ಚಿಕನ್ ಪಾಕ್ಸ್ (ಸಂಗ್ರಹ ಚಿತ್ರ)
ಚಿಕನ್ ಪಾಕ್ಸ್ (ಸಂಗ್ರಹ ಚಿತ್ರ)

ಬೇಸಿಗೆ ಸಮಯ: ಬೆಂಗಳೂರಿನಲ್ಲಿ ಹೆಚ್ಚು ಯುವಕರಿಗೆ ಚಿಕನ್ ಪಾಕ್ಸ್; ತಜ್ಞರ ಎಚ್ಚರಿಕೆ

ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಬೆಂಗಳೂರು ಪರಿವರ್ತನೆಯಾಗುತ್ತಿರುವ ಹೊತ್ತಿನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕ್ರಮೇಣ ಚಿಕನ್ ಪಾಕ್ಸ್ ಪ್ರಕರಣಗಳು ಹೆಚ್ಚುತ್ತಿದ್ದು, ಹೆಚ್ಚು ಯುವಕರಿಗೆ ಚಿಕನ್ ಪಾಕ್ಸ್ ತಗಲುವ ಅವಕಾಶವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
Published on

ಬೆಂಗಳೂರು: ಚಳಿಗಾಲದಿಂದ ಬೇಸಿಗೆ ಕಾಲಕ್ಕೆ ಬೆಂಗಳೂರು ಪರಿವರ್ತನೆಯಾಗುತ್ತಿರುವ ಹೊತ್ತಿನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕ್ರಮೇಣ ಚಿಕನ್ ಪಾಕ್ಸ್ ಪ್ರಕರಣಗಳು ಹೆಚ್ಚುತ್ತಿದ್ದು, ಹೆಚ್ಚು ಯುವಕರಿಗೆ ಚಿಕನ್ ಪಾಕ್ಸ್ ತಗಲುವ ಅವಕಾಶವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹೌದು.. ಚಿಕನ್ ಪಾಕ್ಸ್ ಸಾಮಾನ್ಯವಾಗಿ ಮಕ್ಕಳನ್ನು ಕಾಡುವ ಸೋಂಕಾದರೂ ಮಕ್ಕಳು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದರೂ, ಈ ವರ್ಷ ಹೆಚ್ಚಿನ ಯುವಕರು ಕೂಡ ಈ ಸೋಂಕಿಗೆ ಒಳಗಾಗುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಸಕ್ರಾ ವರ್ಲ್ಡ್ ಹಾಸ್ಪಿಟಲ್‌ನ ಪೀಡಿಯಾಟ್ರಿಕ್ಸ್ ಮತ್ತು ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥ ಡಾ.ರಜತ್ ಆತ್ರೇಯ ಮಾತನಾಡಿ, ಸಾಮಾನ್ಯವಾಗಿ ಬೇಸಿಗೆಯಲ್ಲಿ ಚಿಕನ್‌ಪಾಕ್ಸ್ ಪ್ರಕರಣಗಳು ಹೆಚ್ಚಾಗುತ್ತವೆ ಮತ್ತು ಹವಾಮಾನ ಬದಲಾಗುತ್ತಿರುವುದರಿಂದ ಚಿಕನ್ ಪಾಕ್ಸ್ ರೋಗಿಗಳು ಹೆಚ್ಚಾಗುತ್ತಿದ್ದಾರೆ. ಕಳೆದ ಕೆಲವು ವಾರಗಳಿಂದ ಪ್ರತಿದಿನ ಒಂದೋ ಎರಡೋ ಪ್ರಕರಣಗಳು ನಮ್ಮ ಆಸ್ಪತ್ರೆಗೆ ಬರುತ್ತಿವೆ. ಈ ವರ್ಷ, ಯುವ ವಯಸ್ಕರಲ್ಲಿ (20-30 ವರ್ಷಗಳು) ಹೆಚ್ಚಿನ ಪ್ರಕರಣಗಳನ್ನು ನೋಡಿ ಆಶ್ಚರ್ಯಚಕಿತರಾದೆವು. ಮಕ್ಕಳಲ್ಲಿ ಸುಧಾರಿತ ಲಸಿಕೆ ವ್ಯಾಪ್ತಿ, ಸೋಂಕುಗಳು ಮತ್ತು ಅವರಲ್ಲಿ ರೋಗದ ತೀವ್ರತೆಯನ್ನು ಕಡಿಮೆ ಮಾಡುವುದು ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

ಅಂತೆಯೇ ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಗರ್ಭಾವಸ್ಥೆಯಲ್ಲಿ ಯಾವುದೇ ತೊಂದರೆಗಳನ್ನು ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ವೈದ್ಯರು ಎಚ್ಚರಿಸಿದ್ದಾರೆ. ಮಹಿಳೆಯರು ತಮ್ಮ ಕುಟುಂಬದಲ್ಲಿ ಸೋಂಕಿತರನ್ನು ಹೊಂದಿದ್ದರೆ, ಅವರು ಸಾಮಾಜಿಕ ಅಂತರವನ್ನು ಖಾತ್ರಿಪಡಿಸಿಕೊಳ್ಳಬೇಕು ಮತ್ತು ಸೋಂಕಿತ ವ್ಯಕ್ತಿಯೊಂದಿಗೆ ಅದೇ ಲಿನಿನ್ ಮತ್ತು ಟವೆಲ್ಗಳು ಮತ್ತು  ಬಟ್ಟೆಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಸೋಂಕಿತ ವ್ಯಕ್ತಿ ಬಳಸಿದ ಬಟ್ಟೆಗಳನ್ನು ಮತ್ತೊಬ್ಬರು ಬಳಸಬಾರದು. ಇದರಿಂದ ಸೋಂಕು ಪ್ರಸರಣ ತಕ್ಕ ಮಟ್ಟಿಗೆ ನಿಯಂತ್ರಿಸಬಹುದು ಎಂದು ಹೇಳಿದ್ದಾರೆ.

ಆಸ್ಟರ್ ಆರ್‌ವಿ ಆಸ್ಪತ್ರೆಯ ಆಂತರಿಕ ಔಷಧಿಗಳ (ಜನರಲ್ ಮೆಡಿಸಿನ್) ಸಲಹೆಗಾರ ಡಾ ಕೆಎಸ್ ಹರ್ಷಿತ್ ಮಾತನಾಡಿ, ಕಳೆದ 15 ದಿನಗಳಲ್ಲಿ ನಾವು ಆಸ್ಪತ್ರೆಯಲ್ಲಿ 3-4 ಹೊಸ ಪ್ರಕರಣಗಳನ್ನು ನೋಡಿದ್ದೇವೆ. ರೋಗಿಗಳು ಜ್ವರ, ಹಸಿವಿನ ಕೊರತೆ, ದಣಿವು ಮತ್ತು ಚರ್ಮದ ಕಿರಿಕಿರಿಯ ಲಕ್ಷಣಗಳೊಂದಿಗೆ ಬರುತ್ತಿದ್ದಾರೆ. ಅವರಿಗೆ ಆಂಟಿವೈರಲ್ ಔಷಧಗಳನ್ನು ಹಾಕಲಾಗುತ್ತದೆ ಮತ್ತು ಏಳು ದಿನಗಳವರೆಗೆ ತಮ್ಮನ್ನು ಪ್ರತ್ಯೇಕಿಸಲು ಹೇಳಲಾಗುತ್ತದೆ. ಮಕ್ಕಳಲ್ಲಿ ಅನೇಕ ಪ್ರಕರಣಗಳನ್ನು ನಾವು ಗಮನಿಸಿಲ್ಲ. ಸೋಂಕಿತರಲ್ಲಿ ಹೆಚ್ಚಿನವರು 18-25 ವಯಸ್ಸಿನವರಾಗಿದ್ದಾರೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com