ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಬಿಟ್ಟಿದ್ದ 4 ಲಕ್ಷ ರೂ. ಮೌಲ್ಯದ ಪ್ರಯಾಣಿಕರ ಲಗೇಜ್ ಹಿಂದಿರುಗಿಸಿದ ರೈಲ್ವೆ ರಕ್ಷಣಾ ಪಡೆ!

ಚೆನ್ನೈಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣಿಕರೊಬ್ಬರು ಕಟಪಾಡಿ ನಿಲ್ದಾಣದಲ್ಲಿ ಕೆಳಗಿಳಿದಿದ್ದರು. ಮತ್ತೆ ರೈಲನ್ನೇರುವ ಮುನ್ನವೇ ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಟಿತ್ತು. ಇದನ್ನು ಕಂಡು ಅವರು ಅಪಾರ ಸಂಕಟಕ್ಕೆ ಗುರಿಯಾಗಿದ್ದರು. ಏಕೆಂದರೆ, ಅವರು 4 ಲಕ್ಷ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳಿದ್ದ ತಮ್ಮ ಲಗೇಜ್‌ ಅನ್ನು ರೈಲಿನೊಳಗಡೆಯೇ ಬ
ವಂದೇ ಭಾರತ್ ಎಕ್ಸ್‌ಪ್ರೆಸ್ (ಪ್ರಾತಿನಿಧಿಕ ಚಿತ್ರ)
ವಂದೇ ಭಾರತ್ ಎಕ್ಸ್‌ಪ್ರೆಸ್ (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಚೆನ್ನೈಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಪ್ರಯಾಣಿಕರೊಬ್ಬರು ಕಟಪಾಡಿ ನಿಲ್ದಾಣದಲ್ಲಿ ಕೆಳಗಿಳಿದಿದ್ದರು. ಮತ್ತೆ ರೈಲನ್ನೇರುವ ಮುನ್ನವೇ ರೈಲು ಪ್ಲಾಟ್‌ಫಾರ್ಮ್‌ನಿಂದ ಹೊರಟಿತ್ತು. ಇದನ್ನು ಕಂಡು ಅವರು ಅಪಾರ ಸಂಕಟಕ್ಕೆ ಗುರಿಯಾಗಿದ್ದರು. ಏಕೆಂದರೆ, ಅವರು 4 ಲಕ್ಷ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳಿದ್ದ ತಮ್ಮ ಲಗೇಜ್‌ ಅನ್ನು ರೈಲಿನೊಳಗಡೆಯೇ ಬಿಟ್ಟಿದ್ದರು.

<strong>ರಾಹುಲ್</strong>
ರಾಹುಲ್

ಭಾನುವಾರ ಬೆಳಗ್ಗೆ ತಿಂಡಿ ಖರೀದಿಸಲೆಂದು ರಾಹುಲ್ ಕಟಪಾಡಿಯಲ್ಲಿ ಇಳಿದಿದ್ದರು. ಬಳಿಕ ರೈಲ್ವೆ ಅಧಿಕಾರಿ ಮತ್ತು ರೈಲ್ವೆ ರಕ್ಷಣಾ ಪಡೆ ಪೊಲೀಸರು ರಾಹುಲ್ ಅವರ ಲಗೇಜ್ ಅನ್ನು ಸ್ವಾಧೀನಪಡಿಸಿಕೊಂಡಿದ್ದರು ಮತ್ತು ನಂತರ ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಅವರಿಗೆ ಹಸ್ತಾಂತರಿಸಿದರು.

ಅಧಿಕೃತ ಪ್ರಕಟಣೆಯ ಪ್ರಕಾರ, ಭಾನುವಾರ ಬೆಳಿಗ್ಗೆ 7.40 ಕ್ಕೆ ಪ್ರಯಾಣಿಕರೊಬ್ಬರಿಂದ ‘ರೈಲ್ವೆಮದದ್’ ಸಹಾಯವಾಣಿಗೆ ದೂರು ಬಂದಿದ್ದು, ಎಂಜಿಆರ್ ಚೆನ್ನೈ ಸೆಂಟ್ರಲ್ - ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (ಟ್ರೇನ್ ಸಂಖ್ಯೆ 20607) ತನ್ನ ಲಗೇಜ್ ಅನ್ನು ಬಿಟ್ಟಿರುವ ಬಗ್ಗೆ ದೂರು ಸ್ವೀಕರಿಸಲಾಯಿತು.

ಘಟನೆಯ ಬಗ್ಗೆ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ ಜಯಕುಮಾರ್ ಮತ್ತು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಬ್ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಅವರಿಗೆ ಮಾಹಿತಿ ನೀಡಲಾಗಿದೆ. 

'ಅವರು ಲಗೇಜ್ ಅನ್ನು ಭದ್ರಪಡಿಸಿದ್ದಾರೆ ಮತ್ತು ರೈಲು ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ತಲುಪಿದ ನಂತರ ಅದನ್ನು ಬೆಂಗಳೂರು ಆರ್‌ಪಿಎಫ್ ಪೋಸ್ಟ್‌ಗೆ ತರಲಾಯಿತು. ನಂತರ ದೂರುದಾರರ ಸಮ್ಮುಖದಲ್ಲಿ ಬ್ಯಾಗನ್ನು ತೆರೆಯಲಾಯಿತು ಮತ್ತು ದಿನದ ನಂತರ ಅವರಿಗೆ ಹಸ್ತಾಂತರಿಸಲಾಯಿತು' ಎಂದು ಪ್ರಕಟಣೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com