ಗ್ರಾಹಕನಿಗೆ 42 ಸಾವಿರ ರೂ. ಪಾವತಿಸಿ: ಫ್ಲಿಪ್ ಕಾರ್ಟ್'ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೂಚನೆ
ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್‌ಗೆ ವಾರ್ಷಿಕ ಶೇ 12 ಬಡ್ಡಿಯೊಂದಿಗೆ ದೂರುದಾರರಿಗೆ ರೂ 12,499 ಮರುಪಾವತಿ ಮಾಡುವಂತೆ ಸೂಚನೆ ನೀಡಿದೆ.
Published: 03rd January 2023 11:13 AM | Last Updated: 03rd January 2023 06:43 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಇಂಟರ್ನೆಟ್ ಪ್ರೈವೇಟ್ ಲಿಮಿಟೆಡ್‌ಗೆ ವಾರ್ಷಿಕ ಶೇ 12 ಬಡ್ಡಿಯೊಂದಿಗೆ ದೂರುದಾರರಿಗೆ ರೂ 12,499 ಮರುಪಾವತಿ ಮಾಡುವಂತೆ ಸೂಚನೆ ನೀಡಿದೆ.
ಜನವರಿ 15, 2022 ರಂದು 12,499 ರೂ ಬೆಲೆಯ ಮೊಬೈಲ್ ಫೋನ್ ವೊಂದನ್ನು ರಾಜಾಜಿನಗರದ ನಿವಾಸಿ ಜೆ.ದಿವ್ಯಶ್ರೀ ಎಂಬುವವರು ಬುಕ್ ಮಾಡಿದ್ದಾರೆ. ಮರುದಿನ ಮೊಬೈಲ್ ಫೋನ್ ಡೆಲಿವರಿಯಾಗಬೇಕಿತ್ತು. ಆದರೆ, ನಿರೀಕ್ಷಿತ ದಿನಾಂಕದಂದು ಫೋನ್ ಗ್ರಾಹಕನನ್ನು ತಲುಪಿಲ್ಲ. ದೂರುದಾರರು ಹಲವಾರು ಬಾರಿ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದ್ದರೂ ಅದರಿಂದ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ದೂರನ್ನು ಪರಿಶೀಲನೆ ನಡೆಸಿದ ಆಯೋಗವು, ಇದೀಗ ವಾರ್ಷಿಕ ಶೇ 12 ಬಡ್ಡಿಯೊಂದಿಗೆ ದೂರುದಾರರಿಗೆ ರೂ 12,499 ಪಾವತಿ ಮಾಡುವಂತೆ ಫ್ಲಿಪ್ ಕಾರ್ಟ್'ಗೆ ಸೂಚನೆ ನೀಡಿದೆ.
ಅಧ್ಯಕ್ಷೆ ಎಂ.ಶೋಭಾ ಹಾಗೂ ಸದಸ್ಯೆ ರೇಣುಕಾದೇವಿ ದೇಶಪಾಂಡೆ ಅವರನ್ನೊಳಗೊಂಡ ಆಯೋಗವು ರಾಜಾಜಿನಗರದ ನಿವಾಸಿ ಜೆ.ದಿವ್ಯಶ್ರೀ ಸಲ್ಲಿಸಿದ್ದ ದೂರನ್ನು ಭಾಗಶಃ ಪುರಸ್ಕರಿಸಿ ಈ ಆದೇಶ ನೀಡಿದೆ.
ಇದನ್ನೂ ಓದಿ: ಕನ್ನಡ ಮಾತಾಡದ ಡೆಲಿವರಿ ಬಾಯ್‌ಗಳಿಂದ ತೊಂದರೆ: ಸ್ವಿಗ್ಗಿಗೆ ಆಹಾರ, ನಾಗರಿಕ ಸರಬರಾಜು ಇಲಾಖೆ ಪತ್ರ!
“ಫ್ಲಿಪ್‌ಕಾರ್ಟ್ ದೂರುದಾರರಿಂದ ಸಂಪೂರ್ಣ ಮೊತ್ತವನ್ನು ಸ್ವೀಕರಿಸಿದೆ. ಆದರೆ, ದೂರುದಾರರು ಬುಕ್ ಮಾಡಿದ ಮೊಬೈಲ್ ಫೋನ್ ಅನ್ನು ತಲುಪಿಸುವಲ್ಲಿ ವಿಫಲವಾಗಿದೆ. ಪ್ರಕರಣ ಸಂಬಂಧ ನೋಟಿಸ್ ನೀಡಿದ್ದರು, ವಿಚಾರಣೆಗೆ ಫ್ಲಿಪ್ ಕಾರ್ಟ್ ಹಾಜರಾಗಿಲ್ಲ. ಆ ಮೂಲಕ ಅವರು ಸೇವೆಯ ಕೊರತೆ, ನಿರ್ಲಕ್ಷ್ಯ ಮತ್ತು ಅನ್ಯಾಯದ ವ್ಯಾಪಾರ ಮಾಡಿರುವುದು ಕಂಡು ಬಂದಿದೆ ಆಯೋಗವು ಆದೇಶದಲ್ಲಿ ತಿಳಿಸಿದೆ.
ನಿರೀಕ್ಷಿತ ಡೆಲಿವರಿ ದಿನಾಂಕದೊಳಗೆ ಮೊಬೈಲ್ ಫೋನ್ ವಿತರಣೆಯಾಗದ ಕಾರಣ ದೂರುದಾರರು ಮಾನಸಿಕ ಯಾತನೆ ಮತ್ತು ಆರ್ಥಿಕ ನಷ್ಟವನ್ನು ಅನುಭವಿಸಿದ್ದಾರೆ. ಕಂತುಗಳನ್ನು ಪಾವತಿಸುವುದು ಹೊರೆಯಾಗಿ ಮಾರ್ಪಟ್ಟಿದೆ. ಆದ್ದರಿಂದ, ಫ್ಲಿಪ್ ಕಾರ್ಟ್ ಬಡ್ಡಿಯೊಂದಿಗೆ 12,499 ರೂ ಮರುಪಾವತಿಗೆ ಅರ್ಹರಾಗಿದ್ದಾರೆ, ದೂರುದಾರನಿಗೆ ಫ್ಲಿಪ್ ಕಾರ್ಟ್ ರೂ 20,000 ಪರಿಹಾರ ಮತ್ತು ರೂ 10,000 ಕಾನೂನು ವೆಚ್ಚಗಳು ಸೇರಿ ರೂ.42 ಪಾವತಿ ಮಾಡಬೇಕೆಂದು ಆಯೋಗವು ಸೂಚಿಸಿದೆ.