ ಮಾದರಿ ಉತ್ತಮವಾಗಿದ್ದು, ಪಂಜಾಬ್ ಮತ್ತು ಇತರ ರಾಜ್ಯಗಳು ಹರಾಜು ಮಾದರಿಯನ್ನು ಅನುಸರಿಸುತ್ತಿವೆ. ಪಾವತಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗುತ್ತದೆ.

ಯುವಜನತೆ ಉದ್ಯಮಿಗಳಾಗಲು ನೀವು ಏನು ಸಲಹೆ ನೀಡುತ್ತೀರಿ?
ಹೆಚ್ಚಿನ ಯುವಕರು ಉದ್ಯಮಶೀಲತೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಬಹಳಷ್ಟು ಬ್ಯಾಂಕ್‌ಗಳು ಇವಕ್ಕೆ ಪೂರಕವಾಗಿವೆ. ಕರ್ನಾಟಕದ ಜನರ ಸೌಹಾರ್ದ ಸ್ವಭಾವದಿಂದಾಗಿ ಅವರು ಯಶಸ್ವಿ ಉದ್ಯಮಿಗಳಾಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com