ಯುದ್ಧ ಪೀಡಿತ ಇಸ್ರೇಲ್.
ಯುದ್ಧ ಪೀಡಿತ ಇಸ್ರೇಲ್.

ಇಸ್ರೇಲ್, ಜೆರುಸಲೇಂನಲ್ಲಿ ಸಿಲುಕಿರುವ ಹಾಸನ ಜಿಲ್ಲೆಯ 20 ಮಂದಿ!

ಇಸ್ರೇಲ್‌–ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಕದನ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ಕಡೆ ದಾಳಿ-ಪ್ರತಿದಾಳಿಗಳು ತೀವ್ರಗೊಂಡಿವ. ಈ ನಡುವಲ್ಲೇ ಇಸ್ರೇಲ್ ಮತ್ತು ಜೆರುಸಲೇಂನಲ್ಲಿ ಹಾಸನದ 20 ಮಂದಿ ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ.
Published on

ಹಾಸನ: ಇಸ್ರೇಲ್‌–ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವಿನ ಕದನ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ಕಡೆ ದಾಳಿ-ಪ್ರತಿದಾಳಿಗಳು ತೀವ್ರಗೊಂಡಿವ. ಈ ನಡುವಲ್ಲೇ ಇಸ್ರೇಲ್ ಮತ್ತು ಜೆರುಸಲೇಂನಲ್ಲಿ ಹಾಸನದ 20 ಮಂದಿ ಸಿಲುಕಿಕೊಂಡಿದ್ದಾರೆಂದು ತಿಳಿದುಬಂದಿದೆ.

ಚನ್ನರಾಯಪಟ್ಟಣ ತಾಲೂಕಿನ ಡಿಂಕಾ ಹಾಗೂ ಸಕಲೇಶಪುರ ತಾಲೂಕಿನ ಲಕ್ಕುಂದ, ಅಂಕಿಹಳ್ಳಿ, ಬೆಳಗೋಡು ಗ್ರಾಮದ ಜಾನ್ಸನ್ ಡಿಸೋಜಾ, ದೀನಾ, ನವೀನ್ ಪಿಂಟೋ, ಎಲಿನಾ ಪಿಂಟೋ, ಅಂಥೋನಿ ಡಿಸೋಜಾ, ಕೃಷ್ಣೇಗೌಡ ಸೇರಿದಂತೆ ಜಿಲ್ಲೆಯ 20 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆಂದು ತಿಳಿದುಬಂದಿದೆ.

ಇವರಲ್ಲಿ ಹಲವರು 10 ವರ್ಷಗಳ ಹಿಂದೆ ಹೋಟೆಲ್‌ಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ.

ಹಾಸನ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಅವರು ಮಾತನಾಡಿ, ಇಸ್ರೇಲ್‌ನಲ್ಲಿ ಸಿಲುಕಿರುವವರ ಕುಟುಂಬಗಳೊಂದಿಗೆ ಜಿಲ್ಲಾಡಳಿತ ಸಂಪರ್ಕದಲ್ಲಿದೆ. ಅವರು ಸುರಕ್ಷಿತವಾಗಿ ಮರಳುವುದನ್ನು ಖಚಿತಪಡಿಸಿಕೊಳ್ಳಲು ನಾವು ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆಂದು ಹೇಳಿದ್ದಾರೆ.

ಜೆರುಸಲೇಂನಲ್ಲಿ ಸಿಕ್ಕಿಹಾಕಿಕೊಂಡಿರುವ ಚನ್ನರಾಯಪಟ್ಟಣ ಮೂಲದ ಕೃಷ್ಣೇಗೌಡ ಅವರು ತಮ್ಮ ಸಹೋದರ ಮಹದೇವ್ ಅವರಿಗೆ ಭಾನುವಾರ ಕರೆ ಮಾಡಿದ್ದು, ಹೋಟೆಲ್‌ನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆಂದು ತಿಳಿದುಬಂದಿದೆ.

ಸಹೋದರ ಸುರಕ್ಷಿತವಾಗಿದ್ದಾರೆ. 7 ದಿನಗಳ ನಂತರ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವ ಭರವಸೆಯಿದೆ ಎಂದು ಸಹೋದರ ಹೇಳಿದ್ದಾನೆಂದು ಮಹದೇವ್ ಅವರು ಮಾಹಿತಿ ನೀಡಿದ್ದಾರೆ.

ಹಾಸನದ ಜನರ ಕರೆತರಲು ಹೆಚ್‍ಡಿಡಿ ಪ್ರಯತ್ನ
ಈ  ನಡುವೆ ಯುದ್ಧ ಪೀಡಿತ ಇಸ್ರೇಲ್‍ನಲ್ಲಿರುವ ಜಿಲ್ಲೆಗೆ ಸೇರಿದ ಜನರನ್ನು ಕರೆತರಲು ಕೇಂದ್ರ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಹೇಳಿದ್ದಾರೆ.

ಇಸ್ರೇಲ್‍ನಲ್ಲಿ ಸಿಲುಕಿದ ಜಿಲ್ಲೆಯ ಜನರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಇದೆ. ಅವರನ್ನು ಸುರಕ್ಷಿತವಾಗಿ ಕರೆತರಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಈ ಕುರಿತು ಕೇಂದ್ರದೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ತಕ್ಷಣವೇ ವಿದೇಶಾಂಗ ಸಚಿವರ ಜೊತೆ ಮಾತನಾಡುತ್ತೇನೆ. ಅಲ್ಲಿ ಭಾರತದವರು ಹೆಚ್ಚು ಮಂದಿ ಇದ್ದಾರೆ. ಜಿಲ್ಲೆಯ ಸಕಲೇಶಪುರ, ಬೇಲೂರು, ಚನ್ನರಾಯಪಟ್ಟಣದ ಮಂದಿ ಅಲ್ಲಿ ಸಿಲುಕಿದ್ದಾರೆ. ಅವರ ಹೆಸರುಗಳನ್ನು ತಿಳಿದುಕೊಂಡ ತಕ್ಷಣವೇ ಯಾವ ಪ್ರದೇಶದಲ್ಲಿ ಇದ್ದಾರೆ ಎಂದು ಮಾಹಿತಿ ಪಡೆದುಕೊಂಡು ಚರ್ಚಿಸುತ್ತೇನೆ. ಈ ವಿಚಾರವಾಗಿ ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ ತಿಳಿಸಿದರು.

ಇಸ್ರೇಲ್ ಹಾಗೂ ಹಮಾಸ್ ಉಗ್ರರ ನಡುವಿನ ಯುದ್ಧದಲ್ಲಿ ಇಲ್ಲಿಯವರೆಗೂ 1,300 ಜನ ಮೃತಪಟ್ಟಿದ್ದಾರೆ. ಯುದ್ಧ ಇನ್ನೂ ಮುಂದುವರೆದಿದ್ದು ಎರಡೂ ಕಡೆಗಳಲ್ಲೂ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com