ನಾಯಿ ಕಚ್ಚಿದ್ದಕ್ಕೆ ದೂರು; ಸಂತ್ರಸ್ತೆ ವಾಹನಗಳಿಗೆ ಬೆಂಕಿ ಹಚ್ಚಿದ್ದ ನಾಯಿ ಮಾಲೀಕರನ್ನು ಬಂಧಿಸಿದ ಪೊಲೀಸರು

ನಾಯಿ ಕಚ್ಚಿದ್ದಕ್ಕೆ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಿಸಿದ ಮಹಿಳೆಯನ್ನು ಗುರಿಯಾಗಿಸಿಕೊಂಡು ವಾಹನಗಳಿಗೆ ಬೆಂಕಿ ಹಚ್ಚಿದ್ದ ನಾಯಿ ಮಾಲೀಕರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ನಂಜುಂಡ ಬಾಬು ಎಂಬಾತ ದೂರುದಾರರಾದ ಪುಷ್ಪಾ ಅವರ ಕುಟುಂಬಕ್ಕೆ ಸೇರಿದ ಬೈಕ್ ಮತ್ತು ಸ್ಕೂಟರ್ ಅನ್ನು ಸುಟ್ಟು ಹಾಕಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಯಿ ಕಚ್ಚಿದ್ದಕ್ಕೆ ವ್ಯಕ್ತಿಯೊಬ್ಬರ ವಿರುದ್ಧ ದೂರು ದಾಖಲಿಸಿದ ಮಹಿಳೆಯನ್ನು ಗುರಿಯಾಗಿಸಿಕೊಂಡು ವಾಹನಗಳಿಗೆ ಬೆಂಕಿ ಹಚ್ಚಿದ್ದ ನಾಯಿ ಮಾಲೀಕರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ನಂಜುಂಡ ಬಾಬು ಎಂಬಾತ ದೂರುದಾರರಾದ ಪುಷ್ಪಾ ಅವರ ಕುಟುಂಬಕ್ಕೆ ಸೇರಿದ ಬೈಕ್ ಮತ್ತು ಸ್ಕೂಟರ್ ಅನ್ನು ಸುಟ್ಟು ಹಾಕಿದ್ದರು.

ಬೆಂಗಳೂರು ಹೊರವಲಯದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 13 ರಂದು ಈ ಘಟನೆ ನಡೆದಿದೆ.

ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ಕೆಲಸಕ್ಕೆಂದು ತೆರಳುತ್ತಿದ್ದ ಪುಷ್ಪಾ ಮೇಲೆ ನಂಜುಂಡ ಬಾಬು ಅವರ ಸಾಕು ನಾಯಿ ದಾಳಿ ಮಾಡಿದೆ. ಬಳಿಕ ಸ್ಥಳೀಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಈ ವೇಳೆ ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿ ಪುಷ್ಪಾ ಅವರಿಗೆ ಬೆದರಿಕೆ ಹಾಕಿದ್ದಾರೆ.

ಅಲ್ಲದೆ, ಸಂತ್ರಸ್ತೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಬಾಬು ಅವರ ಕುಟುಂಬವೇ ಎಲ್ಲಾ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ಚಿಕಿತ್ಸಾ ವೆಚ್ಚ ಭರಿಸಲು ವಿಫಲರಾದಾಗ, ಸಂತ್ರಸ್ತೆ ನಾಯಿಯ ಮಾಲೀಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ತನ್ನ ಬಳಿ ವೈದ್ಯಕೀಯ ವೆಚ್ಚ ಭರಿಸಲು ಹಣವಿಲ್ಲದ ಕಾರಣ ತಾನು ಚಿಟ್ ಫಂಡ್‌ನಿಂದ ಹಣ ಪಡೆದಿದ್ದಾಗಿ ಸಂತ್ರಸ್ತೆ ತಿಳಿಸಿದ್ದಾರೆ.

ಇದರಿಂದ ಕುಪಿತಗೊಂಡ ಆರೋಪಿ, ಮಂಗಳವಾರ ಸಂತ್ರಸ್ತೆಯ ಪುತ್ರನ ಬೈಕ್ ಮತ್ತು ಆಕೆಯ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com