ಐಸಿಸಿ ಏಕದಿನ ವಿಶ್ವಕಪ್ 2023: ಬೆಂಗಳೂರು ಪಂದ್ಯಗಳಿಗೆ ನಮ್ಮ ಮೆಟ್ರೋ ವಿಶೇಷ ಆಫರ್, ಸೇವೆ ಅವಧಿ ವಿಸ್ತರಣೆ, ದರ ರಿಯಾಯಿತಿ ಟಿಕೆಟ್

ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಕೂತಹಲಕಾರಿ ಹಂತ ತಲುಪಿರುವಂತೆಯೇ ಇತ್ತ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ನಮ್ಮ ಮೆಟ್ರೋ(Namma Metro) ರೈಲು ನಿಗಮ ನಿಯಮಿತ ವಿಶೇಷ ಆಫರ್ ಘೋಷಣೆ ಮಾಡಿದೆ.
ಮೆಟ್ರೋ ರೈಲು
ಮೆಟ್ರೋ ರೈಲು
Updated on

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಕೂತಹಲಕಾರಿ ಹಂತ ತಲುಪಿರುವಂತೆಯೇ ಇತ್ತ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಗಳಿಗೆ ನಮ್ಮ ಮೆಟ್ರೋ(Namma Metro) ರೈಲು ನಿಗಮ ನಿಯಮಿತ ವಿಶೇಷ ಆಫರ್ ಘೋಷಣೆ ಮಾಡಿದೆ.

ಹೌದು... ಭಾರತ-ಬಾಂಗ್ಲಾದೇಶ ತಂಡಗಳ ನಡುವಿನ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದ್ದು, ಇದೇ ಸಂದರ್ಭದಲ್ಲೇ ಕ್ರಿಕೆಟ್​ ಪ್ರೇಮಿಗಳಿಗೆ ನಮ್ಮ ಮೆಟ್ರೋ(Namma Metro) ರೈಲು ನಿಗಮ ನಿಯಮಿತ (BMRCL) ಹೊಸ​ ಆಫರ್​ ನೀಡಿದೆ. ಬೆಂಗಳೂರಿನಲ್ಲಿ ವಿಶ್ವಕಪ್ ಪಂದ್ಯಾವಳಿ (World Cup Cricket 2023) ಇರುವ ದಿನ ಮೆಟ್ರೋ ರೈಲು (Metro Train) ಸೇವೆ ಅವಧಿ ವಿಸ್ತರಣೆ ಮಾಡಿದ್ದು ಮಾತ್ರವಲ್ಲದೇ ವಿಶೇಷ ದರ ರಿಯಾಯಿತಿಯನ್ನೂ ಘೋಷಿಸಲಾಗಿದೆ. 

ಕ್ರಿಕೆಟ್​ ಪ್ರೇಮಿಗಳು ಪಂದ್ಯವನ್ನು ವೀಕ್ಷಿಸಿದ ಬಳಿಕ ತಮ್ಮ ನಿವಾಸಕ್ಕೆ ತೆರಳಲು ಕಷ್ಟಕರ ಆಗಬಾರದೆಂದು ಮೆಟ್ರೋ ಸೇವೆ ಅವಧಿ ವಿಸ್ತರಣೆ ಮಾಡಿದ್ದು, ಬೆಂಗಳೂರಿನ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ನ ಎಲ್ಲಾ 5 ದಿನಗಳು ಈ ರಿಯಾಯಿತಿ ಚಾಲ್ತಿಯಲ್ಲಿರುತ್ತದೆ. BMRCL ಎಲ್ಲಾ ಇತರ ಮೆಟ್ರೋ ನಿಲ್ದಾಣಗಳಿಗೆ ಕಬ್ಬನ್ ಪಾರ್ಕ್ ಮೆಟ್ರೋ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ರೂ 50 ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ನೀಡಲಾಗುತ್ತದೆ.

ಸಂಜೆ 4 ಗಂಟೆಯಿಂದಲೇ ಟಿಕೆಟ್ ಗಳು ಮಾರಾಟವಾಗುತ್ತಿದೆ. QR ಕೋಡ್ ಸಹಿತ ಪೇಪರ್ ಟಿಕೆಟ್ ಗಳು ಸ್ಮಾರ್ಟ್ ಕಾರ್ಡ್‌ಗಳನ್ನು ಪ್ರಯಾಣಕ್ಕೆ ಅನುಮತಿಸಲಾಗಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023ನ ಬೆಂಗಳೂರಿನಲ್ಲಿ ನಡೆಯಲಿರುವ ಎಲ್ಲ ಐದು ಪಂದ್ಯಗಳಿಗೂ ಈ ರಿಯಾಯಿತಿ ಅನ್ವಯವಾಗಲಿದೆ ಎಂದು ಎಂದು ಬಿಎಂಆರ್ ಸಿಎಲ್ ಘೋಷಣೆ ಮಾಡಿದೆ.

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ವಿಶ್ವಕಪ್​ ಪಂದ್ಯಗಳು ಅಕ್ಟೋಬರ್ 20, 26, ನವೆಂಬರ್ 4, 9, 12ರಂದು ನಡೆಯಲಿವೆ. ವಿಶ್ವಕಪ್​ನ ಕೊನೆಯ ಲೀಗ್​ ಪಂದ್ಯ ಕೂಡ ಬೆಂಗಳೂರಿನಲ್ಲೇ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್​ ಸೆಣಸಾಡಲಿವೆ. ಪಂದ್ಯಾವಳಿ ನಡೆಯುವ ಎಲ್ಲ ದಿನಗಳಲ್ಲಿ ನಮ್ಮ ಮೆಟ್ರೋದಲ್ಲಿ ವಿಶೇಷ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಬರುವ ಮತ್ತು ಹೋಗುವ ಪ್ರಯಾಣಕ್ಕೆ 50 ರೂ. ಟಿಕೆಟ್ ನಿಗದಿಪಡಿಸಿ ಬಿಎಂಆರ್​ಸಿಎಲ್ ಪ್ರಕಟಣೆ ಹೊರಡಿಸಿದೆ. ಕ್ರಿಕೆಟ್ ಪಂದ್ಯದ ದಿನದಂದು ಬೆಳಗ್ಗೆ 7 ಗಂಟೆಗೆ ಪೇಪರ್ ಟಿಕೆಟ್​ ಲಭ್ಯವಿರಲಿದೆ.

ಬೆಂಗಳೂರಿನ ಎಲ್ಲ ಮೆಟ್ರೋ ನಿಲ್ದಾಣಗಳಲ್ಲೂ ಪೇಪರ್ ಟಿಕೆಟ್​ ಲಭ್ಯವಿರಲಿದ್ದು, ಪೇಪರ್ ಟಿಕೆಟ್ ಗಳ ಜೊತೆಗೆ ಸ್ಮಾರ್ಟ್ ಕಾರ್ಡ್ ಹಾಗೂ ಎನ್​ಸಿಎಂಸಿ ವ್ಯವಸ್ಥೆಯನ್ನು ಕೂಡ ಪ್ರಯಾಣಿಕರು ಪಡೆದುಕೊಳ್ಳಬಹುದೆಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಿಂದ ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com