ಡ್ರಗ್ಸ್ ಮಾರಾಟ ಜಾಲ ಭೇದಿಸಿದ ಸಿಸಿಬಿ: ಕುಖ್ಯಾತ ರೌಡಿ ಮಂಡಿ ಇಮ್ರಾನ್ ಸೇರಿ ಮೂವರ ಬಂಧನ
ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಕುಖ್ಯಾತ ರೌಡಿ ಇಮ್ರಾನ್ ಅಲಿಯಾಸ್ ಮಂಡಿ ಇಮ್ರಾನ್ ಸೇರಿ ಮೂವರನ್ನು ಬಂಧಿಸಿದೆ.
Published: 03rd January 2023 04:51 PM | Last Updated: 03rd January 2023 04:51 PM | A+A A-

ಡ್ರಗ್ಸ್ ಮಾರಾಟ ಜಾಲ ಭೇದಿಸಿದ ಸಿಸಿಬಿ
ಬೆಂಗಳೂರು: ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ಕುಖ್ಯಾತ ರೌಡಿ ಇಮ್ರಾನ್ ಅಲಿಯಾಸ್ ಮಂಡಿ ಇಮ್ರಾನ್ ಸೇರಿ ಮೂವರನ್ನು ಬಂಧಿಸಿದೆ.
ಇಮ್ರಾನ್ ಅಲಿಯಾಸ್ ಮಂಡಿ ಇಮ್ರಾನ್, ಶಬಾಜ್ ಖಾನ್ ಹಾಗೂ ಸೈಯದ್ ಯಾರಬ್ ಅಲಿಯಾಸ್ ಯಾರಬ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ. ಬಂಧಿತರಿಂದ 3 ಲಕ್ಷ ಮೌಲ್ಯದ 25 ಗ್ರಾಂ ಎಂಡಿಎಂಎ ಕ್ರಿಸ್ಟಲ್, 22 ಎಲ್.ಎಸ್.ಡಿ ಸ್ಟ್ರೀಪ್ಸ್, 1 ಕೆ.ಜಿ ಗಾಂಜಾ, ಎರಡು ಮೊಬೈಲ್ ಗಳು, ಪ್ಯಾಕೇಟ್ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ಗ್ರಾಹಕನಿಗೆ ರೂ.42 ಸಾವಿರ ಪಾವತಿಸಿ: ಫ್ಲಿಪ್ ಕಾರ್ಟ್'ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ
ಆಡುಗೋಡಿ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿರುವ ಆರೋಪಿ ಮಂಡಿ ಇಮ್ರಾನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದು ಸಹಚರರ ಗುಂಪುಕಟ್ಟಿಕೊಂಡು ಜೆ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಬ್ಬ ರೌಡಿಯಿಂದ ಮಾದಕವಸ್ತುಗಳನ್ನು ಖರೀದಿಸಿ ಅಪ್ರಾಪ್ತ ಯುವಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಾ ಅಕ್ರಮ ಹಣ ಗಳಿಕೆಯಲ್ಲಿ ತೊಗಿರುವುದಲ್ಲೇ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.