ಬೆಂಗಳೂರು: ಕರ್ನಾಟಕ ಮತ್ತು ಕನ್ನಡಿಗರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ 23 ವರ್ಷದ ಯುವಕನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಯನ್ನು ಪಶ್ಚಿಮ ಬಂಗಾಳದ ನಿಲೋಯ್ ಮಂಡಲ್ ಎಂದು ಗುರುತಿಸಲಾಗಿದೆ. ಈತ ಕೊಡಿಗೇಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ನಿಲೋಯ್ ಮಂಡಲ್ ಕರ್ನಾಟಕ ಹಾಗೂ ಕನ್ನಡಿಗರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗಿತ್ತು.
ಇದನ್ನೂ ಓದಿ: ಕನ್ನಡಿಗರ ಕುರಿತು ಅವಹೇಳನಕಾರಿ ಪೋಸ್ಟ್: ಯುವಕನ ಬಂಧನ
ಬೆಂಗಳೂರು ಇಲ್ಲದೆ ಕರ್ನಾಟಕ ಏನೂ ಅಲ್ಲ, ಕನ್ನಡಿಗರು ಅವಿದ್ಯಾವಂತರು ಮತ್ತು ಇದು ಭಾರತದ ಅತ್ಯಂತ ಅನುಪಯುಕ್ತ ರಾಜ್ಯ ಹೇಳಿದ್ದ. ಈ ಪೋಸ್ಟ್ ಶೇರ್ ಮಾಡಿದ್ದ ಹಲವರು, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಟ್ಯಾಗ್ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕೊಡಿಗೇಹಳ್ಳಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಶನಿವಾರ ಪತ್ತೆ ಹಚ್ಚಿ ಬಂಧನಕ್ಕೊಳಪಡಿಸಿದರು.
Advertisement