ವಿಧಾನಸಭಾ ಚುನಾವಣೆ: ಉದ್ಯೋಗ, ಪಿಂಚಣಿ ಸೌಲಭ್ಯ ನೀಡುವಂತೆ ರಾಜಕೀಯ ಪಕ್ಷಗಳಿಗೆ ತೃತೀಯಲಿಂಗಿಗಳ ಆಗ್ರಹ
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ನಡುವಲ್ಲೇ ಉದ್ಯೋಗ, ವಸತಿ, ಪಿಂಚಣಿ ಸೌಲಭ್ಯ, ಸಲಿಂಗ ವಿವಾಹಗಳಿಗೆ ಬೆಂಬಲ ನೀಡುವಂತೆ ರಾಜಕೀಯ ಪಕ್ಷಗಳಿಗೆ ತೃತೀಯಲಿಂಗಿಗಳು ಆಗ್ರಹಿಸಿದ್ದಾರೆ.
Published: 28th April 2023 10:20 AM | Last Updated: 28th April 2023 01:07 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಬರುತ್ತಿದ್ದು, ಈ ನಡುವಲ್ಲೇ ಉದ್ಯೋಗ, ವಸತಿ, ಪಿಂಚಣಿ ಸೌಲಭ್ಯ, ಸಲಿಂಗ ವಿವಾಹಗಳಿಗೆ ಬೆಂಬಲ ನೀಡುವಂತೆ ರಾಜಕೀಯ ಪಕ್ಷಗಳಿಗೆ ತೃತೀಯಲಿಂಗಿಗಳು ಆಗ್ರಹಿಸಿದ್ದಾರೆ.
ತೃತೀಯಲಿಂಗಿಗಳ ಕಾರ್ಯಕರ್ತೆ ರಕ್ಷಿತಾ ಎಂ ಅವರು ಮಾತನಾಡಿ, ಪ್ರಸ್ತುತ ಆಡಳಿತ ಪಕ್ಷಕ್ಕೆ (ಬಿಜೆಪಿ) ಸಮುದಾಯದ ಬಗ್ಗೆ ಕಾಳಜಿ ಇಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಮಗೆ ಪಿಂಚಣಿ ಯೋಜನೆ ಸಿಕ್ಕಿತು ಮತ್ತು ಗೃಹ ಸಾಲದ ಬಗ್ಗೆ ಕೆಲವು ಚರ್ಚೆಗಳು ನಡೆಯುತ್ತಿದ್ದವು. ಚುನಾವಣೆ ನಿಗದಿಯಾದಾಗ ಮಾತ್ರ ರಾಜಕಾರಣಿಗಳು ನಮ್ಮ ಬಗ್ಗೆ ಕಾಳಜಿ ತೋರುತ್ತಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಚುನಾವಣೆ: ಗದಗ ದಿನಗೂಲಿ ನೌಕರರಿಗೆ ಮೇ ಮೊದಲ ವಾರದವೆರೆಗೆ ಅಚ್ಛೇ ದಿನ್!
ಈ ಬಾರಿಯ ಚುನಾವಣೆಗೆ 41,312 ತೃತೀಯಲಿಂಗಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 4,468 ತೃತೀಯಲಿಂಗಿ ಮತದಾರರಿದ್ದರು. ಚುನಾವಣಾ ಪ್ರಕ್ರಿಯೆಯ ಭಾಗವಾಗಲು ಹೆಚ್ಚಿನವರು ಈ ಬಾರಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.
2021 ರಲ್ಲಿ, ಸರ್ಕಾರಿ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಮೀಸಲಾತಿ ಇರುತ್ತದೆ ಎಂದು ಸರ್ಕಾರ ತಿಳಿಸಿತ್ತು. ಆದರೆ, ಇದು ಅತ್ಯಂತ ಕಡಿಮೆಯಾಗಿದೆ. ರೂ.800 ಪಿಂಚಣಿಯಿಂದ ಜೀವನ ನಡೆಸುವುದು ಕಷ್ಟಕರವಾಗಿದೆ ಎಂದು ರಕ್ಷಿತಾ ಅವರು ಹೇಳಿದ್ದಾರೆ.