ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಬಿಡಿಎ ಮುಖ್ಯಸ್ಥ ಕುಮಾರ್ ಜಿ ನಾಯ್ಕ್ ಆದೇಶ

 ವ್ಲೀಲ್‌ಚೇರ್‌ನಲ್ಲಿದ್ದವರು ಮತ್ತು 80 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಕೆಲವು ಸೈಟ್ ಹಂಚಿಕೆದಾರರು ಬುಧವಾರ ಕುಮಾರ ಪಾರ್ಕ್ ವೆಸ್ಟ್‌ನಲ್ಲಿರುವ ಬಿಡಿಎ ಕೇಂದ್ರ ಕಚೇರಿಗೆ ತಮ್ಮ ದೀರ್ಘಕಾಲದ ಬಾಕಿ ಇರುವ ಕುಂದುಕೊರತೆಗಳಿಗೆ ಪರಿಹಾರ ಪಡೆಯಲು ಬಂದವರಾಗಿದ್ದರು.
ಬಿಡಿಎ
ಬಿಡಿಎ

ಬೆಂಗಳೂರು: ವ್ಲೀಲ್‌ಚೇರ್‌ನಲ್ಲಿದ್ದವರು ಮತ್ತು 80 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಕೆಲವು ಸೈಟ್ ಹಂಚಿಕೆದಾರರು ಬುಧವಾರ ಕುಮಾರ ಪಾರ್ಕ್ ವೆಸ್ಟ್‌ನಲ್ಲಿರುವ ಬಿಡಿಎ ಕೇಂದ್ರ ಕಚೇರಿಗೆ ತಮ್ಮ ದೀರ್ಘಕಾಲದ ಬಾಕಿ ಇರುವ ಕುಂದುಕೊರತೆಗಳಿಗೆ ಪರಿಹಾರ ಪಡೆಯಲು ಬಂದವರಾಗಿದ್ದರು.

ಎರಡು ಪ್ರತ್ಯೇಕ ಕುಂದುಕೊರತೆ ಸಭೆಗಳು ನಡೆಯಿತು. ಅದರಲ್ಲಿ ಒಂದು ಸಾಮಾನ್ಯ ವಾರದ ಬಿಡಿಎ ಸಭೆ ಮತ್ತು ಇನ್ನೊಂದು, ಲೋಕಾಯುಕ್ತದಿಂದ ಸಭೆ ಮಧ್ಯಾಹ್ನ 3 ರಿಂದ ಏಕಕಾಲದಲ್ಲಿ ನಡೆಯಿತು. ಕಳೆದ ವಾರ ಇದೇ ಕಚೇರಿಯಲ್ಲಿ ಲೋಕಾಯುಕ್ತ ಸರಣಿ ದಾಳಿ ನಡೆಸಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಇತ್ತೀಚೆಗಷ್ಟೇ ಬಿಡಿಎ ಆಯುಕ್ತರಾಗಿ ಪೂರ್ಣಾವದಿ ಅಧಿಕಾರ ವಹಿಸಿಕೊಂಡಿರುವ ಕುಮಾರ್ ಜಿ ನಾಯ್ಕ್ ಅವರು ಪ್ರತಿ ಕುಂದುಕೊರತೆಗಳನ್ನು ತಾಳ್ಮೆಯಿಂದ ಆಲಿಸಿ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹೆಚ್ಚಿನವರು ಸಂವಾದದಿಂದ ಸಂತೋಷದಿಂದ ಹೊರಬಂದರು ಮತ್ತು ಸುದ್ದಿರಾರರೊಂದಿಗೆ ಮಾತನಾಡಿ, ಈ ಬಾರಿ ನಾವು ಪರಿಹಾರವನ್ನು ಪಡೆಯುತ್ತೇವೆ ಎಂದು ಭಾವಿಸುತ್ತೇವೆ. ಈ ಆಯುಕ್ತರು ನಮ್ಮ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಪ್ರಾಮಾಣಿಕವಾಗಿ ತೋರುತ್ತಿದ್ದಾರೆ ಎಂದರು

ನಾಯ್ಕ್ ಅವರೊಂದಿಗೆ ಸಂವಾದ ನಡೆಸಿದ 82 ಜನರಲ್ಲಿ 90 ವರ್ಷದ ವಿ ವಿ ಮಹೇಶ್ ಸೇರಿದ್ದಾರೆ. ಟಿಎನ್‌ಐಇ ಜೊತೆಗೆ ಮಾತನಾಡಿದ ಅವರು, 'ಬೀಮನಕುಪ್ಪೆಯಲ್ಲಿರುವ ನನ್ನ 4 ಎಕರೆ ಮತ್ತು 2 ಗುಂಟೆಯನ್ನು ನಾಡಪ್ರಭು ಕೆಂಪೇಗೌಡ ಲೇಔಟ್ ರಚಿಸಲು ಸ್ವಾಧೀನಪಡಿಸಿಕೊಳ್ಳಲು ಮೀಸಲಿಡಲಾಗಿದೆ. ಅಲ್ಲಿ ನಾವು ಬೃಹತ್ ನರ್ಸರಿಯನ್ನು ಮಾಡಿದ್ದೆವು. ಸರ್ಕಾರದ ನಿಯಮಗಳ ಪ್ರಕಾರ, ನರ್ಸರಿಗಳನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ನಾವು ಬಿಡಿಎಯನ್ನು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದೇವೆ ಮತ್ತು ಹೈಕೋರ್ಟ್ 2014 ರಲ್ಲಿ ನಮ್ಮ ಪರವಾಗಿ ತೀರ್ಪು ನೀಡಿತು. ಆದರೆ, ಬಿಡಿಎ ಕಚೇರಿಗೆ ನಾನು ಪದೇ ಪದೆ ಭೇಟಿ ನೀಡಿದ್ದರೂ ಅಧಿಸೂಚನೆಯನ್ನು ರದ್ದುಗೊಳಿಸುವ ಸರಳ ಪತ್ರವನ್ನು ಬಿಡಿಎ ಇನ್ನೂ ನೀಡಿಲ್ಲ. ಆದಷ್ಟು ಬೇಗ ಮಾಡಲಾಗುವುದು ಎಂದು ಆಯುಕ್ತರು ಭರವಸೆ ನೀಡಿದ್ದಾರೆ ಎಂದರು.

ತಣಿಸಂದ್ರದಲ್ಲಿ ನಿವೇಶನ ಮಂಜೂರಾದ ಮಹಿಳೆಯೊಬ್ಬರು ತಮ್ಮ ಕಂದಾಯ ನಿವೇಶನ ಹಾಗೂ ಮತ್ತೊಬ್ಬ ಖತೇದಾರ್‌ಗೆ ಜಂಟಿಯಾಗಿ ಮಂಜೂರಾದ ನಿವೇಶನವು ಸಂಪೂರ್ಣ ತಮ್ಮದೆಂದು ಹೇಳಿಕೊಂಡು ಬಿಡಿಎಯಿಂದ ಪರಿಹಾರವನ್ನೂ ವಸೂಲಿ ಮಾಡಿದ್ದಾರೆ ಎಂದು ತಿಳಿಸಿದರು. ಮಹಿಳೆಗೆ ವಂಚಿಸಿದ ಮಂಜೂರಾತಿದಾರ ಹಾಗೂ ಅದಕ್ಕೆ ಅನುಕೂಲ ಮಾಡಿಕೊಟ್ಟ ಬಿಡಿಎ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಭೂಸ್ವಾಧೀನ ವಿಭಾಗದ ಜಿಲ್ಲಾಧಿಕಾರಿ ಎ ಸೌಜನ್ಯ ಅವರಿಗೆ ಕುಮಾರ್ ಜಿ ನಾಯ್ಕ್ ಸೂಚಿಸಿದರು. 

ಎನ್‌ಪಿಕೆಎಲ್‌ನಲ್ಲಿ 30x40 ಚದರ ಅಡಿ ನಿವೇಶನ ಪಡೆದ ಮತ್ತೊಬ್ಬ ಮಂಜೂರಾತಿಗೆ ಬಿಡಿಎ ಅಧಿಕಾರಿಯೊಬ್ಬರು ಇನ್ನೊಬ್ಬರಿಗೆ ಎನ್‌ಒಸಿ (ನಿರಾಕ್ಷೇಪಣಾ ಪ್ರಮಾಣಪತ್ರ) ನೀಡಿದ್ದಾರೆ. ಅಂತಹ ಸಿಬ್ಬಂದಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಕುಮಾರ್ ಜಿ ನಾಯ್ಕ್ ಟಿಎನ್‌ಐಇ ಜೊತೆಗೆ ಮಾತನಾಡಿ, ಇಂದು ಹೆಚ್ಚಿನ ದೂರುಗಳು ಅರ್ಕಾವತಿ ಲೇಔಟ್‌ಗೆ ಸಂಬಂಧಿಸಿವೆ. ಮಂಜೂರು ಮಾಡಿದ ಸೈಟ್‌ಗಳು ಮತ್ತು ವಿತರಣೆಗೆ ಲಭ್ಯವಿರುವ ಎಲ್ಲ ವಿವರಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ನಾವು ಶೀಘ್ರದಲ್ಲೇ ಪೂರ್ಣಗೊಳಿಸುತ್ತೇವೆ. ಆ ಬಳಿಕ ನಿರ್ಮಾಣ ಕಾಮಗಾರಿ ಆರಂಭಿಸಲು ಅನುಮತಿ ನೀಡಲಾಗುವುದು ಎಂದರು.

ಬಿಡಿಎ ಅಧಿಕಾರಿಗಳ ವಿರುದ್ಧ ದೂರು

ಎಸ್‌ಪಿ ಕೆವಿ ಅಶೋಕ್ ಕುಮಾರ್ ಅಧ್ಯಕ್ಷತೆಯಲ್ಲಿ ಲೋಕಾಯುಕ್ತ ಸಭೆ ಪ್ರವೇಶ ದ್ವಾರದಲ್ಲಿ ನಡೆಯಿತು. ಬಿಡಿಎ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಿದರು. ಅರ್ಕಾವತಿ ಲೇಔಟ್‌ಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಒಟ್ಟು 109 ಜನರು ನ್ಯಾಯ ಕೋರಿ ನಮ್ಮನ್ನು ಸಂಪರ್ಕಿಸಿದ್ದಾರೆ. 37 ಲಿಖಿತ ದೂರುಗಳನ್ನು ಸಲ್ಲಿಸಲಾಗಿದೆ. ಅನೇಕರು ತಮ್ಮೊಂದಿಗೆ ಅಗತ್ಯ ದಾಖಲೆಗಳನ್ನು ತಂದಿಲ್ಲ, ಆದ್ದರಿಂದ ನಾವು ಶೀಘ್ರದಲ್ಲೇ ನಮ್ಮ ಕಚೇರಿಗೆ ಭೇಟಿ ನೀಡಿ ದೂರುಗಳನ್ನು ಸಲ್ಲಿಸುವಂತೆ ತಿಳಿಸಿದ್ದೇವೆ ಎಂದು ಉಪ ಎಸ್‌ಪಿ ಆ್ಯಂಟೋನಿ ಜಾನ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com