ಡೇಟಿಂಗ್ ಆ್ಯಪ್ ಮೂಲಕ ಪರಿಚಯ: ಯುವಕನನ್ನು ದೋಚಿದ ವೈದ್ಯಕೀಯ ವಿದ್ಯಾರ್ಥಿ, ವಿಧವೆ ಮಹಿಳೆ!
ಬೆಂಗಳೂರು: ಡೇಟಿಂಗ್ ಆ್ಯಪ್‌ಗೆ ವ್ಯಸನಿಯಾಗಿದ್ದ 26 ವರ್ಷದ ಯುವಕನ ಮೇಲೆ ಅರೆವೈದ್ಯಕೀಯ ವಿದ್ಯಾರ್ಥಿ ಸೇರಿದಂತೆ ಇಬ್ಬರು ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ.
ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದ ಮಹಿಳೆಯನ್ನು ಭೇಟಿಯಾಗಲು ಯುವಕ ಬಯಸಿದ ಬಳಿಕ ಆತನನ್ನು ದೋಚಲು ಆರೋಪಿಗಳು ಬಲೆ ಬೀಸಿದ್ದು ಇಬ್ಬರನ್ನು ಬಂಧಿಸಲಾಗಿದೆ.
ಹೆಸರಘಟ್ಟದ ಕೊಡಿಗೇತಿರುಮಲಾಪುರ ನಿವಾಸಿಯಾಗಿರುವ ಸಂತ್ರಸ್ತ ಹಫೀಜ್-ಉಲ್ಲಾ-ಖಾನ್ ಆರೋಪಿ ಮಹಿಳೆ 31 ವರ್ಷದ ವಿಧವೆ ಲಕ್ಷ್ಮಿ ಪ್ರಿಯಾಳನ್ನು ಭೇಟಿಯಾಗಿದ್ದಾನೆ. ಸಂತ್ರಸ್ತೆನ ಜೊತೆಯಲ್ಲಿದ್ದಾಗ ಅದನ್ನು ವಿಡಿಯೋ ಮಾಡಿ, ನಂತರ ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿಯಾಗಿರುವ ಮತ್ತೊಬ್ಬ ಆರೋಪಿ 22 ವರ್ಷದ ಸುನೀಲ್ ಕುಮಾರ್ ಎಂಬಾತನಿಗೆ ಕರೆ ಮಾಡಿದ್ದಾಳೆ. ಇಬ್ಬರೂ ಬ್ಲ್ಯಾಕ್‌ಮೇಲ್ ಮಾಡಿ ಆತನ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ಮೊಬೈಲ್‌ನೊಂದಿಗೆ ಪರಾರಿಯಾಗಿದ್ದರು.
ಆರೋಪಿಗಳು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತೋಟದಗುಡ್ಡ ನಿವಾಸಿಗಳಾಗಿದ್ದಾರೆ. ಅಂತಹ ಡೇಟಿಂಗ್ ಆ್ಯಪ್‌ಗಳನ್ನು ಬಳಸುವ ಕುಮಾರ್, ಮಹಿಳೆಯಂತೆ ಪೋಸ್ ಕೊಟ್ಟು ಸಂತ್ರಸ್ತೆನ ಜೊತೆ ಚಾಟ್ ಮಾಡಲು ಆರಂಭಿಸಿದ. ಕಳೆದ ಬುಧವಾರ ಖಾನ್ ತನ್ನನ್ನು ಭೇಟಿಯಾಗಲು ವ್ಯಕ್ತಪಡಿಸಿದಾಗ ಕುಮಾರ್ ತಮ್ಮ ಸಹೋದರಿಯನ್ನು ಕಳುಹಿಸುವುದಾಗಿ ಭರವಸೆ ನೀಡಿದ್ದನು. ಅದರಂತೆ ಪ್ರಿಯಾ ಹಫೀಜ್ ಉಲ್ಲಾ ಖಾನ್ ನನ್ನು ಭೇಟಿಯಾಗಿದ್ದು ಅಂದು ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಆತನನ್ನು ಕರೆದುಕೊಂಡು ಮನೆಗೆ ಹೋಗಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರಸದ ವಿಡಿಯೋ ಮಾಡಿಕೊಂಡ ನಂತರ ಅಲ್ಲಿಂದ ಪ್ರಿಯಾ ಹೊರಟು ಕುಮಾರ್ ಜೊತೆ 10 ನಿಮಿಷದ ನಂತರ ಹಿಂತಿರುಗಿದಳು. 'ಇಬ್ಬರೂ ಪೊಲೀಸರಿಗೆ ವಿಡಿಯೋ ತೋರಿಸುವುದಾಗಿ ಖಾನ್‌ಗೆ ಬ್ಲಾಕ್‌ಮೇಲ್ ಮಾಡಿ, ಚಿನ್ನಾಭರಣ, ನಗದು ಹಾಗೂ ಮೊಬೈಲ್ ದೋಚಿದ್ದಾರೆ. ಅಲ್ಲದೆ ಪೊಲೀಸರ ಬಳಿ ಹೋಗದಂತೆ ಎಚ್ಚರಿಕೆ ನೀಡಿ ಆರೋಪಿಗಳು ಪರಾರಿಯಾಗಿದ್ದರು. ಆದರೆ ಖಾನ್ ದೂರು ದಾಖಲಿಸಿದ್ದನು ಎಂದು ಅಧಿಕಾರಿ ಹೇಳಿದರು. ಆರೋಪಿಗಳಿಂದ 2.2 ಲಕ್ಷ ಮೌಲ್ಯದ ಚಿನ್ನಾಭರಣಗಳು, ಮೊಬೈಲ್ ಫೋನ್ ಮತ್ತು ಎರಡು ದ್ವಿಚಕ್ರವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ