ಬೆಂಗಳೂರು: ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಖಾತೆಗೆ ನಿರ್ಬಂಧ ವಿಧಿಸಲು ಬ್ಯಾಂಕ್ ಗೆ ಸೂಚನೆ

ನಗರದಲ್ಲಿರುವ ಹಲವಾರು ಸಂಘ-ಸಂಸ್ಥೆಗಳಿಗೆ ಎಚ್ಚರಿಕೆಯಾಗಬಹುದಾದ ನಿಟ್ಟಿನಲ್ಲಿ ರಿಜಿಸ್ಟಾರ್ ಆಫ್ ಸೊಸೈಟೀಸ್ ಇತ್ತೀಚೆಗೆ ನಿವಾಸಿ ಕ್ಷೇಮಾಭಿವೃದ್ಧಿ ಸಂಘವೊಂದರ ಬ್ಯಾಂಕ್ ಖಾತೆಗೆ ನಿರ್ಬಂಧ ವಿಧಿಸಲು ಬ್ಯಾಂಕ್ ಗೆ ಸೂಚನೆ ನೀಡಿದೆ. 
ವಿಸ್ಲಿಂಗ್ ವುಡ್ಸ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘ
ವಿಸ್ಲಿಂಗ್ ವುಡ್ಸ್ ನಿವಾಸಿ ಕ್ಷೇಮಾಭಿವೃದ್ಧಿ ಸಂಘ

ಬೆಂಗಳೂರು: ನಗರದಲ್ಲಿರುವ ಹಲವಾರು ಸಂಘ-ಸಂಸ್ಥೆಗಳಿಗೆ ಎಚ್ಚರಿಕೆಯಾಗಬಹುದಾದ ನಿಟ್ಟಿನಲ್ಲಿ ರಿಜಿಸ್ಟಾರ್ ಆಫ್ ಸೊಸೈಟೀಸ್ ಇತ್ತೀಚೆಗೆ ನಿವಾಸಿ ಕ್ಷೇಮಾಭಿವೃದ್ಧಿ ಸಂಘವೊಂದರ ಬ್ಯಾಂಕ್ ಖಾತೆಗೆ ನಿರ್ಬಂಧ ವಿಧಿಸಲು ಬ್ಯಾಂಕ್ ಗೆ ಸೂಚನೆ ನೀಡಿದೆ. 

ಸರಿಯಾದ ಕಾಯ್ದೆಯಡಿಯಲ್ಲಿ ನೋಂದಣಿ ಮಾಡದೇ ಇರುವುದಕ್ಕೆ ಮತ್ತು ಆರ್ಥಿಕ ಅವ್ಯವಹಾರಗಳಲ್ಲಿ ತೊಡಗಿರುವುದಕ್ಕೆ ನಾಲ್ಕು ಮಹಡಿಗಳ ವಸತಿ ಅಪಾರ್ಟ್ಮೆಂಟ್ ಸಂಕೀರ್ಣದ ಸಂಘದ ಬ್ಯಾಂಕ್ ಖಾತೆಗಳ ಹಣವನ್ನು ತಡೆಹಿಡಿಯುವಂತೆ ರಿಜಿಸ್ಟಾರ್ ಆಫ್ ಸೊಸೈಟೀಸ್ ಈ ಸೂಚನೆ ನೀಡಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಹಣದ ಹರಿವಿಗೆ ಇದೇ ಮೊದಲ ಬಾರಿ ತಡೆಯೊಡ್ಡಲಾಗಿದೆ.

ಅ.06 ರಂದು ಹೊರಡಿಸಲಾದ ಆದೇಶದಲ್ಲಿ ನಾಗನಹಳ್ಳಿ (ದೊಡ್ಡಬಳ್ಳಾಪುರ ರಸ್ತೆ)ಯಲ್ಲಿರುವ ವಿಸ್ಲಿಂಗ್ ವುಡ್ಸ್ ಅಪಾರ್ಟ್ಮೆಂಟ್ ನ 76 ಯುನಿಟ್ ಗಳನ್ನು ನಿರ್ವಹಿಸುವ ವಿಸ್ಲಿಂಗ್ ವುಡ್ಸ್ ವೆಲ್ಫೇರ್ ಅಸೋಸಿಯೇಷನ್ ಗೆ ಈ ನಿರ್ಬಂಧ ವಿಧಿಸಲಾಗಿದೆ. ಆದರೆ ಒಂದು ವಾರದ ನಂತರ ರಾಜನಕುಂಟೆ ಶಾಖೆಯಲ್ಲಿನ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಗೆ ವಿಧಿಸಲಾಗಿದ್ದ ನಿರ್ಬಂಧ ಅನ್ನು ತೆಗೆದುಹಾಕುವಲ್ಲಿ ಸಂಘವು ಯಶಸ್ವಿಯಾಗಿದೆ.

73 ವರ್ಷದ ಆರ್ ಆರ್ ಹೆಗ್ಡೆ ಅವರು ಉಪನೋಂದಣಾಧಿಕಾರಿ ಕಚೇರಿಗೆ 14 ಬಾರಿ ಭೇಟಿ ನೀಡಿದ್ದು, ಈ ಆದೇಶವನ್ನು ಹೊರಡಿಸಲಾಗಿತ್ತು.  ಬಿಲ್ಡರ್ ಕುಡಿಯುವ ನೀರಿನ ಪೂರೈಕೆ ಹಾಗೂ ಸೋಲಾರ್ ಸಿಸ್ಟಮ್ ಗಳ ವ್ಯವಸ್ಥೆಯನ್ನು ಪೂರ್ಣಗೊಳಿಸಿರಲಿಲ್ಲ. ಇನ್ನೂ ಒಟ್ಟು 2.42 ಕೋಟಿ ರೂಪಾಯಿಗಳಷ್ಟು ಕೆಲಸಗಳನ್ನು ಬಾಕಿ ಇಟ್ಟುಕೊಂಡಿದ್ದಾರೆ. ಆದರೂ ಬಿಬಿಎಂಪಿಯಿಂದ ಆಕ್ಯುಪೆನ್ಸಿ ಸರ್ಟಿಫಿಕೇಟ್ (ಒಸಿ) ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆರ್ ಆರ್ ಹೆಗ್ಡೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.

ನಗರದ ಸುತ್ತಮುತ್ತಲಿನ ಸಂಘಗಳು ತಪ್ಪಾದ ಸಂಸ್ಥೆಯ ಅಡಿಯಲ್ಲಿ ನೋಂದಾಯಿಸಿಕೊಂಡಿವೆ ಮತ್ತು ನಿರ್ವಹಣೆ ಶುಲ್ಕವನ್ನು ಸಂಗ್ರಹಿಸುತ್ತಿವೆ ಮತ್ತು ಅದು ಕಾನೂನುಬಾಹಿರವಾಗಿದೆ. 44 ಲಕ್ಷ ಕಾರ್ಪಸ್ ನಿಧಿಯಲ್ಲಿ 26 ಲಕ್ಷ ದುರುಪಯೋಗ ಮಾಡಿದ್ದಾರೆ ಎಂದು ಹೆಗ್ಡೆ ಆರೋಪಿಸಿದ್ದಾರೆ.

ಕರ್ನಾಟಕ ಗೃಹ ಖರೀದಿದಾರರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಧನಂಜಯ ಪದ್ಮನಾಭಾಚಾರ್, ಎಲ್ಲಾ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ಕರ್ನಾಟಕ ರಾಜ್ಯ ನೋಂದಣಿ ಕಾಯ್ದೆಯಡಿ ನೋಂದಾಯಿಸಿಕೊಳ್ಳದಂತೆ ನಿರ್ದೇಶಿಸುವ ರಿಟ್ ಅರ್ಜಿಗೆ (ನವೆಂಬರ್ 6, 2019) ಹೈಕೋರ್ಟ್ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದ ನಂತರ, ಸಹಕಾರಿ ಸಂಘಗಳ ಇಲಾಖೆಯು ಅಪಾರ್ಟ್‌ಮೆಂಟ್‌ಗಳನ್ನು ಅದರ ಅಡಿಯಲ್ಲಿ ನೋಂದಾಯಿಸಬೇಕಿದೆ.

“ವಿಸ್ಲಿಂಗ್ ವುಡ್ಸ್‌ನ ಸಂಘದ ಸದಸ್ಯರು ಶುಕ್ರವಾರ ರಿಜಿಸ್ಟ್ರಾರ್ ಅವರನ್ನು ಭೇಟಿಯಾಗಿ ತಮ್ಮನ್ನು ಸಹಕಾರ ಸಂಘವಾಗಿ ನೋಂದಾಯಿಸುವುದಾಗಿ ಭರವಸೆ ನೀಡಿದರು. ಭದ್ರತೆ ಮತ್ತು ಮನೆಗೆಲಸದ ಕರ್ತವ್ಯಗಳನ್ನು ನಿರ್ವಹಿಸುವ ಅನೇಕ ಸಿಬ್ಬಂದಿಗೆ ಪಾವತಿಸಬೇಕಾದ ಕಾರಣ ನಿರ್ಬಂಧವನ್ನು ತೆಗೆದುಹಾಕಲು ಅವರು ವಿನಂತಿಸಿದ ಹಿನ್ನೆಲೆಯಲ್ಲಿ ನಿರ್ಬಂಧ ತೆರವುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com