ಕೇರಳದಿಂದ ಬರುವ ತ್ಯಾಜ್ಯದಿಂದ ತುಂಬಿ ತುಳುಕುತ್ತಿರುವ ಕೊಡಗಿನ ಅರಣ್ಯ ಪ್ರದೇಶಗಳು...

ಕೇರಳದಿಂದ ಆಗಮಿಸುವ ಟ್ರಕ್‌ಗಟ್ಟಲೆ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯುತ್ತಿರುವುದರಿಂದ ಕೊಡಗಿನಲ್ಲಿ ಅರಣ್ಯ ಮತ್ತು ವನ್ಯಜೀವಿಗಳು ಗಂಭೀರ ಅಪಾಯವನ್ನು ಎದುರಿಸುತ್ತಿವೆ. ಸಾರ್ವಜನಿಕ ಅರಿವಿನ ಕೊರತೆ ಮತ್ತು ಪ್ರವಾಸಿಗರಿಗೆ ಸರಿಯಾದ ಸೌಲಭ್ಯಗಳ ಕೊರತೆಯಿಂದಾಗಿ NH-275 ರ ಅರಣ್ಯದ ಅಂಚಿನಲ್ಲಿ ಕಸ ಹಾಕುವ ಅಪಾಯವಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಮಡಿಕೇರಿ: ಕೇರಳದಿಂದ ಆಗಮಿಸುವ ಟ್ರಕ್‌ಗಟ್ಟಲೆ ತ್ಯಾಜ್ಯವನ್ನು ಅಕ್ರಮವಾಗಿ ಸುರಿಯುತ್ತಿರುವುದರಿಂದ ಕೊಡಗಿನಲ್ಲಿ ಅರಣ್ಯ ಮತ್ತು ವನ್ಯಜೀವಿಗಳು ಗಂಭೀರ ಅಪಾಯವನ್ನು ಎದುರಿಸುತ್ತಿವೆ. ಸಾರ್ವಜನಿಕ ಅರಿವಿನ ಕೊರತೆ ಮತ್ತು ಪ್ರವಾಸಿಗರಿಗೆ ಸರಿಯಾದ ಸೌಲಭ್ಯಗಳ ಕೊರತೆಯಿಂದಾಗಿ NH-275 ರ ಅರಣ್ಯದ ಅಂಚಿನಲ್ಲಿ ಕಸ ಹಾಕುವ ಅಪಾಯವಿದೆ.
ಕರ್ನಾಟಕ-ಕೇರಳ ಗಡಿಗೆ ಹೊಂದಿಕೊಂಡಿರುವ ಮಾಕುಟ್ಟ ಮೀಸಲು ಅರಣ್ಯ ಮತ್ತು ಬ್ರಹ್ಮಗಿರಿ ವನ್ಯಜೀವಿ ಅರಣ್ಯ ಕ್ರಮೇಣ ತ್ಯಾಜ್ಯದ ತೆರೆದ ಡಂಪಿಂಗ್ ಯಾರ್ಡ್ ಆಗಿ ಬದಲಾಗುತ್ತಿದೆ.

ಕೊಡಗು ಸೇವಾ ಕೇಂದ್ರದ ಸದಸ್ಯರು ಸೇರಿದಂತೆ ಜಿಲ್ಲೆಯ ಕೆಲವು ಎಚ್ಚೆತ್ತ ನಿವಾಸಿಗಳು ಈ ಸಮಸ್ಯೆಯನ್ನು ಗಮನಕ್ಕೆ ತಂದ ನಂತರವೇ ಅಧಿಕಾರಿಗಳು ಅರಣ್ಯದ ಅಂಚಿನಿಂದ ತ್ಯಾಜ್ಯವನ್ನು ಸಂಗ್ರಹಿಸುತಿದ್ದಾರೆ ಮತ್ತು ಸುಡಲು ಮುಂದಾಗಿದ್ದಾರೆ. ಅರಣ್ಯ ಇಲಾಖೆ ಮಾಕುಟ್ಟ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಕೇರಳದಿಂದ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ 15 ಮೂಟೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕ ಹಾಗೂ ಕ್ಲೀನರ್ ಅನ್ನು ಅರಣ್ಯಾಧಿಕಾರಿಗಳು ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಕೇರಳದಿಂದ ಕಸ ಸಾಗಿಸಲು ಯತ್ನಿಸುತ್ತಿದ್ದವರ ವಿರುದ್ಧ ಇನ್ನೂ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.

<strong>ಸ್ವಚ್ಛತಾ ಅಭಿಯಾನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ</strong>
ಸ್ವಚ್ಛತಾ ಅಭಿಯಾನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ

ಪ್ರಯಾಣಿಕರು ಕಸ ಹಾಕುವುದನ್ನು ತಡೆಯಲು ಅರಣ್ಯಾಧಿಕಾರಿಗಳು ಮೀಸಲು ಅರಣ್ಯ ಪ್ರದೇಶದಾದ್ಯಂತ ಪ್ರತಿದಿನ ಗಸ್ತು ನಡೆಸಲಿದ್ದಾರೆ ಎಂದು ಮಾಕುಟ್ಟ ಅರಣ್ಯ ವಲಯದ ಅರಣ್ಯಾಧಿಕಾರಿ (ಆರ್‌ಎಫ್‌ಒ) ದೇಚಮ್ಮ ಹೇಳಿದರು.

ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುವುದಕ್ಕೆ ನಿವಾಸಿಗಳ ಅಸಮಾಧಾನ

ಆದರೆ, ಅವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಅರಣ್ಯಾಧಿಕಾರಿಗಳ ವಿರುದ್ಧ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯದೊಳಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುಡುವುದರಿಂದ ಆರೋಗ್ಯಕ್ಕೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದಲ್ಲದೆ, ನೂರಾರು ಪ್ರವಾಸಿಗರು ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಲು ಮಾಕುಟ್ಟ ಮಾರ್ಗದ ಮೂಲಕವೇ ತೆರಳುತ್ತಾರೆ ಮತ್ತು ಅಂಚಿನಲ್ಲಿ ಹಲವಾರು ಜಾಗೃತಿ ಸೂಚನಾ ಫಲಕಗಳನ್ನು ಹಾಕಲಾಗಿದ್ದರೂ, ಕಸ ಹಾಕುವುದನ್ನು ತಡೆಯುವುದು ಅರಣ್ಯಾಧಿಕಾರಿಗಳಿಗೆ ಕಷ್ಟಕರವಾಗಿದೆ.

ವಾಹನ ನಿಲುಗಡೆಗೆ ಕಡಿವಾಣ ಹಾಕಲು ರಸ್ತೆ ಬದಿ ಮರದ ಕೊಂಬೆಗಳನ್ನು ಹಾಕಲಾಗುತ್ತಿದೆ ಎಂದು ದೇಚಮ್ಮ ತಿಳಿಸಿದರು. ಈ ಮಧ್ಯೆ, ಕುಶಾಲನಗರ-ಮಡಿಕೇರಿ ರಸ್ತೆಯ ಎನ್‌ಎಚ್-275 ರ ಅರಣ್ಯದ ಅಂಚುಗಳು ಅಪಾಯವನ್ನು ಎದುರಿಸುತ್ತಿದ್ದು, ಇದಕ್ಕೆ ಸಾರ್ವಜನಿಕ ಅರಿವಿನ ಕೊರತೆ ಕಾರಣವೆಂದು ಉಲ್ಲೇಖಿಸಲಾಗಿದೆ. ತಿಂಗಳಿಗೊಮ್ಮೆ ಅರಣ್ಯದ ಅಂಚಿನಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಟ್ರಕ್‌ಗಟ್ಟಲೆ ಕಸ ಸಂಗ್ರಹಿಸುತ್ತೇವೆ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com