ವೆಜಿಟೇರಿಯನ್‌ಗೆ ಮಾಂಸಾಹಾರ ಪೂರೈಕೆ: ಶಿವಮೊಗ್ಗದ ಹೋಟೆಲ್'ಗೆ ರೂ.15,000 ದಂಡ!

ಸಸ್ಯಾಹಾರಿ ಗ್ರಾಹಕನಿಗೆ ಮಾಂಸಾಹಾರ ನೀಡಿದ್ದಕ್ಕೆ ದಂಡವಾಗಿ 15,000 ಪಾವತಿಸುವಂತೆ ಗ್ರಾಹಕ ನ್ಯಾಯಾಲಯ ಶಿವಮೊಗ್ಗದ ಹೋಟೆಲ್ ವೊಂದಕ್ಕೆ ಆದೇಶ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಸ್ಯಾಹಾರಿ ಗ್ರಾಹಕನಿಗೆ ಮಾಂಸಾಹಾರ ನೀಡಿದ್ದಕ್ಕೆ ದಂಡವಾಗಿ 15,000 ಪಾವತಿಸುವಂತೆ ಗ್ರಾಹಕ ನ್ಯಾಯಾಲಯ ಶಿವಮೊಗ್ಗದ ಹೋಟೆಲ್ ವೊಂದಕ್ಕೆ ಆದೇಶ ನೀಡಿದೆ.

ದೂರುದಾರ ವ್ಯಕ್ತಿ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾಗಿದ್ದು, ಶುದ್ಧ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ವ್ಯಕ್ತಿಗೆ ಮಾಂಸಹಾರ ನೀಡುವ ಮೂಲಕ ಅವರ ಭಾವನೆ, ಆಚರಣೆ ಹಾಗೂ ಪವಿತ್ರವಾದ ಸಂಪ್ರದಾಯಕ್ಕೆ ಧಕ್ಕೆಯುಂಟು ಮಾಡಿದಂತಾಗಿದೆ. ಹೋಟೆಲ್'ನ ಈ ವರ್ತನೆ ಅವರ ಭಾವನೆಗಳಿಗೆ ನೋವು ತಂದಿದೆ ಎಂದು ಆಯೋಗ ಹೇಳಿದೆ.

ಬೆಂಗಳೂರಿನ ದೊಡ್ಡಬಳ್ಳಾಪುರ ರಸ್ತೆಯಲ್ಲಿ ವಾಸವಾಗಿರುವ 62 ವರ್ಷದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ದೂರಿನ ಮೇರೆಗೆ ಅಧ್ಯಕ್ಷ ಶಿವರಾಮ ಕೆ, ಸದಸ್ಯರಾದ ಚಂದ್ರಶೇಖರ ಎಸ್ ನೂಲಾ ಮತ್ತು ರೇಖಾ ಸಾಯಣ್ಣವರ್ ಅವರನ್ನೊಳಗೊಂಡ ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಹೋಟೆಲ್'ಗೆ ದಂಡ ವಿಧಿಸಿದೆ.

ಕುಟುಂಬಸ್ಥರೊಬ್ಬರು ನಿಧನಹೊಂದಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬ್ರಾಹ್ಮಣ ಕುಟುಂಬಕ್ಕೆ ಸೇರಿದ ವೃದ್ಧ ಸೇರಿ ಮೂವರು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು.

2023ರ ಫೆಬ್ರವರಿ 5ರಿಂದ 8ರವರೆಗೆ  ಶಿವಮೊಗ್ಗದ ಹೋಟೆಲ್ ಹರ್ಷ ದಿ ಫರ್ನ್ ನಲ್ಲಿ ರೂಮ್ ಬುಕ್ ಮಾಡಿಕೊಂಡಿದ್ದರು. ರೂಮಿಗೆ ಹೋದಾಗ ಹಾಸಿಗೆ ಮುರಿದಿರುವುದು ಕಂಡು ಬಂದಿತ್ತು. ತಂದೆ ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಬೆನ್ನು ನೋವು ಕಾಣಿಸಿಕೊಂಡಿತು. ನಾವು ಸಸ್ಯಾಹಾರಿಗಳಾಗಿರುವುದರಿಂದ ಸಸ್ಯಹಾರಿ ಬರ್ಗರ್ ಮತ್ತು ಸ್ಯಾಂಡ್ವಿಚ್ ಆಹಾರವನ್ನು ಆರ್ಡರ್ ಮಾಡಿದ್ದೆವು. ಆದರೆ, ಚಿಕನ್ ಬರ್ಗರ್ ನೀಡಿದ್ದರು, ಸಸ್ಯಾಹಾರವೆಂದು ತಿಳಿದು ಬಾಯಿಗೆ ಇಟ್ಟಿದ್ದೆವು. ನಂತರ ಮಾಂಸಾಹಾರ ಎಂಬುದು ತಿಳಿದುಬಂದಿತ್ತು. ಇದರ ಪರಿಣಾಮ ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಕಂಡು ಬಂದಿತ್ತು. ಹೊಟ್ಟೆಯಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯಬೇಕಾಯಿತು.

ಸಮಸ್ಯೆಯನ್ನು ಹೋಟೆಲ್ ಆಡಳಿತ ಮಂಡಳಿಯ ಮುಂದೆ ಪ್ರಸ್ತಾಪಿಸಿದೆವು. ಹೋಟೆಲ್ ಬಾಡಿಗೆ ಕಟ್ಟುವುದಿಲ್ಲ ಎಂದೆವು. ಆದರೆ, ಅವರು ಪ್ರತಿಕ್ರಿಯೆ ನೀಡಲಿಲ್ಲ. ಮತ್ತೊಂದು ಉಚಿತ ಊಟ, ಉಪಾಹಾರ, ರಾತ್ರಿ ಬೋಜನವನ್ನು ಪರ್ಯಾಯ ಪರಿಹಾರವಾಗಿ ನೀಡುವುದಾಗಿ ಹೇಳಿದರು. ಹೀಗಾಗಿ ಗ್ರಾಹಕ ಆಯೋಗದ ಮೆಟ್ಟಿಲೇರಿದೆವು. ಗ್ರಾಹಕ ಆಯೋಗ ಹೋಟೆಲ್'ಗೆ ನೋಟಿಸ್ ಜಾರಿ ಮಾಡಿತು ಎಂದು ದೂರದಾರ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com