ಕಳೆದ ವರ್ಷ ಪ್ರವಾಹ ಪರಿಸ್ಥಿತಿಯಿಂದ ಪಾಠ ಕಲಿತ ಬಿಬಿಎಂಪಿ: ಚರಂಡಿಗಳಲ್ಲಿ ಹೂಳೆತ್ತುವ ಕಾರ್ಯದಲ್ಲಿ ಚುರುಕು!

ಮಹದೇವಪುರ ವಲಯದಲ್ಲಿ ಕಳೆದ ವರ್ಷ ಎದುರಾಗಿದ್ದ ಪ್ರವಾಹ ಪರಿಸ್ಥಿತಿಯಿಂದ ಪಾಠ ಕಲಿತಿರುವ ಬಿಬಿಎಂಪಿ, ಭವಿಷ್ಯದಲ್ಲಿ ಅಂತಹ ಪರಿಸ್ಥಿತಿಗಳು ಉಂಟಾಗತಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
ಚರಂಡಿಯಲ್ಲಿ ಹೂಳು ತೆಗೆಯುತ್ತಿರುವ ಬಿಬಿಎಂಪಿ ಸಿಬ್ಬಂದಿ.
ಚರಂಡಿಯಲ್ಲಿ ಹೂಳು ತೆಗೆಯುತ್ತಿರುವ ಬಿಬಿಎಂಪಿ ಸಿಬ್ಬಂದಿ.

ಬೆಂಗಳೂರು: ಮಹದೇವಪುರ ವಲಯದಲ್ಲಿ ಕಳೆದ ವರ್ಷ ಎದುರಾಗಿದ್ದ ಪ್ರವಾಹ ಪರಿಸ್ಥಿತಿಯಿಂದ ಪಾಠ ಕಲಿತಿರುವ ಬಿಬಿಎಂಪಿ, ಭವಿಷ್ಯದಲ್ಲಿ ಅಂತಹ ಪರಿಸ್ಥಿತಿಗಳು ಉಂಟಾಗತಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಇದರಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯದ ಪ್ರತಿ ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಚರಂಡಿಗಳಲ್ಲಿ ಹೂಳು ತೆಗೆಯುವ ಪ್ರಕ್ರಿಯೆಯನ್ನು ತೀವ್ರಗೊಳಿಸಿದೆ.

ಮೂಲಗಳ ಪ್ರಕಾರ, ಬಿಬಿಎಂಪಿ ಮಳೆನೀರು ಚರಂಡಿ ವಿಭಾಗದ ಸಿಬ್ಬಂದಿ ಡಿಸೆಂಬರ್ 2022 ರಲ್ಲಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆಂದು ತಿಳಿದುಬಂದಿದೆ.

''ಬಿಬಿಎಂಪಿ ನಿತ್ಯ ನಿರ್ವಹಣೆಯ ಕಾರ್ಯವನ್ನು ಮಾಡುತ್ತಿದೆ. ನೀರು ಮುಕ್ತವಾಗಿ ಹರಿಯುವುದನ್ನು ಖಚಿತಪಡಿಸಿಕೊಳ್ಳಲು ಚರಂಡಿಗಳಲ್ಲಿನ ಹೂಳು ತೆರವುಗೊಳಿಸುವುದು ಮತ್ತು ಚರಂಡಿಯಲ್ಲಿ ಬೆಳೆದ ಸಸ್ಯಗಳನ್ನು ತೆಗೆದು ಹಾಕುವ ಕೆಲವನ್ನು ಮಾಡುತ್ತಿದೆ. ಈ ಕೆಲಸವನ್ನು ಆದಷ್ಟು ಬೇಗ ಮಾಡಿದರೆ, ಪ್ರಮುಖ ಸಮಸ್ಯೆಗಳ ಗುರುತಿಸಲು ಹಾಗೂ ಅವುಗಳನ್ನು ಸರಿಪಡಿಸಲು ಸಹಾಯವಾಗುತ್ತದೆ ಎಂದು ಬಿಬಿಎಂಪಿಯ ಮಹದೇವಪುರ ವಲಯದ ವಿಶೇಷ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಹೇಳಿದ್ದಾರೆ.

ಹೂಳು ತೆರವಿಗೆ ಟ್ರ್ಯಾಕ್ಟರ್‌ಗಳನ್ನೂ ಕೂಡ ಬಿಬಿಎಂಪಿ ನಿಯೋಜಿಸಿದೆ. ಹೂಳು ಸುರಿಯಲು ಬೊಮ್ಮನಹಳ್ಳಿ ಮತ್ತು ಮಿಟಗಾನಹಳ್ಳಿಯಲ್ಲಿ ಹೊಂಡಗಳನ್ನು ಗುರುತಿಸಿದ್ದೇವೆ ಎಂದು ಮಹದೇವಪುರ ವಲಯದ ಎಸ್‌ಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್ ಮಾಲತಿ ತಿಳಿಸಿದ್ದಾರೆ.

"ಹೂಳು ತೆಗೆಯುವವರು ಮತ್ತು ಅವುಗಳನ್ನು ಸಂಗ್ರಹಿಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ಗಳ ನಡುವೆ ಯಾವುದೇ ಸಮನ್ವಯವಿಲ್ಲ. ತಿಂಗಳುಗಟ್ಟಲೆ ಅಲ್ಲದಿದ್ದರೂ ವಾರಗಟ್ಟಲೆ ರಸ್ತೆಯುದ್ದಕ್ಕೂ ಹೂಳು ಬಿಡಲಾಗುತ್ತಿದೆ. ಮಳೆಯಾದರೆ ಚರಂಡಿಗೆ ಮತ್ತೆ ಹೂಳು ಹರಿದು ಹೋಗುತ್ತದೆ. ಗುತ್ತಿಗೆ ನೀಡಲು ಬಿಬಿಎಂಪಿ ಹೆಚ್ಚು ಆಸಕ್ತಿ ವಹಿಸಿದೆ. ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ’ ಎಂದು ಬೆಂಗಳೂರಿನ ನಾಗರಿಕರ ಕಾರ್ಯಸೂಚಿಯ ಸಂಚಾಲಕ ಸಂದೀಪ್ ಅನಿರುಧನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಮಹದೇವಪುರದ ಆಮ್ ಆದ್ಮಿ ಪಕ್ಷದ ಸದಸ್ಯ ಅಶೋಕ್ ಮೃತ್ಯುಂಜಯ ಮಾತನಾಡಿ, ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ. "ಗುತ್ತಿಗೆದಾರ ಯಾರು ಎಂಬುದು ನಮಗೆ ತಿಳಿದಿಲ್ಲ. ಕಾಮಗಾರಿ ಆರಂಭದ ದಿನಾಂಕ, ಪೂರ್ಣಗೊಂಡ ದಿನಾಂಕ, ಕಾಮಗಾರಿ ಅನುಷ್ಠಾನಗೊಳಿಸುತ್ತಿರುವ ಸಂಸ್ಥೆಯ ಹೆಸರು ಹೀಗೆ ಪ್ರತಿಯೊಂದು ವಿವರಗಳನ್ನು ಪಟ್ಟಿ ಮಾಡುವ ಬ್ಯಾನರ್‌ಗಳನ್ನು ಬಿಬಿಎಂಪಿ ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com