ಬೆಂಗಳೂರು: ಆಂಟಿ ಎಂದು ಕರೆದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಎಟಿಎಂ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ನಗರದ ಮಲ್ಲೇಶ್ವರಂ ನಲ್ಲಿ ನಡೆದಿದೆ.
ಅಶ್ವಿನಿ ಹಲ್ಲೆ ನಡೆಸಿದ ಮಹಿಳೆಯಾಗಿದ್ದಾರೆ. ಕೃಷ್ಣಯ್ಯ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಇವರು ರಾಜಾಜಿ ನಗರದ ಪೊಲೈಟ್ ಸೆಕ್ಯೂರಿಟಿ ಎಜೆನ್ಸಿಯ ಸೆಕ್ಯುರಿಟಿ ಗಾರ್ಗ್ ಆಗಿ ಕೆಲಸ ಮಾಡುತ್ತಿದ್ದಾರೆ.
ಏಜೆನ್ಸಿಯು ವಿವಿಧ ಬ್ಯಾಂಕ್ ಗಳ ಎಟಿಎಂಗೆ ಹಣ ತುಂಬುವ ಕೆಲಸ ಮಾಡುತ್ತಿದೆ. ಎಂಟಿಎಂ ಕೇಂದ್ರಗಳಲ್ಲಿ ಎಟಿಎಂ ಯಂತ್ರಗಳಿಗೆ ಹಣ ತುಂಬುವಾಗ ಕೃಷ್ಣಯ್ಯ ಹೊರಗೆ ಭದ್ರತೆ ನೀಡುವ ಕೆಲಸ ಮಾಡುತ್ತಿದ್ದಾರೆ. ಅದರಂತೆ ಸೆ.19ರಂದು ರಾತ್ರಿ 7.30ರ ಸುಮಾರಿಗೆ ಮಲ್ಲೇಶ್ವರಂನ ಗಣೇಶ ದೇವಸ್ಥಾನದ ರಸ್ತೆಯ ಐಸಿಐಸಿಐ ಬ್ಯಾಂಕ್ ಎಟಿಎಂ ಯೆತ್ರಕ್ಕೆ ಹಣ ತುಂಬಲು ಬಂದಿದ್ದರು.
ಈ ವೇಳೆ ಸಿಬ್ಬಂದಿ ಎಟಿಎಂ ಕೇಂದ್ರದ ಒಳಗೆ ಹಣ ತುಂಬುವಾಗ ಕೃಷ್ಣಯ್ಯ ಎಟಿಎಂ ಹೊರತೆ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಮಹಿಳೆ ಎಟಿಎಂ ಕೇಂದ್ರದ ಬಾಗಿಲಿಗೆ ಅಡ್ಡಲಾಗಿ ನಿಂತಿದ್ದರು ಎನ್ನಲಾಗಿದೆ. ಈ ವೇಳೆ ಕೃಷ್ಣಯ್ಯ ಅವರು ಆಂಟಿ ಪಕ್ಕಕ್ಕೆ ಸರಿಯಿರಿ ಎಂದು ಹೇಳಿದ್ದಾರೆ.
‘ಆಂಟಿ’ ಎಂದು ಕರೆದ ಹಿನ್ನೆಲೆಯಲ್ಲಿ, ಇದಕ್ಕೆ ಕೆಂಡಾಮಂಡಲಗೊಂಡಿರುವ ಅಶ್ವಿನಿ, ಕೃಷ್ಣಯ್ಯ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಚುಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಇನ್ನೊಮ್ಮೆ ಈ ಪದ ಬಳಸಿದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆಂದು ತಿಳಿದುಬಂದಿದೆ.
ಈ ನಡುವೆ ಘಟನೆಯನ್ನು ಗಮನಿಸಿದ ದಾರಿಹಹೋಕರು ಕೃಷ್ಣಯ್ಯ ಅವರನ್ನು ರಕ್ಷಣೆ ಮಾಡಲು ಧಾವಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement