ಬೆಂಗಳೂರು: 3 ದಿನ ವರ್ಚುಯಲ್ ಕರೆ, ಉದ್ಯಮಿಗೆ 1.98 ಕೋಟಿ ರೂ. ವಂಚಿಸಿದ ಸೈಬರ್ ವಂಚಕರು!

ಮೂರು ದಿನಗಳ ಕಾಲ ವರ್ಚುಯಲ್ ಕರೆ ಮಾಡಿದ ಸೈಬರ್ ವಂಚಕರು, 46 ವರ್ಷದ ಉದ್ಯಮಿಯೊಬ್ಬರಿಗೆ 1.98 ಕೋಟಿ ರೂಪಾಯಿ ವಂಚಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್‌ನ ಅಧಿಕಾರಿಗಳಂತೆ ನಟಿಸಿ ಉದ್ಯಮಿ ಮನೀಶ್ ಅವರನ್ನು ಬಲೆಗೆ ಬೀಳಿಸಿದ ವಂಚಕರು, ಆತನ ಹೆಸರಿನಲ್ಲಿರುವ ಫೆಡೆಕ್ಸ್ ಕೊರಿಯರ್‌ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೂರು ದಿನಗಳ ಕಾಲ ವರ್ಚುಯಲ್ ಕರೆ ಮಾಡಿದ ಸೈಬರ್ ವಂಚಕರು, 46 ವರ್ಷದ ಉದ್ಯಮಿಯೊಬ್ಬರಿಗೆ 1.98 ಕೋಟಿ ರೂಪಾಯಿ ವಂಚಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್‌ನ ಅಧಿಕಾರಿಗಳಂತೆ ನಟಿಸಿ ಉದ್ಯಮಿ ಮನೀಶ್ ಅವರನ್ನು ಬಲೆಗೆ ಬೀಳಿಸಿದ ವಂಚಕರು, ಆತನ ಹೆಸರಿನಲ್ಲಿರುವ ಫೆಡೆಕ್ಸ್ ಕೊರಿಯರ್‌ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. 

ವಿಡಿಯೋ ಕಾಲ್ ವೇಳೆ ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವಂಚಕರು, ಮನೀಶ್‌ ಕ್ರೈಂ ಬ್ರಾಂಚ್‌ನ ಕಣ್ಗಾವಲಿನಲ್ಲಿದ್ದು, ಡ್ರಗ್ಸ್ ಇರುವ ಕೊರಿಯರ್‌ಗೆ ಸಂಬಂಧಿಸಿದ ಔಪಚಾರಿಕತೆ ಪೂರ್ಣಗೊಳಿಸುವವರೆಗೆ ಕರೆ ಕಟ್ ಮಾಡದಂತೆ ಕೇಳಿಕೊಂಡಿದ್ದಾರೆ. ನಂತರ ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಮೂರು ದಿನಗಳ ಕಾಲ ಕರೆ ಮುಂದುವರೆದಿದ್ದು, ಹಣ ವರ್ಗಾಯಿಸುವಂತೆ ಸೂಚಿಸಿದ್ದಾರೆ. 

ಮೊದಲ ಪಾವತಿಯ ನಂತರ ಮನೀಶ್ ಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ ವಂಚಕರು, 1.98 ಕೋಟಿ ರೂ. ವರ್ಗಾಯಿಸುವವರೆಗೂ ಅವರೊಂದಿಗೆ ಮಾತನಾಡಿದ್ದಾರೆ. ಬ್ಯಾಂಕ್ ಖಾತೆಯಲ್ಲಿ ಕೇವಲ 500 ರೂ. ಇರುವುದು ತಿಳಿದಾಗ ಮನೀಶ್ ಅವರ ಕುಟುಂಬ ಸದಸ್ಯರು ವೀಡಿಯೊ ಕರೆ ಕೊನೆಗೊಳಿಸುವಂತೆ ಸಲಹೆ ನೀಡಿದ್ದಾರೆ. ಆಗ ತಾನೇ ಸೈಬರ್ ಅಪರಾಧಕ್ಕೆ ಬಲಿಯಾಗಿರುವುದು ಅರಿವಾಗಿದೆ. 

ಈ ಕುರಿತು ಮಾತನಾಡಿದ ಪೊಲೀಸ್ ಉಪ ಆಯುಕ್ತ ಸಿ.ಕೆ.ಬಾಬಾ, “ಸೈಬರ್ ವಂಚಕರು ತಾವು ಕಾನೂನು ಜಾರಿ ಸಂಸ್ಥೆಗಳಿಂದ ಬಂದವರು ಎಂದು ಹೇಳುವ ಮೂಲಕ ಕೆಲವರನ್ನು ಬಲಿಪಶು ಮಾಡುತ್ತಿದ್ದಾರೆ. ಅಂತಹ ಸಂದರ್ಭಗಳಲ್ಲಿ, ಜನರು ಪರಿಶೀಲನೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಬೇಕು. ಸಮಯೋಚಿತ ವರದಿ ಮಾಡುವುದು ಮುಖ್ಯವಾಗಿದೆ ಎಂದು ತಿಳಿಸಿದರು. 

ಜನರು ಯಾವುದೇ ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳನ್ನು ಸ್ವೀಕರಿಸಿದರೆ, ಅವರ ವೈಯಕ್ತಿಕ ಮಾಹಿತಿಯನ್ನು ನೀಡದಂತೆ ಸೂಚಿಸಲಾಗಿದೆ. ಬದಲಾಗಿ, ಅವರು ತಕ್ಷಣವೇ ಸ್ಥಳೀಯ ಕಾನೂನು ಜಾರಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಅಥವಾ ಸೈಬರ್ ಕ್ರೈಮ್ ಇಲಾಖೆಗೆ ವರದಿ ಮಾಡಬೇಕು ಎಂದು ಫೆಡೆಕ್ಸ್‌  ಇತ್ತೀಚಿಗೆ ತಿಳಿಸಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com