ಅಪಘಾತಗಳ ನಗರಿ ಎಂಬ ಕುಖ್ಯಾತಿ ಪಾತ್ರವಾದ ಸಿಲಿಕಾನ್‍ಸಿಟಿ?: 2022ರಲ್ಲಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಅಪಘಾತ!

ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರದಲ್ಲಿ ಜನರಿಗಿಂತಾ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ. ಜೊತೆಯಲ್ಲೇ ಅಪಘಾತಗಳ ಪ್ರಮಾಣವೂ ವಿಪರೀತವಾಗುತ್ತಿದೆ. 2017ಕ್ಕೆ ಹೋಲಿಸಿದರೆ 2022ರಲ್ಲಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿರುವುದು ವರದಿಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಮಹಾ ನಗರದಲ್ಲಿ ಜನರಿಗಿಂತಾ ವಾಹನಗಳ ಸಂಖ್ಯೆಯೇ ಹೆಚ್ಚಾಗುತ್ತಿದೆ. ಜೊತೆಯಲ್ಲೇ ಅಪಘಾತಗಳ ಪ್ರಮಾಣವೂ ವಿಪರೀತವಾಗುತ್ತಿದೆ. 2017ಕ್ಕೆ ಹೋಲಿಸಿದರೆ 2022ರಲ್ಲಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿರುವುದು ವರದಿಗಳಿಂದ ತಿಳಿದುಬಂದಿದೆ.

2022 ರಲ್ಲಿ ಸಾಂಕ್ರಾಮಿಕ ರೋಗದ ನಂತರ ಜನ ಜೀವನವು ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದಂತೆ, ಬೆಂಗಳೂರಿನಲ್ಲಿ 748 ಮಾರಣಾಂತಿಕ ರಸ್ತೆ ಅಪಘಾತಗಳು ಸಂಭಿಸಿದ್ದು, ಈ ಅಪಘಾತದಲ್ಲಿ 777 ಸಾವುಗಳು ಸಂಭವಿಸಿದೆ ಎಂದು ತಿಳಿದುಬಂದಿದೆ.

2017ಕ್ಕೆ ಹೋಲಿಕೆ ಮಾಡಿದರೆ 2022ರಲ್ಲಿ ಅತೀ ಹೆಚ್ಚು ಅಪಘಾತಗಳು ಸಂಭವಿಸಿರುವುದು ಇದರಿಂದ ತಿಳಿದುಬಂದಿದೆ.

2020 ಮತ್ತು 2021ರಲ್ಲಿ ಸಾಂಕ್ರಾಮಿಕ ರೋಗ ಕೊರೋನಾ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ಡೌನ್ ವಿಧಿಸಿದ್ದರಿಂದ ಈ ಅವಧಿಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಿದ್ದವು ಎಂದು ವರದಿಗಳು ತಿಳಿವೆ.

2016ರಲ್ಲಿ 793 ಸಾವುಗಳು ಸಂಭವಿಸಿತ್ತು. ಇದಾದ 6 ವರ್ಷಗಳ ಬಳಿಕ ಸಾವಿನ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ. 2017ರಲ್ಲಿ 609, 2018ರಲ್ಲಿ 661, 2019 ರಲ್ಲಿ 766, 2020ರಲ್ಲಿ 622, 2021ರಲ್ಲಿ 618 ಸಾವುಗಳು ಸಂಭವಿಸಿತ್ತು.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂಎ ಸಲೀಂ ಅವರು, ಅಪಘಾತ ಸಂಖ್ಯೆಗಳು 2019 ರಲ್ಲಿನಂತೆಯೇ ಇವೆ. ನಗರದಲ್ಲಿ 1.07 ಕೋಟಿ ವಾಹನಗಳಿದ್ದು, ಈ ವಾಹನಗಳ ಸಂಖ್ಯೆಗೆ ಹೋಲಿಸಿದರೆ ಸಾವುಗಳ ಸಂಖ್ಯೆ ಕಡಿಮೆಯಿದೆ ಎಂದು ಹೇಳಿದ್ದಾರೆ.

ಈ ವರ್ಷ ಕಟ್ಟುನಿಟ್ಟಿನ ಟ್ರಾಫಿಕ್ ಜಾರಿ ಕ್ರಮಗಳ ಕುರಿತು ಚಿಂತನೆ ನಡೆಸಲಾಗುತ್ತಿದೆ. “ಹೆಲ್ಮೆಟ್ ಇಲ್ಲದೆ ಸವಾರಿ, ಕುಡಿದು ವಾಹನ ಚಾಲನೆ ಮತ್ತು ಅತಿ ವೇಗದ ವಿರುದ್ಧ ಕ್ರಮವು ಈ ವರ್ಷ ಮತ್ತಷ್ಟು ತೀವ್ರಗೊಳ್ಳಲಿದೆ. ಇವುಗಳು ಸಾಕಷ್ಟು ಅಪಘಾತ ಪ್ರಕರಣಗಳಿಗೆ ಮುಖ್ಯ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ.

ಕೆಲವು ಸಂದರ್ಭಗಳಲ್ಲಿ, ಮಾರಣಾಂತಿಕ ಅಪಘಾತಗಳು ನಗರದ ರಸ್ತೆಗಳ ಕಳಪೆ ಗುಣಮಟ್ಟಕ್ಕೂ ಕಾರಣವಾಗಬಹುದು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com