ವಿಕಿರಣ ಸೋರಿಕೆ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ವೇಳೆ ಇಬ್ಬರಿಗೆ ಗಾಯ, ಆಸ್ಪತ್ರೆಗೆ ದಾಖಲು

ಅಣು ವಿಕಿರಣ ಸೋರಿಕೆಯಂತಹ ತುರ್ತು ಸಂದರ್ಭ ನಿರ್ವಹಣೆ ಹಾಗೂ ಅದನ್ನು ಎದುರಿಸುವ ಕುರುತು ಅರಿವು ಮೂಡಿಸಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ನೌಕರರಿಗೆ ಗಾಯಗಳಾಗಿರುವ ಘಟನೆಯೊಂದು ಶುಕ್ರವಾರ ನಡೆದಿದೆ.
ಅಣುಕು ಕಾರ್ಯಾಚರಣೆ.
ಅಣುಕು ಕಾರ್ಯಾಚರಣೆ.

ಬೆಂಗಳೂರು: ಅಣು ವಿಕಿರಣ ಸೋರಿಕೆಯಂತಹ ತುರ್ತು ಸಂದರ್ಭ ನಿರ್ವಹಣೆ ಹಾಗೂ ಅದನ್ನು ಎದುರಿಸುವ ಕುರುತು ಅರಿವು ಮೂಡಿಸಲು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಣಕು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ನೌಕರರಿಗೆ ಗಾಯಗಳಾಗಿರುವ ಘಟನೆಯೊಂದು ಶುಕ್ರವಾರ ನಡೆದಿದೆ.

ಯಾವುದೇ ಸಂದರ್ಭದಲ್ಲಿ ವಿಕಿರಣ ಸೋರಿಕೆಯಾದಾಗ ವಿಮಾನ ನಿಲ್ದಾಣದ ಸಿಬ್ಬಂದಿಗಳು ಸದಾಕಾಲ ಸರ್ವಸನ್ನದ್ಧವಾಗಿರುವಂತೆ ವಿಮಾನ ನಿಲ್ದಾಣದ ಸಿಬ್ಬಂದಿಗಳನ್ನು ಸಜ್ಜುಗೊಳಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಆ ಅಣಕು ಕಾರ್ಯಾಚರಣೆಯನ್ನು ಕೈಗೊಂಡಿತ್ತು.

ಬೆಳಿಗ್ಗೆ 10 ಗಂಟೆಗೆ ಅಣಕು ಕಾರ್ಯಾಚರಣೆ ಆರಂಭವಾಗಿತ್ತು. ವಿಮಾನ ನಿಲ್ದಾಣದೊಳಗೆ ಸಾಗಿಸುವ ಕಾರ್ಗೋ ವಾಹನದಿಂದ ವಿಕಿರಣ ಸೋರಿಕೆಯಾಗುವ ಸನ್ನಿವೇಶವನ್ನು ರೂಪಿಸಲಾಗಿತ್ತು. ಕಾರ್ಯಾಚರಣೆ ವೇಳೆ ನಿಜವಾದ ಕೋಬಾಲ್ಟ್-90 ಅನ್ನು ಬಳಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

60 ಜನರು ಕೆಲಸ ಮಾಡುವ ಪ್ರದೇಶದಲ್ಲಿ ಸೋರಿಕೆಯಾಗುವ ಸನ್ನಿವೇಶವನ್ನು ಸೃಷ್ಟಿಸಲಾಗಿತ್ತು. ಈ ವೇಳೆ ಇಬ್ಬರು ಮೂರ್ಛೆ ಹೋಗಿದ್ದಾರೆ. ಕೂಡಲೇ ಒಬ್ಬನ್ನು ಬೆಂಗಳೂರು ಗ್ರಾಮಾಂತರ ಸರ್ಕಾರಿ ಆಸ್ಪತ್ರೆಗೆ ಮತ್ತು ಮತ್ತೊಬ್ಬನನ್ನು ಆಸ್ಟರ್ ಆಸ್ಪತ್ರೆಗೆ ದಾಖಲಿಸಲಾಯಿತು.

ಘಟನೆಯನ್ನು ಇನ್ನೂ ಮೂವರಿಗೆ ಸೌಮ್ಯ ಲಕ್ಷಣಗಳು ಕಂಡು ಬಂದಿತ್ತು, ಕೂಡಲೇ ಸ್ಥಳದಲ್ಲಿಯೇ ಮೂವರಿಗೆ ಚಿಕಿತ್ಸೆ ನೀಡಲಾಯಿತು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com