ಮೇಕೆದಾಟು ಯೋಜನೆ: ಸುಪ್ರೀಂಕೋರ್ಟ್ ಆದೇಶದಂತೆ ನಡೆಯುತ್ತೇವೆಂದ ಕಾವೇರಿ ಪ್ರಾಧಿಕಾರ

ಮೇಕೆದಾಟು ಯೋಜನೆ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ನಡೆಯುತ್ತೇವೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯುಎಂಎ) ಮಂಗಳವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಾರೈಕಲ್: ಮೇಕೆದಾಟು ಯೋಜನೆ ಸಂಬಂಧ ಸುಪ್ರೀಂಕೋರ್ಟ್ ಆದೇಶದಂತೆ ನಡೆಯುತ್ತೇವೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯುಎಂಎ) ಮಂಗಳವಾರ ಹೇಳಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತಂಡವು ನಿನ್ನೆಯಷ್ಟೇ ಪುದುಚೇರಿ ಮತ್ತು ತಮಿಳುನಾಡಿನ ಪಿಡಬ್ಲ್ಯೂಡಿ ಅಧಿಕಾರಿಗಳ ಜೊತೆಯಲ್ಲಿ ಕಾರೈಕಲ್ ಮತ್ತು ತಮಿಳುನಾಡು ನಡುವಿನ ಗಡಿಯಲ್ಲಿರುವ ನದಿಗಳ ಕೇಂದ್ರ ಜಲ ಆಯೋಗದ ಗೇಜಿಂಗ್ ಸ್ಟೇಷನ್‌ ಮತ್ತು ಇತರೆ ಪ್ರದೇಶಗಳನ್ನು ಪರಿಶೀಲನೆ ನಡೆಸಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಸೌಮಿತ್ರ ಕುಮಾರ್ ಹಾಲ್ದಾರ್ ಅವರು,ಕರ್ನಾಟಕ ಸರ್ಕಾರವು ಅಣೆಕಟ್ಟು ನಿರ್ಮಿಸಲು ಪ್ರಸ್ತಾಪವನ್ನು ಮುಂದಿಟ್ಟಿದೆ. ತಮಿಳುನಾಡು ಸರ್ಕಾರವು ಅದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ಹೀಗಾಗಿ ಸುಪ್ರೀಂಕೋರ್ಟ್ ನೀಡುವ ಆದೇಶದಂತೆ ನಡೆಯಲು ನಾವು ನಿರ್ಧರಿಸಿದ್ದೇವೆ. ಒಂದು ವೇಳೆ ಸುಪ್ರೀಂಕೋರ್ಟ್ ನಿರ್ಧಾರ ನಮ್ಮ ಕೈಗೆ ನೀಡಿದ್ದೇ ಆಧರೆ, ನಾವು ಈ ಬಗ್ಗೆ ಚರ್ಚೆ ನಡೆಸುತ್ತೇವೆಂದು ಹೇಳಿದ್ದಾರೆ.

ನ್ಯಾಯಾಲಯ ನಿರ್ಧಾರ ಅಧಿಕಾರ ನೀಡಿದ್ದೇ ಆದರೆ, ಸಿಡಬ್ಲ್ಯುಎಂಎ ಅಣೆಕಟ್ಟು ತೆರೆಯಲು ಕರ್ನಾಟಕಕ್ಕೆ ಅನುಮತಿ ನೀಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ನದಿಗಳಿಗೆ ಸಂಬಂಧಿಸಿದಂತೆ ಸಿಡಬ್ಲ್ಯೂಸಿ ಮಾಪನ ಕೇಂದ್ರಗಳ ಮೇಲಿನ ಕುಂದುಕೊರತೆಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಸಿಡಬ್ಲ್ಯುಎಂಎ-ಸಿಡಬ್ಲ್ಯೂಆರ್‌ಸಿ ತಂಡ ಕಾರೈಕಲ್ ರೈತರ ಅಹವಾಲು ಆಲಿಸಿತು. ಈ ವೇಳೆ ಕಾರೈಕಲ್ ಪ್ರಾದೇಶಿಕ ರೈತರ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿ ಪಿ ರಾಜೇಂದ್ರನ್ ಮಾತನಾಡಿ, ''ಕಾವೇರಿ ನದಿ ನಿರ್ವಹಣೆಯನ್ನು ಸಿಡಬ್ಲ್ಯುಎಂಎ ನಿಯಂತ್ರಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಕರ್ನಾಟಕವು ಪ್ರತಿ ತಿಂಗಳು ನಿಗದಿಪಡಿಸಿದ ನೀರನ್ನು ಹಂಚಿಕೆ ಮಾಡುತ್ತಿದೆಯೇ, ರೈತರು ಕುರುವಾಯಿ ಕೃಷಿಗೆ ನೀರನ್ನು ಪಡೆಯುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com