ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: 53 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಬಡ್ತಿ
ಪೊಲೀಸ್ ಇಲಾಖೆಯಲ್ಲಿನ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರವು 53 ಭಾರತೀಯ ಪೊಲೀಸ್ ಸೇವಾ ಅಧಿಕಾರಿಗಳನ್ನುಬಡ್ತಿ ಮತ್ತು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
Published: 01st January 2023 10:43 AM | Last Updated: 01st January 2023 10:43 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿನ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರವು 53 ಭಾರತೀಯ ಪೊಲೀಸ್ ಸೇವಾ ಅಧಿಕಾರಿಗಳನ್ನುಬಡ್ತಿ ಮತ್ತು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ರಾಜ್ಯ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಡಿಜಿಪಿ ಡಾ.ಅಮರ್ ಕುಮಾರ್ ಪಾಂಡೆ ಅವರ ನಿವೃತ್ತಿಯಿಂದ ತೆರವಾದ ಡಿಜಿಪಿ ಹುದ್ದೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅವರಿಗೆ ಮುಂಬಡ್ತಿ ನೀಡಿದ ಸರ್ಕಾರವು, ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತ ಹುದ್ದೆಯನ್ನು ಪದೋನ್ನತಿಗೊಳಿಸಿ ಪ್ರತಾಪ್ ರೆಡ್ಡಿ ಅವರನ್ನು ಅದೇ ಸ್ಥಾನದಲ್ಲಿ ಮುಂದುವರೆಸಿದೆ.
ಇನ್ನು ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಮೋಹನ್ ಅವರನ್ನು ಅಗ್ನಿಶಾಮಕ ದಳದ ಡಿಜಿಪಿ ಸ್ಥಾನಕ್ಕೆ ವರ್ಗಾಯಿಸಿದೆ. ಅದೇ ರೀತಿ ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಸೇರಿದಂತೆ 28 ಎಸ್ಪಿ ದರ್ಜೆ ಅಧಿಕಾರಿಗಳಿಗೆ ಆಡಳಿತಾತ್ಮಕ ಹಿರಿತನ ಲಭ್ಯವಾಗಿದೆ.
ಈಶಾನ್ಯ ವಲಯದ (ಕಲಬುರಗಿ) ಐಜಿಪಿ ಮನೀಶ್ ಖಾರ್ಬಿಕರ್ ಅವರನ್ನು ಎಡಿಜಿಪಿ (ಜೈಲುಗಳು ಮತ್ತು ಸುಧಾರಣಾ ಸೇವೆಗಳು) ಆಗಿ ಬಡ್ತಿ ನೀಡಲಾಗಿದೆ.
ಐಜಿಪಿ ಸೌಮೇಂದು ಮುಖರ್ಜಿ ಅವರನ್ನು ಎಡಿಜಿಪಿಯಾಗಿ (ಬೆಂಗಳೂರಿನಲ್ಲಿ ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ) ಬಡ್ತಿ ನೀಡಲಾಗಿದೆ ಮತ್ತು ಕೇಂದ್ರ ಶ್ರೇಣಿಯ ಐಜಿಪಿ ಎಂ ಚಂದ್ರಶೇಖರ್ ಅವರನ್ನು ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿ ನಿಯೋಜಿಸಲಾಗಿದೆ.
ಎನ್ ಸತೀಶ್ ಕುಮಾರ್, ಐಜಿಪಿ (ಉತ್ತರ ಶ್ರೇಣಿ), ಐಜಿಪಿ (ಈಶಾನ್ಯ ವ್ಯಾಪ್ತಿ) ಆಗಿ ನೇಮಕಗೊಂಡಿದ್ದಾರೆ. ಬೆಂಗಳೂರಿನ ಡಿಐಜಿ ಶ್ರೇಣಿಯ ಜಂಟಿ ಆಯುಕ್ತ ರಾಮನ್ ಗುಪ್ತಾ ಅವರನ್ನು ಉತ್ತರ ವಲಯದ ಐಜಿಪಿಯಾಗಿ ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ. ಸಿಐಡಿ ಡಿಐಜಿ ಬಿಆರ್ ರವಿಕಾಂತೇಗೌಡ ಅವರನ್ನು ಐಜಿಪಿಯಾಗಿ ಕೇಂದ್ರ ವಲಯಕ್ಕೆ ಬಡ್ತಿ ನೀಡಲಾಗಿದೆ.
ಡಿಐಜಿ (ಬಳ್ಳಾರಿ ವ್ಯಾಪ್ತಿ) ಬಿಎಸ್ ಲೋಕೇಶ್ ಕುಮಾರ್ ಅವರಿಗೆ ಬಡ್ತಿ ನೀಡಿ ಅದೇ ವ್ಯಾಪ್ತಿಯ ಐಜಿಪಿಯಾಗಿ ನಿಯೋಜನೆ ಮಾಡಲಾಗಿದೆ.
2009ರ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳಾದ ಡಾ.ಶರಣಪ್ಪ ಎಸ್‌ಡಿ, ಎಂಎನ್ ಅನುಚೇತ್, ರವಿ ಡಿ ಚನ್ನಣ್ಣನವರ್ ಮತ್ತು ಬಿ ರಮೇಶ್ ಸೇರಿದಂತೆ ಐವರು ಅಧಿಕಾರಿಗಳು ಡಿಐಜಿಯಾಗಿ ಬಡ್ತಿ ಪಡೆದು ಅದೇ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ.