ಮಾರತಳ್ಳಿ ಪಾದಚಾರಿ ಮಾರ್ಗದಲ್ಲಿ ಎಸೆದಿರುವ ಸೋಫಾ.
ಮಾರತಳ್ಳಿ ಪಾದಚಾರಿ ಮಾರ್ಗದಲ್ಲಿ ಎಸೆದಿರುವ ಸೋಫಾ.

ರಸ್ತೆ, ಫುಟ್ ಪಾತ್ ಗಳಲ್ಲಿ ಸೋಫಾ, ಕುರ್ಚಿಗಳ ಎಸೆಯುತ್ತಿರುವ ಜನತೆ: ಬಿಬಿಎಂಪಿಗೆ ಹೊಸ ತಲೆನೋವು

ರಸ್ತೆಗಳು, ಪಾದಚಾರಿ ಮಾರ್ಗಗಳ ಮಧ್ಯೆ ಜನರು ಹಳೆಯ ಸೋಫಾ ಸೆಟ್'ಗಳು, ಮುರಿದ ಕುರ್ಚಿಗಳು, ಕಮೋಡ್'ಗಳು, ವಾಹನಗಳನ್ನು ಬಿಟ್ಟು ಹೋಗುತ್ತಿದ್ದು, ಈ ಬೆಳವಣಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹೊಸ ತಲೆನೋವು ಶುರುವಾಗಿದೆ.
Published on

ಬೆಂಗಳೂರು: ರಸ್ತೆಗಳು, ಪಾದಚಾರಿ ಮಾರ್ಗಗಳ ಮಧ್ಯೆ ಜನರು ಹಳೆಯ ಸೋಫಾ ಸೆಟ್'ಗಳು, ಮುರಿದ ಕುರ್ಚಿಗಳು, ಕಮೋಡ್'ಗಳು, ವಾಹನಗಳನ್ನು ಬಿಟ್ಟು ಹೋಗುತ್ತಿದ್ದು, ಈ ಬೆಳವಣಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹೊಸ ತಲೆನೋವು ಶುರುವಾಗಿದೆ.

ಘನತ್ಯಾಜ್ಯ ನಿರ್ವಹಣೆಯ ಹೋರಾಟಗಾರ್ತಿ ಕಾತ್ಯಾಯಿನಿ ಚಾಮರಾಜ್ ಅವರು ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಮಾತ್ರವಲ್ಲದೆ ಬೃಹತ್ ತ್ಯಾಜ್ಯವನ್ನು ನಿಭಾಯಿಸುವಲ್ಲಿ ಬಿಬಿಎಂಪಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

“ಬೃಹತ್ ತ್ಯಾಜ್ಯವು ಪಾಶ್ಚಿಮಾತ್ಯ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದು ಪರಿಕಲ್ಪನೆಯಾಗಿದೆ, ಅಲ್ಲಿ ಅವರು ಮೂರು ತಿಂಗಳಿಗೊಮ್ಮೆ ಕಾರ್ಪೆಟ್‌ಗಳು, ಮುರಿದ ಪೀಠೋಪಕರಣಗಳು, ಕಮೋಡ್‌ಗಳು ಮತ್ತು ಅನಗತ್ಯ ಗೃಹೋಪಯೋಗಿ ವಸ್ತುಗಳನ್ನು ಸಂಗ್ರಹಿಸುತ್ತಾರೆ.ಅಂತಹ ವಸ್ತುಗಳನ್ನು ಸಂಗ್ರಹಿಸುವ ದಿನಾಂಕದ ಬಗ್ಗೆ ನಿವಾಸಿಗಳಿಗೆ ಮುಂಚಿತವಾಗಿ ಸೂಚನೆ ನೀಡುತ್ತಾರೆ. ಮಹೇಂದ್ರ ಜೈನ್ ಅವರು ಒಂದು ವರ್ಷದ ಹಿಂದೆ ನಗರಾಭಿವೃದ್ಧಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದಾಗ ನಾನು ಅವರಿಗೆ ಪ್ರಾತಿನಿಧ್ಯ ನೀಡಿದ್ದೆ. ಆದರೆ ಏನೂ ಮಾಡಲಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಅಂತಹ ವಸ್ತುಗಳನ್ನು ಎಸೆಯುವುದು ನಿವಾಸಿಗಳ ಕಡೆಯಿಂದಾಗುತ್ತಿರುವ ಬೇಜವಾಬ್ದಾರಿಯಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

ಬಿಬಿಎಂಪಿ ಘನತ್ಯಾಜ್ಯ ನಿರ್ವಹಣಾ ವಿಭಾಗದ ಆಯುಕ್ತ ಹರೀಶ್‌ಕುಮಾರ್ ಮಾತನಾಡಿ, ಪಾದಚಾರಿ ಮಾರ್ಗಗಳಲ್ಲಿ ಇಂತಹ ವಸ್ತುಗಳನ್ನು ಎಸೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ದೂರುಗಳು ಹೆಚ್ಚಾಗಿ ಕೇಳಿಬರುವ ಸ್ಥಳಗಳಲ್ಲಿ ಮಾರ್ಷಲ್ ಗಳನ್ನು ನಿಯೋಜಿಸಬೇಕಾಗುತ್ತದೆ. ಬೇಜವಾಬ್ದಾರಿತನದಿಂದ ವರ್ತಿಸವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕೆಆರ್ ಪುರಂ, ಹಲಸೂರಿನ ಅನ್ನಸಂದ್ರಪಾಳ್ಯ, ಜ್ಯೋತಿ ನಗರ, ಬಸವನಗರ ಮುಂತಾದ ಪ್ರದೇಶಗಳಲ್ಲಿ ತಡರಾತ್ರಿ ಮತ್ತು ಮುಂಜಾನೆ ಜನರು ಇಂತಹ ವಸ್ತುಗಳನ್ನು ಎಸೆಯುತ್ತಿರುವುದು ಕಂಡು ಬಂದಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com