ಬೆಂಗಳೂರು: ನಾಯಿ ಕಚ್ಚಿದ್ದಕ್ಕೆ ಪೊಲೀಸರಿಗೆ ದೂರು; ಮಹಿಳೆಯ ವಾಹನಗಳಿಗೆ ಬೆಂಕಿ ಹಚ್ಚಿದ ಶ್ವಾನ ಮಾಲೀಕರು!

ಸಾಕು ನಾಯಿ ಕಚ್ಚಿದ್ದಕ್ಕೆ ಪೊಲೀಸರಿಗೆ ಮಹಿಳೆ ಮಾಲೀಕರ ವಿರುದ್ಧ ದೂರು ನೀಡಿದ ಕಾರಣ ಆಕೆಗೆ ಸೇರಿದ ವಾಹನಗಳಿಗೆ ಶ್ವಾನ ಮಾಲೀಕರು ಬೆಂಕಿ ಹಚ್ಚಿರುವ ಘಟನೆ ನಗರದ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಕು ನಾಯಿ ಕಚ್ಚಿದ್ದಕ್ಕೆ ಪೊಲೀಸರಿಗೆ ಮಹಿಳೆ ದೂರು ನೀಡಿದ ಕಾರಣ ಆಕೆಗೆ ಸೇರಿದ ವಾಹನಗಳಿಗೆ ಶ್ವಾನ ಮಾಲೀಕರು ಬೆಂಕಿ ಹಚ್ಚಿರುವ ಘಟನೆ ನಗರದ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಪುಷ್ಪಾ (43) ಮತ್ತು ಅವರ ಮಗನಿಗೆ ಸೇರಿದ ವಾಹನಗಳಿಗೆ ಮೂವರು ಬೆಂಕಿ ಹಚ್ಚಿದ್ದಾರೆ. ಕೊತ್ತನೂರಿನಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಎಚ್‌ಎಂಟಿ ರಾಜಣ್ಣ ಅಲಿಯಾಸ್ ನಾಗರಾಜ್, ಅವರ ಪುತ್ರಿ ಗಾಯತ್ರಿ ಕಾವ್ಯ ಮತ್ತು ಮಗ ಬಾಬು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಜೂನ್ 13 ರಂದು ಮನೆಕೆಲಸದಾಕೆ ಪುಷ್ಪಾ ಕೆಲಸಕ್ಕೆ ಹೋಗುತ್ತಿದ್ದಾಗ ಸಾಕು ನಾಯಿ ಆಕೆಯ ಮೇಲೆ ಹಲವು ಬಾರಿ ದಾಳಿ ಮಾಡಿತ್ತು. ಇದನ್ನು ಕಣ್ಣಾರೆ ಕಂಡ ಬಾಬು ಮತ್ತು ಗಾಯತ್ರಿ ಗಾಯಗೊಂಡಿದ್ದ ಪುಷ್ಪಾಳನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿ ಯಾವುದೇ ಪೊಲೀಸ್ ದೂರು ನೀಡದಂತೆ ಪುಷ್ಪಾ ಮತ್ತು ಆಕೆಯ ಮಗನಿಗೆ ಮನವಿ ಮಾಡಿದರು.

ನಾಗರಾಜ್ ಮತ್ತು ಅವರ ಪತ್ನಿ ಗೌರಮ್ಮ ಪುಷ್ಪ ಅವರ ವೈದ್ಯಕೀಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು. ಕೆಲಸ ಮಾಡಲು ಸಾಧ್ಯವಾಗುವವರೆಗೆ ಹಣ ನೀಡುವುದಾಗಿ ಭರವಸೆ ನೀಡಿದರು. ಆದರೆ, ಅವರು ತಮ್ಮ ಭರವಸೆಯನ್ನು ಈಡೇರಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ತಿಂಗಳು ಕಳೆದರೂ ವೈದ್ಯಕೀಯ ವೆಚ್ಚ ಭರಿಸಲು ಕುಟುಂಬದಿಂದ ಹಣ ಬಂದಿಲ್ಲ ಎಂದು ಪುಷ್ಪಾ ಹೇಳಿದ್ದಾರೆ.  ವೈದ್ಯಕೀಯ ವೆಚ್ಚಕ್ಕಾಗಿ ನನ್ನ ಬಳಿ ಯಾವುದೇ ಹಣವಿಲ್ಲದ ಕಾರಣ, ನಾನು ಚಿಟ್ ಫಂಡ್‌ನಿಂದ ಹಣವನ್ನು  ವಾಪಸ್ ಪಡೆದೆ, ಅದರಲ್ಲಿ ನಾಗರಾಜ್ ಅವರ ಕುಟುಂಬವೂ ಸೇರಿತ್ತು ಎಂದು ಪುಷ್ಪಾ ತಿಳಿಸಿದ್ದಾರೆ.  ಕುಟುಂಬವು ವೈದ್ಯಕೀಯ ವೆಚ್ಚ ಪಾವತಿಸಲು ನಿರಾಕರಿಸಿದ್ದರಿಂದ ಜುಲೈನಲ್ಲಿ ಪೊಲೀಸ್ ದೂರು ದಾಖಲಿಸಿದ್ದಾಗಿ ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಅವರು ಸೋಮವಾರ,  ನನ್ನ ಮನೆ ಬಳಿ ಬಂದು ಚಿಟ್ ಫಂಡ್ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದನು. ಚಿಟ್ ಫಂಡ್ ಹಣವನ್ನು ಮರುಪಾವತಿಸಲು ಕೆಲವು ತಿಂಗಳುಗಳ ಕಾಲಾವಕಾಶ ಕೇಳಿದಾಗ ಅವರು ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಹಾಕಿದರು ಮತ್ತು ನಿಂದಿಸಿದರು.

ಮಂಗಳವಾರ ಮುಂಜಾನೆ 3 ಗಂಟೆ ಸುಮಾರಿಗೆ ಸೈರನ್ ಸದ್ದು ಕೇಳಿ ಎದ್ದೆವು. ಎರಡೂ ವಾಹನಗಳಿಗೆ ಬೆಂಕಿ ಹಚ್ಚಿರುವುದನ್ನು ಕಂಡು ನಾವು ಕೆಳಗೆ ಧಾವಿಸಿದೆವು. ನಾವು  ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದೆವು ಆದರೆ ಅಷ್ಟರಲ್ಲಿ ವಾಹನಗಳು ಸುಟ್ಟುಹೋಗಿವೆ ಎಂದು ಪುಷ್ಪಾ ವಿವರಿಸಿದ್ದಾರೆ.. ಈ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com