ಅವಧಿ ಮುಗಿಯುವ ಮೊದಲು ಲಸಿಕೆಗಳ ಬಳಕೆ ಮಾಡಿಕೊಂಡ ರಾಜ್ಯ ಸರ್ಕಾರ!

ಕಳೆದ 10-15 ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಗರಿಷ್ಠ ಪ್ರಮಾಣದ ಕೋವಿಡ್ ಲಸಿಕೆಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಳೆದ 10-15 ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಗರಿಷ್ಠ ಪ್ರಮಾಣದ ಕೋವಿಡ್ ಲಸಿಕೆಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.

ಜನವರಿ 29ರೊಳಗೆ 4.3 ಲಕ್ಷ ಡೋಸ್ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ರಾಜ್ಯ ಸರ್ಕಾರ ಬಳಸಬೇಕಾಗಿತ್ತು, ಈ ಪೈಕಿ 1.1 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆಗಳು ಜನವರಿ 31 ರೊಳಗೆ ಮತ್ತು 3.2 ಲಕ್ಷ ಡೋಸ್ ಕೋವಿಶೀಲ್ಡ್  ಲಸಿಕೆಗಳು ಫೆಬ್ರವರಿ 9 ರೊಳಗೆ ಬಳಸಬೇಕಿತ್ತು. ಈ ಲಸಿಕೆಗಳನ್ನು ಜನವರಿ 31ರೊಳಗೆ ಬಳಕೆ ಮಾಡಲಾಗಿದ್ದು, ಈ ಲಸಿಕೆಗಳು ವ್ಯರ್ಥವಾಗದಂತೆ ಬಳಕೆ ಮಾಡಿಕೊಂಡಿದ್ದೇವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲಸಿಕಾ ಅಭಿಯಾನದ ಉಪ ನಿರ್ದೇಶಕಿ ಡಾ.ರಜಿನಿ ಅವರು ಹೇಳಿದ್ದಾರೆ.

26,290 ಕೋವಿಶೀಲ್ಡ್ ಲಸಿಕೆಗಳು ಬಾಕಿ ಉಳಿದಿದ್ದು, ಶೀಘ್ರಗತಿಯಲ್ಲಿ ಈ ಲಸಿಕೆಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ. ಪ್ರಸ್ತುತ ಯಾವುದೇ ಆಸ್ಪತ್ರೆಯಲ್ಲಿಯೂ ಅವಧಿ ಮೀರಿದ ಲಸಿಕೆಗಳ ದಾಸ್ತಾನುಗಳಿಲ್ಲ. 26,290 ಲಸಿಕೆಗಳ ಪೈಕಿ 1,230 ಡೋಸ್ ಲಸಿಕೆಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಸ್ಪತ್ರೆಗಳಲ್ಲಿ ಉಳಿದಿವೆ ಎಂದು ತಿಳಿಸಿದ್ದಾರೆ.

ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಮಾತನಾಡಿ, ಅವಧಿಗೂ ಮುನ್ನವೇ ಕೋವ್ಯಾಕ್ಸಿನ್ ಲಸಿಕೆಗಲನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಉಳಿದಿರುವ ಕೋವಿಶೀಲ್ಡ್ ಲಸಿಕೆಗಳನ್ನು ಶೀಘ್ರದಲ್ಲೇ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿರುವ ಲಸಿಕೆಗಳ ಅವಧಿ ಗುರುವಾರ ಮುಕ್ಯಾಯಗೊಳ್ಳುವುದರಿಂದ, ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಬೇಡಿಕೆಗಳಿಗೆ ಅನುಗುಣವಾಗಿ ಲಸಿಕೆಗಳನ್ನು ಖರೀದಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳಳು ಜನರು ಹಿಂಜರಿಯುತ್ತಿದ್ದರೂ, ಅಭಿಯಾನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆಂದು ಡಾ.ರಜನಿಯವರು ಹೇಳಿದ್ದಾರೆ.

ವಯಸ್ಸಾದವರು, ಅನಾರೋಗ್ಯ ಪೀಡಿತರಿಗೆ ಆದ್ಯತೆ ಮೇರೆಗೆ ಲಸಿಕೆಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.0.5ಕ್ಕಿಂತ ಕಡಿಮೆ ಇದೆ. ಆದ್ದರಿಂದ ಸೋಕು ಹೆಚ್ಚಾಗುವ ಕುರಿತು ಯಾವುದೇ ಆತಂಕಗಳಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com