ಬೆಂಗಳೂರು: ಚಿರತೆ ಸೆರೆಗೆ ದೌಡು; ಬೋನು, ಟ್ರ್ಯಾಂಕ್ವಿಲೈಸರ್ ಗನ್‌ ಜೊತೆ ಬೀಡುಬಿಟ್ಟು ಅರಣ್ಯ ಇಲಾಖೆ!

ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳ ಮೂರು ತಂಡಗಳು ಬೀಡುಬಿಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಿರತೆ ಪ್ರತ್ಯಕ್ಷ
ಚಿರತೆ ಪ್ರತ್ಯಕ್ಷ

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳ ಮೂರು ತಂಡಗಳು ಬೀಡುಬಿಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಂಗಸಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಂಕ್ವಿಲೈಸರ್ ಗನ್‌ಗಳೊಂದಿಗೆ ಅರಣ್ಯ ಇಲಾಖೆಯ ಸುಮಾರು 30 ಮಂದಿಯನ್ನು ನಿಯೋಜಿಸಲಾಗಿದೆ. ಬೋನುಗಳನ್ನು ಈಗಾಗಲೇ ಇರಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭಾಷ್ ಕೆ ಮಲ್ಖೇಡೆ ತಿಳಿಸಿದರು.

ಬನ್ನೇರುಘಟ್ಟ ಮೃಗಾಲಯದ ವೈದ್ಯರಿಗೆ ಮತ್ತು ಬರಿಸುವ ಔಷಧಿಗಳೊಂದಿಗೆ ಸಿದ್ದರಿರುವಂತೆ ತಿಳಿಸಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ಅರಣ್ಯಾಧಿಕಾರಿಗಳನ್ನು ಟ್ರಾಂಕ್ವಿಲೈಸರ್ ಗನ್‌ಗಳನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ. ಚಿರತೆಯನ್ನು ಪತ್ತೆ ಮಾಡಿದ ತಕ್ಷಣ, ನಾವು ಅದನ್ನು ಸೆರೆ ಹಿಡಿಯುತ್ತೇವೆ ಎಂದು ಅವರು ಹೇಳಿದರು.

ಇತ್ತೀಚೆಗೆ ವೈಟ್‌ಫೀಲ್ಡ್ ಬಳಿ ಚಿರತೆ ಕಾಣಿಸಿಕೊಂಡಿದೆ ಎಂಬ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಇದನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಎಸ್ ಎಸ್ ಲಿಂಗರಾಜ ತಳ್ಳಿಹಾಕಿದ್ದು ಈ ವೀಡಿಯೊವನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪವಿರುವ ಸಿಂಗಸಂದ್ರದಲ್ಲಿ ಚಿತ್ರೀಕರಿಸಲಾಗಿದೆ ಹೊರತು ವೈಟ್‌ಫೀಲ್ಡ್ ನಲ್ಲಿ ಅಲ್ಲ ಎಂದು ಹೇಳಿದ್ದಾರೆ.

ಚಿರತೆ ಮೊದಲು ಅಪಾರ್ಟ್‌ಮೆಂಟ್ ಆವರಣದಲ್ಲಿ ಕಾಣಿಸಿಕೊಂಡಿತ್ತು. ನಂತರ ಅದು ರಸ್ತೆಯ ಮೇಲೆ ಹೋಗಿದೆ. ನಮ್ಮ ಸಿಬ್ಬಂದಿ ಚಿರತೆ ಪತ್ತೆಗೆ ಪ್ರಯತ್ನಿಸುತ್ತಿದ್ದು ತೀವ್ರ ನಿಗಾ ಇರಿಸಿದ್ದೇವೆ. ಈಗಾಗಲೇ ಸಿಂಗಸಂದ್ರದ ಬಳಿ ಬೋನುಗಳನ್ನು ಇರಿಸಿದ್ದು, ನಮ್ಮ ತಂಡಗಳು ಚಿರತೆ ಪತ್ತೆಗೆ ಪ್ರಯತ್ನಿಸುತ್ತಿವೆ ಎಂದು ಲಿಂಗರಾಜು ಹೇಳಿದರು.

ಕೆಲವು ಪ್ರಮುಖ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಸಿಂಗಸಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com