ಕಲಬುರಗಿ ಅಪಹರಣ ಪ್ರಕರಣ: ಬಾಲಕನ ರಕ್ಷಣೆ, ಇಬ್ಬರು ಆರೋಪಿಗಳ ಬಂಧನ

ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಆಟೋದೊಳಗೆ ಬಲವಂತವಾಗಿ ಎಳೆದೊಯ್ದು ಅಪಹರಿಸಿದ್ದ ಪ್ರಕರಣ ಸಂಬಂಧ ಪೊಲೀಸರು ಬಾಲಕನನ್ನು ರಕ್ಷಣೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಶಾಲೆಗೆ ಹೋಗುತ್ತಿದ್ದ ಬಾಲಕನನ್ನು ಆಟೋದೊಳಗೆ ಬಲವಂತವಾಗಿ ಎಳೆದೊಯ್ದು ಅಪಹರಿಸಿದ್ದ ಪ್ರಕರಣ ಸಂಬಂಧ ಪೊಲೀಸರು ಬಾಲಕನನ್ನು ರಕ್ಷಣೆ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರುಣ್ ಭಜಂತ್ರಿ ಮತ್ತು ಲಕ್ಷ್ಮಣ ಭಜಂತ್ರಿ ಬಂಧಿತ ಆರೋಪಿಗಳಾಗಿದ್ದುಾರೆ. ಕಲಬುರಗಿ ನಗರದ ಸಂತ್ರಸವಾಡಿ ನಿವಾಸಿಗಳಾಗಿದ್ದಾರೆ.

ಸರ್ಕಾರಿ ಶಾಲಾ ಶಿಕ್ಷಕನ ಮಗ ಸುರ್ಶನ ಎಂಬ ಬಾಲಕನನ್ನು ಸಿದ್ದೇಶ್ವರ ಕಾಲೋನಿಯಲ್ಲಿ ಅಪಹರಣ ಮಾಡಿ, ರೂ.10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮಾಹಿತಿ ತಿಳಿದ ಪೊಲೀಸರು ಕಾರ್ಯಾಚರಣೆಗೆ ನಡೆಸಿ ಬಾಲಕನ್ನು ರಕ್ಷಿಸಿ, ನಿನ್ನೆ ತಡರಾತ್ರಿ ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಪಾಳಾ ಗ್ರಾಮದ ಶಾಲೆಯೊಂದರ ಬಳಿ ಹಣವನ್ನು ಬ್ಯಾಗ್‌ನಲ್ಲಿರಿ ಇಡುವಂತೆ ಬಾಲಕನಿಗೆ ಅಪಹರಣಕಾರರು ಹೇಳಿದ್ದರು. ಆ ನಂತರ ಬಾಲಕನ ತಂದೆ ಅಪಹರಣದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಾರ್ಯಾಚರಣೆಗೆ ಇಳಿದರು. ಈ ವಿಚಾರ ತಿಳಿಯುತ್ತಿದ್ದಂತೆ ಆರೋಪಿಗಳು ಬಾಲಕನನ್ನು ಪಾಳಾ ಗ್ರಾಮದ ಹೊರವಲಯದಲ್ಲಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದರು.

ಈ ವೇಳೆ ಬಾಲಕ ಓಡಿ ಬರುತ್ತಿರುವುದನ್ನು ನೋಡಿದ ವ್ಯಕ್ತಿಯೊಬ್ಬರೂ ಶಾಲಾ ಸಮವಸ್ತ್ರ ನೋಡಿ ಶಿಕ್ಷಕನಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮಗ ಇರುವ ಸ್ಥಳಕ್ಕೆ ಶಿಕ್ಷಕ ಹಾಗೂ ಪೊಲೀಸರು ಹೋಗಿ ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com