ಚಿರತೆ ಹಿಂದೆ ಹೋಗುತ್ತಿರುವ ನಾಯಿಗಳು
ರಾಜ್ಯ
ಬೆಂಗಳೂರಿನಲ್ಲಿ ಚಿರತೆ ಓಡಿಸಿಕೊಂಡು ಹೋದ ಬೀದಿನಾಯಿಗಳು: ವಿಡಿಯೋ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಕೂಡ್ಲು ಗೇಟ್ ಬಳಿಯ ಎಇಸಿಎಸ್ ಲೇಔಟ್ ನ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಬೀದಿನಾಯಿಗಳು ಅದನ್ನು ಓಡಿಸಿಕೊಂಡು ಹೋಗಿವೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಕೂಡ್ಲು ಗೇಟ್ ಬಳಿಯ ಎಇಸಿಎಸ್ ಲೇಔಟ್ ನ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಬೀದಿನಾಯಿಗಳು ಅದನ್ನು ಓಡಿಸಿಕೊಂಡು ಹೋಗಿವೆ.
ಹೌದು. ನಿವಾಸಿಗಳಾದ ದಾಮೊದರ್ ರೆಡ್ಡಿ ಎಂಬುವವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು, ಬೀದಿ ನಾಯಿಗಳು ಚಿರತೆ ಓಡಿಸಿಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಚಿರತೆ ನೋಡಿದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಇದೀಗ ನಿದ್ದೆಗೆಡಿಸಿದ ಚಿರತೆ ಸೆರೆಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ